ಮಡಿಕೇರಿ, ಸೆ. ೨೧: ನಗರದ ಹೊರವಲಯದ ವಿದ್ಯಾನಗರದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದ್ದರೂ ಇನ್ನೂ ಇದು ಉದ್ಘಾಟನೆಗೊಂಡಿಲ್ಲ. ಈ ಕುರಿತ ಪ್ರಕ್ರಿಯೆ ಇನ್ನಷ್ಟೆ ಆರಂಭಗೊಳ್ಳಬೇಕಿದೆ.

ರೂ. ೩೬ ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಉಚ್ಛ ನ್ಯಾಯಾಲಯದ ಹೊರಭಾಗದ ಸ್ವರೂಪದಲ್ಲಿ ಜಿಲ್ಲಾ ಕೋರ್ಟ್ ನಿರ್ಮಾಣವಾಗಿದೆ. ೨೦೧೩ರಲ್ಲಿ ಆರಂಭಗೊAಡ ಕಾಮಗಾರಿ ಮಡಿಕೇರಿ, ಸೆ. ೨೧: ನಗರದ ಹೊರವಲಯದ ವಿದ್ಯಾನಗರದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದ್ದರೂ ಇನ್ನೂ ಇದು ಉದ್ಘಾಟನೆಗೊಂಡಿಲ್ಲ. ಈ ಕುರಿತ ಪ್ರಕ್ರಿಯೆ ಇನ್ನಷ್ಟೆ ಆರಂಭಗೊಳ್ಳಬೇಕಿದೆ.

ರೂ. ೩೬ ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಉಚ್ಛ ನ್ಯಾಯಾಲಯದ ಹೊರಭಾಗದ ಸ್ವರೂಪದಲ್ಲಿ ಜಿಲ್ಲಾ ಕೋರ್ಟ್ ನಿರ್ಮಾಣವಾಗಿದೆ. ೨೦೧೩ರಲ್ಲಿ ಆರಂಭಗೊAಡ ಕಾಮಗಾರಿ ಮುಗಿಯಬೇಕಾದ ಕಾಮಗಾರಿ ಇದೀಗ ಪೂರ್ಣಗೊಳಿಸಿದ್ದು, ಕೆಲವೇ ದಿನಗಳಲ್ಲಿ ನ್ಯಾಯಾಲಯ ಚಟುವಟಿಕೆಗಳು ಹೊಸ ಕಟ್ಟಡದಲ್ಲಿ ಗರಿಗೆದರಲಿವೆ.

ಕೋಟೆ ಆವರಣದಲ್ಲಿ ಪ್ರಸ್ತುತ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದ್ದು, ಇನ್ನೆರಡು ತಿಂಗಳೊಳಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ನೂತನ ನ್ಯಾಯಾಲಯದ ಸಮೀಪದಲ್ಲಿಯೇ ಜಿಲ್ಲಾ ಪಂಚಾಯ್ತಿ ಭವನ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಕೋಟೆ ಆವರಣದಲ್ಲಿದ್ದ ಜಿ.ಪಂ ಕಚೇರಿಗಳನ್ನು ಸ್ಥಳಾಂತರಿಸ ಲಾಗಿತ್ತು. ಅದೇ ವೇಳೆಯಲ್ಲಿ ನ್ಯಾಯಾಲಯ ಕಟ್ಟಡವನ್ನು ಸ್ಥಳಾಂತರ ಮಾಡುವಂತೆ ಪ್ರಾಚ್ಯವಸ್ತು ಇಲಾಖೆ ಸೂಚನೆ ನೀಡಿತ್ತು. ಆದರೆ, ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ಕೋಟೆ ಆವರಣದಲ್ಲಿಯೇ ನ್ಯಾಯಾಲಯದ ಚಟುವಟಿಕೆಗಳು ಮುಂದುವರೆದಿತ್ತು. ಇದೀಗ ಕಾಮಗಾರಿ ಪೂರ್ಣ ಗೊಂಡಿದ್ದು, ನ್ಯಾಯಾಲಯ ಸ್ಥಳಾಂತರದ ದಿನಾಂಕ ನಿಗದಿಯಾಗಬೇಕಾಗಿದೆ.

ಕಾಮಗಾರಿ ಪೂರ್ಣ ಗೊಳಿಸಿರುವ ಲೋಕೋಪಯೋಗಿ ಇಲಾಖೆ ಸಂಕೀರಣ ಹಸ್ತಾಂತರಕ್ಕೆ ಮನವಿ ಮಾಡಿದ್ದು, ಸರ್ವೋಚ್ಛ ನ್ಯಾಯಾಲಯ ಕೂಡ ಈ ಹಿನ್ನೆಲೆ ಸೂಚನೆ ನೀಡಿದೆ. ಎಲ್ಲಾ ರೀತಿಯ ಕಾಮಗಾರಿಗಳು ಪೂರ್ಣ ಗೊಂಡಿದ್ದು, ವಕೀಲರ ವಾಹನ ನಿಲುಗಡೆ ಸುಸಜ್ಜಿತ ಪಾರ್ಕಿಂಗ್‌ಗೆ ಕೋರಿದ್ದಾರೆ. ಅದರ ಬಗ್ಗೆ ಹೈಕೋರ್ಟ್ಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ

(ಮೊದಲ ಪುಟದಿಂದ) ಪಡೆದು ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗರಾಜ್ ತಿಳಿಸಿದ್ದಾರೆ.

