ಶನಿವಾರಸAತೆ, ಸೆ. ೨೩: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇರುವ ವಿದ್ಯುತ್ ಕಂಬ ಅಪಾಯಕ್ಕೆ ಆಹ್ವಾನ ನೀಡುವಂತೆ ನಿಂತಿದೆ. ಮಕ್ಕಳು ಅಲ್ಲಿಯೇ ಆಟ ವಾಡುತ್ತಾ, ಓಡಾಡುತ್ತಾ ಇರುತ್ತಾರೆ. ಅಪಾಯ ಸಂಭವಿಸುವ ಮೊದಲು ವಿದ್ಯುತ್ ಕಂಬವನ್ನು ಸ್ಥಳಾಂತರಿಸುವAತೆ ಕೊಡ್ಲಿಪೇಟೆ ಸೆಸ್ಕ್ ಶಾಖಾಧಿಕಾರಿ ಯವರಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳಲಿಲ್ಲ. ಸಂಬAಧಪಟ್ಟ ಅಧಿಕಾರಿಗಳಾದರೂ ಸ್ಪಂದಿಸಿ ವಿದ್ಯುತ್ ಕಂಬವನ್ನು ಸ್ಥಳಾಂತರಿಸಲಿ ಎಂದು ಆಗಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಲ್. ವಿಷ್ಣುವರ್ಧನ್ ಒತ್ತಾಯಿಸಿದ್ದಾರೆ.