ಮಡಿಕೇರಿ, ಸೆ. ೧೯: ತಾ. ೨೦ ರಂದು ಬೆಳಿಗ್ಗೆ ೯ ಗಂಟೆಗೆ ನೆಹರು ಯುವ ಕೇಂದ್ರಕ್ಕೆ ಕೆಂದ್ರ ಸರ್ಕಾರದ ಹಣಕಾಸು ಸಚಿವಾಲಯದ ರಾಷ್ಟçಮಟ್ಟದ ನಿರ್ದೇಶಕರು ಹಾಗೂ ಕಾರ್ಯಕ್ರಮ ನಿರ್ವಾಹಕರು ಆಗಿರುವ ಅಪೂರ್ವ ಸಿಂದೆ ಭೇಟಿ ನೀಡಲಿದ್ದಾರೆ.

ಜಿಲ್ಲಾ ಯುವ ಒಕ್ಕೂಟದ ಸದಸ್ಯರು ಪದಾಧಿಕಾರಿಗಳು ಹಾಗೂ ಸಲಹ ಸಮಿತಿಯ ಸದಸ್ಯರುಗಳು ಮೂರು ತಾಲೂಕಿನ ಅಧ್ಯಕ್ಷರುಗಳು ಹಾಗೂ ಸದಸ್ಯರು ಹಾಗೂ ಜಿಲ್ಲೆಯ ಎಲ್ಲ ಯುವಕ, ಯುವತಿ ಮಂಡಳಿ ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್ ತಿಳಿಸಿದ್ದಾರೆ.