ಮಡಿಕೇರಿ, ಸೆ. ೨೦: ತಮ್ಮ ಅಂಗಡಿ ಎದುರು ವಾಹನಗಳು ನಿಲ್ಲಬಾರದೆಂದು ವ್ಯಾಪಾರಿಯೊಬ್ಬರು ಸಾರ್ವಜನಿಕ ರಸ್ತೆಯನ್ನು ಅಗೆದು ಕಟ್ಟೆ ಕಟ್ಟಲು ಮುಂದಾದ ಘಟನೆ ನಡೆದಿದ್ದು, ಸಾರ್ವಜನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಗರಸಭಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಡೆಯೊಡ್ಡಿದರು. ನಗರದ ಜಿ.ಟಿ. ವೃತ್ತದಲ್ಲಿ ಘಟನೆ ನಡೆದಿದ್ದು, ವ್ಯಾಪಾರಿ ಶಿವರಾಂ ಶೆಟ್ಟಿ ಎಂಬವರು ತಮ್ಮ ಅಂಗಡಿ ಮುಂಭಾಗದ ರಸ್ತೆಯನ್ನು ಅಗೆದು ಕಟ್ಟೆ ಕಟ್ಟಲು ಮುಂದಾಗಿದ್ದರು. ಇದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ನಗರಸಭೆಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದ ಅಧಿಕಾರಿಗಳು ಕಾಮಗಾರಿಗೆ ತಡೆಯೊಡ್ಡಿದರು.
- ಟಿ.ಜಿ. ಸತೀಶ್