ಮಡಿಕೇರಿ, ಸೆ. ೨೧: ನಾಡ ಹಬ್ಬ ಮಡಿಕೇರಿ ದಸರಾ- ಜನೋತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಆಹ್ವಾನ ನೀಡಲಾಗಿದ್ದು, ಪ್ರಮುಖರು ಈ ಬಾರಿಯ ದಸರಾಗೆ ಆಗಮಿಸುವ ನಿರೀಕ್ಷೆಯಿದೆ.

ದಸರಾ ಸಮಿತಿ ಪದಾಧಿಕಾರಿಗಳು ರಾಜಧಾನಿಯಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಡಿಕೇರಿ ದಸರಾಗೆ ಆಹ್ವಾನ ನೀಡಿದರು. ವಿಜಯದಶಮಿ ಯಂದು ಬೆಂಗಳೂರಿನಲ್ಲಿ ಕಾರ್ಯಕ್ರಮವಿರುವದರಿಂದ ನವರಾತ್ರಿಯ ಯಾವದಾದರೊಂದು ದಿವಸ ಆಗಮಿಸುವದಾಗಿ ಮುಖ್ಯ ಮಂತ್ರಿಗಳು ಭರವಸೆ ನೀಡಿದ್ದಾರೆ. ಬಹುತೇಕ ಯುವ ದಸರಾಗೆ ಆಗಮಿಸುವ ನಿರೀಕ್ಷೆ ಇರುವುದಾಗಿ ದಸರಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.