ಮಡಿಕೇರಿ, ಸೆ. ೨೦: ತಾ. ೨೬ ರಿಂದ ಕೊಡಗು ಜಿಲೆಯಲ್ಲಿ ದಸರಾ ಉತ್ಸವ ಪ್ರಯುಕ್ತ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳಿಗೆ ತಾ. ೨೬ ರಿಂದ ಅಕ್ಟೋಬರ್ ೯ರ ವರೆಗೆ ದಸರಾ ರಜೆಗಳನ್ನು ಘೋಷಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಆದೇಶಿಸಿದ್ದಾರೆ. ಈ ಮಧ್ಯೆ ನಡೆಯಲಿರುವ ಗಾಂಧಿ ಜಯಂತಿ (ಅಕ್ಟೋಬರ್ ೨ ರಂದು) ಹಾಗೂ ವಾಲ್ಮೀಕಿ ಜಯಂತಿ (ಅಕ್ಟೋಬರ್ ೯ ರಂದು) ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಷರತ್ತು ವಿಧಿಸಿ ದಸರಾ ರಜಾ ಘೋಷಣೆ ಮಾಡಲಾಗಿದೆ.