ಮಡಿಕೇರಿ, ಸೆ. ೨೨: ಉಗಾಂಡದ ಕಂಪಾಲದಲ್ಲಿ ನಡೆದ ಅಂತರರಾಷ್ಟಿçÃಯ ಪ್ಯಾರ ಬ್ಯಾಡ್ಮಿಂಟನ್ ಪಂದ್ಯಾಟದ ಡಬಲ್ಸ್ ವಿಭಾಗದಲ್ಲಿ ಜಿಲ್ಲೆಯ ಯುವಕ ಕಂಚಿನ ಪದಕ ಗೆದ್ದು ಸಾಧನೆಗೈದಿದ್ದಾರೆ.

ಸುಂಟಿಕೊಪ್ಪದ ಇಸ್ಮಾಯಿಲ್ ಹಾಗೂ ಜಮೀಲ ದಂಪತಿ ಪುತ್ರ ಜಂಶಾದ್ (೩೨) ಪದಕ ಗೆದ್ದು ಸಾಧನೆ ಮಾಡಿದ ಕ್ರೀಡಾಪಟು. ಸಿಂಗಾಪುರ್ ಎದುರು ರೋಚಕ ಹಣಾಹಣಿಯಲ್ಲಿ ಜಂಶಾದ್ ಮತ್ತು ಆಂದ್ರಪ್ರದೇಶದ ಸಮೀರ್ ಅಹಮ್ಮದ್ ಜೋಡಿ ಸೋತು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಇತ್ತೀಚಿಗೆ ಭುವನೇಶ್ವರ್‌ನಲ್ಲಿ ನಡೆದ ರಾಷ್ಟಿçÃಯ ಪ್ಯಾರ ಬ್ಯಾಡ್ಮಿಂಟನ್‌ನಲ್ಲಿ ಅಗ್ರಸ್ಥಾನ ಪಡೆದು ಉಗಾಂಡದಲ್ಲಿ ನಡೆದ ಅಂತರರಾಷ್ಟಿçÃಯ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದರು. ವಿವಿಧ ತಂಡಗಳೊAದಿಗೆ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ ಜಂಶಾದ್ ಜೋಡಿ ಮೊದಲ ಸೆಟ್‌ನಲ್ಲಿ ೨೧-೧೭ ಅಂತರದಲ್ಲಿ ಗೆಲುವು ದಾಖಲಿಸಿತು. ೨ನೇ ಸೆಟ್‌ನಲ್ಲಿ ೧೫-೨೧ ಅಂತರದಲ್ಲಿ ಸೋತು ಕೊನೆಯ ಸುತ್ತಿನಲ್ಲಿ ೧೫-೨೧ ತೀವ್ರ ಪೈಪೋಟಿ ನೀಡಿ ಸೋಲು ಅನುಭವಿಸಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಬಲಗೈ ಸ್ವಾಧೀನ ಕಳೆದುಕೊಂಡಿರುವ ಪ್ರತಿಭಾನ್ವಿತ ಜಂಶಾದ್ ಮಡಿಕೇರಿಯ ರಾಜಾಸೀಟ್ ಎದುರು ವ್ಯಾಪಾರ ನಡೆಸುತ್ತ, ಸವಾಲಿನ ನಡುವೆ ಸಾಧನೆಯನ್ನು ಮುಂದುವರೆಸುತ್ತ ಚಿನ್ನದ ಪದಕ ಗಳಿಸಿಬೇಕೆಂಬ ವಿಶ್ವಾಸದಲ್ಲಿ ಮುನ್ನುಗುತ್ತಿದ್ದಾರೆ.