ಸೋಮವಾರಪೇಟೆ, ಸೆ. ೨೦: ಕರ್ನಾಟಕ ಅರಣ್ಯ ಇಲಾಖೆ, ಸೋಮವಾರಪೇಟೆ ವಲಯ ಹಾಗೂ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್ ವತಿಯಿಂದ ಚಿಣ್ಣರಿಗೆ ವನದರ್ಶನ ಕಾರ್ಯಕ್ರಮ ನಡೆಯಿತು.
ಇದರ ಅಂಗವಾಗಿ ವಿದ್ಯಾರ್ಥಿಗಳು ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ವಲಯ ಅರಣ್ಯಾಧಿಕಾರಿ ನವೀನ್ ರಾವತ್ ಅವರಿಂದ ಮಾಹಿತಿ ಪಡೆದುಕೊಂಡರು. ವಿವಿಧ ಜಾತಿಯ ಮರಗಳು,ಕಾಡು ಪ್ರಾಣಿಗಳ ಜೀವನ ಕ್ರಮ ಮತ್ತು ಆಹಾರ ಪದ್ಧತಿ, ಔಷಧೀಯ ಸಸ್ಯಗಳು, ಅರಣ್ಯ ರಕ್ಷಣೆಯಲ್ಲಿ ನಮ್ಮ ಜವಾಬ್ದಾರಿ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ತಂಡದಲ್ಲಿ ವಲಯ ಅರಣ್ಯಾಧಿಕಾರಿಗಳಾದ ವೈ.ಕೆ.ಜಗದೀಶ್ ಮತ್ತು ಸಿಬ್ಬಂದಿಗಳು, ಮುಖ್ಯ ಶಿಕ್ಷಕರು, ಸಹಶಿಕ್ಷಕರು ಪಾಲ್ಗೊಂಡಿದ್ದರು.