ಮಡಿಕೇರಿ, ಸೆ. ೨೧: ಕೊಡಗು ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಗೆ ವಿಧಾನಸಭೆಯಲ್ಲಿಂದು ಧ್ವನಿಮತದ ಮೂಲಕ ಒಪ್ಪಿಗೆ ದೊರೆತಿದೆ. ಕೊಡಗು ಸೇರಿದಂತೆ ಸುಮಾರು ಏಳು ಜಿಲ್ಲೆಗಳಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ

ಕೊಡಗಿಗೆ ಪ್ರತ್ಯೇಕ ವಿವಿಗೆ ಸದನದಲ್ಲಿ ಒಪ್ಪಿಗೆ

(ಮೊದಲ ಪುಟದಿಂದ) ಸ್ಥಾಪನೆಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿರುವ ಸಂಬAಧ ಸದನದಲ್ಲಿಂದು ವಿಷಯ ಪ್ರಸ್ತಾಪವಾದಾಗ ಇದಕ್ಕೆ ಒಪ್ಪಿಗೆ ನೀಡಲು ವಿಪಕ್ಷದ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಪ್ರಸ್ತುತ ಇರುವ ವಿವಿಗಳಲ್ಲೇ ಸಾಕಷ್ಟು ಸೌಕರ್ಯಗಳ ಕೊರತೆಯಿದ್ದು, ಅವುಗಳನ್ನು ಸರಿಪಡಿಸದೆ ನೂತನ ವಿವಿಗಳ ಸ್ಥಾಪನೆಗೆ ಅನುಮತಿ ನೀಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರಾದರೂ, ಕೊನೆಗೆ ಧ್ವನಿಮತದ ಮೂಲಕ ಕೊಡಗು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಪ್ರತ್ಯೇಕ ವಿವಿ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿತು.