ವೀರಾಜಪೇಟೆ, ಸೆ. ೨೧: ವೀರಾಜಪೇಟೆಯ ಕೊಡಗು ಮಾಜಿ ಸೈನಿಕರ ಸಂಘದಿAದ ಇಂದು ತಾಲೂಕು ಕಚೇರಿ ಬಳಿಯ ಹುತಾತ್ಮ ಯೋಧರ ಸ್ಮಾರಕದಲ್ಲಿ ಸಂಘದ ಅಧ್ಯಕ್ಷ ಚೇಂದ್ರಿಮಾಡ ನಂಜಪ್ಪ ಅಧ್ಯಕ್ಷತೆಯಲ್ಲಿ ಹುತಾತ್ಮ ಯೋಧರಿಗೆ ಹಾಗೂ ದಿವಂಗತರಾಗಿರುವ ಮಾಜಿ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಕರ್ನಲ್ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಫೋರಂನ ಅಧ್ಯಕ್ಷ ಕಂಡ್ರತAಡ ಸುಬ್ಬಯ್ಯ ಆಗಮಿಸಿದ್ದರು. ಎನ್.ಸಿಸಿ ಬೆಟಾಲಿಯನ್ ಕಮಾಂಡೆAಟ್ ಅರುಣಾ, ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ನಿರಂಜನ ರಾಜೇ ಅರಸ್, ವೃತ್ತ ನಿರೀಕ್ಷಕ ಶಿವರುದ್ರಪ್ಪ, ಬ್ರೇಗೇಡಿಯರ್ ಮುನಿಸ್ವಾಮಿ, ಮೇಜರ್ ರಘುರಾಮ ರೆಡ್ಡಿ, ಕರ್ನಲ್ ಚೆಪ್ಪುಡೀರ ಮುತ್ತಣ್ಣ, ಕಡೇಮಡ ಬಿದ್ದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ವೀರಾಜಪೇಟೆ ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಎಸ್.ಬಿ.ಎಂ. ಬ್ಯಾಂಕ್ ವ್ಯವಸ್ಥಾಪಕಿ ಉಮಾ ಆಗಮಿಸಿದ್ದರು. ಅಗಲಿದ ಯೋಧರಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು.
ಕೊಡವ ಸಮಾಜದ ಮಾಜಿ ಅಧ್ಯಕ್ಷ ವಾಂಚೀರ ವಿಠಲ್ ನಾಣಯ್ಯ, ಕೊಡವ ಮುಸ್ಲಿಂ ಅಸೋಸಿಯೇಶನ್ ಅಧ್ಯಕ್ಷ ದುದ್ದಿಯಂಡ ಸೂಫಿ, ತ್ರಿವೇಣಿ, ಸಂತ ಅನ್ನಮ್ಮ, ಕಾವೇರಿ ಶಾಲೆಯ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು, ಲಘು ವಾಹನ ಚಾಲಕ ಮಾಲೀಕರ ಸಂಘ,
(ಮೊದಲ ಪುಟದಿಂದ) ಬಿಲ್ಲವ ಸಮಾಜ, ವಿಶ್ವ ಹಿಂದೂ ಪರಿಷತ್, ಕರ್ನಾಟಕ ಸಂಘದ ಸದಸ್ಯರುಗಳು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭ ಮಾಜಿ ಸೈನಿಕರ ಸಂಘದ ಸದಸ್ಯರು, ಜಿಲ್ಲಾ ಸಶಸ್ತç ಪಡೆ ಪೊಲೀಸರು ಕುಶಾಲ ತೋಪುಗಳನ್ನು ಸಿಡಿಸಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಇದೇ ವೇಳೆ ವಿಶ್ವಶಾಂತಿ ದಿನದ ಅಂಗವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥರು ವಿದ್ಯಾರ್ಥಿಗಳು ಶಾಂತಿಗೀತೆಯನ್ನು ಹಾಡಿದರು. ಚೇಂದ್ರಿಮಾಡ ಕೆ. ನಂಜಪ್ಪ ನಿರೂಪಿಸಿದರು.