ಸೋಮವಾರಪೇಟೆ, ಸೆ. ೨೦: ಪಟ್ಟಣದಲ್ಲಿ ಬೀಡಾಡಿ ಜಾನುವಾರು ಗಳ ಹಾವಳಿ ಮಿತಿಮೀರಿದ್ದು, ಜಾನುವಾರುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಗಲು-ರಾತ್ರಿಯ ವೇಳೆಯಲ್ಲಿ ಪಟ್ಟಣದಲ್ಲೇ ಓಡಾಡಿಕೊಂಡಿರುವ ಹಲವಷ್ಟು ಜಾನುವಾರುಗಳು, ವಾಹನ ಸವಾರರಿಗೆ ಕಂಟಕವಾಗುತ್ತಿದೆ. ಕೆಲವೊಮ್ಮೆ ವಾಹನಗಳು ಡಿಕ್ಕಿಯಾಗಿ ಸವಾರರು ಗಾಯಗೊಳ್ಳುತ್ತಿದ್ದಾರೆ. ಇದರೊಂದಿಗೆ ಮೂಕ ಪ್ರಾಣಿಗಳಾದ ಜಾನುವಾರುಗಳೂ ಸಹ ಗಾಯ ಗೊಂಡು ನರಳುತ್ತಿರುತ್ತವೆ. ಇಂತಹ ಬೀಡಾಡಿ ಜಾನುವಾರುಗಳ ಮಾಲೀಕ ರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸಲು ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.