ಸುಸಜ್ಜಿತ ನ್ಯಾಯಾಲಯ

ಕೆಂಪು ಬಣ್ಣದ ಬೃಹತ್ ನ್ಯಾಯಾಲಯ ಸಂಕೀರ್ಣ ನೋಡಲು ಆಕರ್ಷಣಿಯವಾಗಿದೆ. ಬೆಂಗಳೂರಿನ ಹೈಕೋರ್ಟ್ ಶೈಲಿಯಲ್ಲಿ ಹೊರವಿನ್ಯಾಸ ಮಾಡಲಾಗಿದೆ. ಇದರೊಂದಿಗೆ ಮೂಲಭೂತ ವ್ಯವಸ್ಥೆಗಳಾದ ಪಾರ್ಕಿಂಗ್, ಶೌಚಾಲಯ, ಕ್ಯಾಂಟಿನ್, ಆಸನ ಸೇರಿದಂತೆ ಇನ್ನಿತರ ಅವಶ್ಯಕತೆಯನ್ನು ಕಲ್ಪಿಸಲಾಗಿದೆ. ನೆಲ ಮಹಡಿ, ಮೊದಲು ಹಾಗೂ ಎರಡನೇ ಮಹಡಿಯನ್ನು ಸಂಕೀರ್ಣ ಹೊಂದಿದೆ.

ಸುಸಜ್ಜಿತವಾಗಿರುವ ಕಟ್ಟಡದಲ್ಲಿ ಒಟ್ಟು ೩೦ ಕೊಠಡಿಗಳು ಇರಲಿವೆ. ಅದರಲ್ಲಿ ೯ ಕೋರ್ಟ್ ಹಾಲ್, ಪ್ರತ್ಯೇಕ ಏರಿಯಾ ಸೆಂಟರ್, ಕಚೇರಿಗಳು, ಸ್ಟಾçಂಗ್ ರೂಂ ಇರಲಿವೆ. ಈಗಾಗಲೇ ಕಟ್ಟಡ ಕೆಲಸ ಮುಗಿದಿರುವ ಹಿನ್ನೆಲೆ ವಿದ್ಯುತ್ ಲೈನ್ ಸಂಪರ್ಕ ಸೇರಿದಂತೆ ಎಲ್ಲಾ ಕೆಲಸಗಳನ್ನು ಮುಗಿಸಲಾಗಿದೆ. ವಿಶಾಲವಾಗಿರುವ ಕೋರ್ಟ್ ಆವರಣದ ಮುಂಭಾಗ ಪಾರ್ಕ್ ಕೂಡ ನಿರ್ಮಿಸಲಾಗಿದೆ.

ನ್ಯಾಯಾಲಯದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ, ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ನೆಲಮಹಡಿಯಲ್ಲಿರಲಿದೆ. ಒಂದನೇ ಮಹಡಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ, ೨ನೇ ಮಹಡಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ಮಕ್ಕಳ ಸ್ನೇಹಿ ನ್ಯಾಯಾಲಯಗಳಿರಲಿವೆ.

ಕೋರ್ಟ್ ಹಾಲ್‌ಗೆ ಬೇಕಾದ ಕಟಕಟೆ, ನ್ಯಾಯಾಧೀಶರ ನ್ಯಾಯಪೀಠ, ವಕೀಲರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಕಟ್ಟಡ ಹೊರಭಾಗದ ಒಂದು ಕಡೆ ತಡೆಗೋಡೆಯನ್ನು ನಿರ್ಮಿಸಲಾಗಿದೆ.

ಹಳೇ ಕೋರ್ಟ್ ಏನಾಗುತ್ತೆ?

ಕೋಟೆ ಆವರಣದಲ್ಲಿರುವ ನ್ಯಾಯಾಲಯ ೧೯೬೯ರಲ್ಲಿ ಆರಂಭಗೊAಡಿತ್ತು. ಅಂದಿನ ಮೈಸೂರು ಚೀಫ್ ಜಸ್ಟೀಸ್ ಎ.ಆರ್. ಸೋಮನಾಥ್ ಅಯ್ಯರ್ ನ್ಯಾಯಾಲಯ ಶಂಕುಸ್ಥಾಪನೆ ಮಾಡಿದ್ದರು. ಕಾಮಗಾರಿ ಪೂರ್ಣಗೊಂಡ ಬಳಿಕ ೧೯೭೪ರಲ್ಲಿ ಕರ್ನಾಟಕದ ಅಂದಿನ ಚೀಫ್ ಜಸ್ಟೀಸ್ ಜಿ.ಕೆ ಗೋವಿಂದಭಟ್ ನ್ಯಾಯಾಲಯ ಲೋಕಾರ್ಪಣೆ ಮಾಡಿದ್ದರು.

ಇದೀಗ ನೂತನ ನ್ಯಾಯಾಲಯ ನಿರ್ಮಾಣಗೊಂಡ ಹಿನ್ನೆಲೆ ಕೋಟೆ ಆವರಣದಲ್ಲಿ ನ್ಯಾಯಾಲಯ ಏನಾಗುತ್ತೆ ಎಂಬ ಪ್ರಶ್ನೆ ಉದ್ಭವಿಸಿದೆ. ಕಟ್ಟಡ ಲೋಕೋಪಯೋಗಿ ಇಲಾಖೆಗೆ ಹಾಗೂ ಜಾಗ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿದ್ದು, ಕಟ್ಟಡವನ್ನು ಕೆಡವಲಾಗುತ್ತ ಅಥವಾ ಅದನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

-ಹೆಚ್.ಜೆ. ರಾಕೇಶ್