ಸೋಮವಾರಪೇಟೆ, ಸೆ. ೨೩: ೨೦೨೦-೨೧ನೇ ಸಾಲಿನಲ್ಲಿ ಸಂಘ ಉತ್ತಮ ಸೇವೆ ನೀಡುವುದರೊಂದಿಗೆ ರೂ. ೮೨.೮೩ ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೨೦% ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಹೆಚ್. ವಿಶ್ವನಾಥರಾಜೇ ಅರಸ್ ಅವರು ತಿಳಿಸಿದರು.

ಐಗೂರು ಗ್ರಾಮದ ಪ್ರ‍್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸಂಘದಲ್ಲಿ ದಿನಾಂಕ ೩೧.೦೩.೨೦೨೨ಕ್ಕೆ ಒಟ್ಟು ೧೫೨೫ ಪೂರ್ಣ ಪಾಲು ಹೊಂದಿದ ಸದಸ್ಯರುಗಳು ಇದ್ದು ರೂ. ೨ ಕೋಟಿ ೬ ಲಕ್ಷಗಳ ಪಾಲು ಬಂಡವಾಳವಿರುತ್ತದೆ.

ಸAಘದ ಸದಸ್ಯರಿಗೆ ವರದಿ ಸಾಲಿನಲ್ಲಿ ರೂ. ೧೨೬.೯೬ ಕೋಟಿ ವಹಿವಾಟು ನಡೆಸಲಾಗಿದೆ ಹಾಗೂ ಸದಸ್ಯರಿಗೆ ಕೆ.ಸಿ.ಸಿ ಸಾಲ, ಸ್ವಸಹಾಯ ಗುಂಪು ಸಾಲ, ಜಾಮೀನು ಸಾಲ, ಆಭರಣ ಸಾಲ, ಗೊಬ್ಬರ ಸಾಲಗಳೂ ಒಟ್ಟು ರೂ. ೨೪ ಕೋಟಿ ೩೩ ಲಕ್ಷಗಳನ್ನು ವಿವಿಧ ರೀತಿಯ ಸಾಲಗಳಾಗಿ ನೀಡಿದ್ದು ಈ ಪೈಕಿ ನಮ್ಮ ಸಂಘದ ಸ್ವಂತ ಬಂಡವಾಳದಿAದ ರೂ. ೧೦ ಕೋಟಿ ೫೦ ಲಕ್ಷಗಳನ್ನು ವಿತರಿಸಲಾಗಿದೆ. ಹಾಗೂ ಸಂಘದಲ್ಲಿ ರೂ. ೧೦ ಕೋಟಿಗಳಷ್ಟು ಠೇವಣಿ ಇರುತ್ತದೆ. ಅಲ್ಲದೇ ಗೊಬ್ಬರ ವ್ಯಾಪಾರ ಹಾಗೂ ಮದ್ದುಗುಂಡು ವ್ಯಾಪಾರವನ್ನು ನಡೆಸಲಾಗುತ್ತಿದೆ. ಸದಸ್ಯರು ಸಂಘ ದೊಂದಿಗೆ ನಿಕಟ ಸಂಪರ್ಕವನ್ನಿರಿಸಿ ಕೊಂಡು, ತಾವು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿದಲ್ಲಿ ಇನ್ನೂ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ಹೇಳಿದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ ೨೦೨೧-೨೨ನೇ ಸಾಲಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಸಹಕಾರ ಸಂಘಗಳಿಗೆ ನೀಡುವ ಬಹುಮಾನ ಮತ್ತು ಪ್ರಶಸ್ತಿಯಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿಯೇ ಸಂಘವು ಪ್ರಥಮ ಬಹುಮಾನ ಪಡೆದಿರುತ್ತದೆ.

ಇದೇ ಸಂದರ್ಭ ಪ್ರಥಮವಾಗಿ ಕೆ.ಸಿ.ಸಿ ಸಾಲ ಮರುಪಾವತಿಸಿದ ಸಣ್ಣ ಹಾಗೂ ದೊಡ್ಡ ರೈತರಿಗೆ, ಹಾಗೂ ಸ್ವಸಹಾಯ ಗುಂಪುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ಎಸ್.ಎಸ್.ಎಲ್.ಸಿ., ಪಿಯುಸಿ, ಎಂ.ಬಿ.ಬಿ.ಎಸ್. ಇಂಜಿನಿಯ ರಿಂಗ್‌ನಲ್ಲಿ ಅತೀ ಹೆಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಹಾಸಭೆಯಲ್ಲಿ ಅಧ್ಯಕ್ಷ ಡಿ.ಹೆಚ್. ವಿಶ್ವನಾಥರಾಜೇ ಅರಸ್, ಉಪಾಧ್ಯಕ್ಷ ಕೆ.ಪಿ. ರೋಷನ್, ನಿರ್ದೇಶಕರುಗಳಾದ ಹೆಚ್.ಬಿ. ಶಿವ ಕುಮಾರ್, ಡಿ.ಎಸ್. ಚಂಗಪ್ಪ, ಎಲ್.ಎಂ. ರಾಜೇಶ್, ಡಿ.ಕೆ. ಪೂವಯ್ಯ, ಡಿ.ಸಿ. ಸಬಿತ, ಎಸ್.ಜಿ. ರಾಣಿ, ಬಿ.ಸಿ. ಸುನೀಲ್, ಹೆಚ್.ಜೆ. ಬಸಪ್ಪ, ಎಸ್.ಕೆ. ರಘು, ಎಂ.ಬಿ. ಕಿಶೋರ್, ಎಸ್.ಕೆ. ಲಕ್ಷö್ಮಣ ಹಾಗೂ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಎ. ಡಿಕ್ಕಿರಾಜು ಹಾಗೂ ಮೇಲ್ವಿಚಾರಕ ಎಸ್.ಪಿ. ಅಬ್ದುಲ್ ರಶೀದ್ ಉಪಸ್ಥಿತರಿದ್ದರು.