ಸುಂಟಿಕೊಪ್ಪ, ಸೆ.೧೯: ಜಿಲ್ಲಾಡಳಿತ ಕೊಡಗು ಜಿಲ್ಲೆ ವತಿಯಿಂದ ತಾಲೂಕು ಆಡಳಿತದ ಮೂಲಕ ಕುಶಾಲನಗರ ಸುಂಟಿಕೊಪ್ಪ ಹೋಬಳಿಯ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್ ಬೈಚನಹಳ್ಳಿಯ ಶಾಲಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರ ಹಲವು ಬೇಡಿಕೆಗಳು ಸಾಕಷ್ಟು ಬಾರಿ ಸಂಬAಧಿಸಿದವರಿಗೆ ಅರ್ಜಿ ಮತ್ತು ಮನವಿಗಳನ್ನು ಸಲ್ಲಿಸಿದ್ದರೂ ಪೂರೈಕೆಯಾಗದ ಬಗ್ಗೆ ಸಭೆಯಲ್ಲಿ ತೀವ್ರ ಆಕ್ರೋಶ ಸಹಿತ ಸುದೀರ್ಘ ಚರ್ಚೆ ನಡೆಯಿತು.
ಅಪರ ಜಿಲ್ಲಾಧಿಕಾರಿ ನಂಜುAಡೇಗೌಡ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಸಂಬAಧಿಸಿದ ದಾಖಲೆಗಳೊಂದಿಗೆ ಲಿಖಿತ ರೂಪದಲ್ಲಿ ಅರ್ಜಿಯನ್ನು ಸಲ್ಲಿಸಿಬೇಕೆಂದು ಹೇಳಿದ ನಂಜುAಡೇಗೌಡ ಅವರು ಎಲ್ಲಾ ಅರ್ಜಿಗಳನ್ನು ಸಂಬAಧಿಸಿದ ಇಲಾಖೆಗಳಿಗೆ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಪಯತ್ನಿಸಲಾಗುವುದೆಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು ನಾಕೂರು ಶಿರಂಗಾಲ, ಹೆರೂರು, ಮಳ್ಳೂರು, ನಾಕೂರು ಶಿರಂಗಾಲಕ್ಕೆ ಸಂಪರ್ಕ ಕಲ್ಪಿಸುವ ಕೊಡಗರಹಳ್ಳಿಯ ಅಂದಗೋವೆ ರಸ್ತೆಯು ಈ ಬಾರಿಯ ವಿಪರೀತ ಮಳೆಗೆ ಕೊಚ್ಚಿ ಹೋಗಿದ್ದು, ೨ ಕಡೆಗಳಲ್ಲಿ ರಸ್ತೆಯೇ ಇಲ್ಲಂದAತಾಗಿದ್ದು, ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ಕಷ್ಟಸಾಧ್ಯವಾಗಿದೆ ಎಂದು ಹೇಳಿದರಲ್ಲದೆ ಈ ಬಗ್ಗೆ ಸಾಕಷ್ಟು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನೆÀ್ನಲೆಯಲ್ಲಿ ಈ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆಗಳನ್ನು ಸರ್ವ ಋತು ರಸ್ತೆಗಳನ್ನಾಗಿ ಮಾಡಬೇಕೆಂದು ಆಗ್ರಹಿಸಿದರು. ಗ್ರಾಮಸ್ಥರಾದ ಬಿಜು, ಪಂಚಾಯಿತಿ ಸದಸ್ಯ ಮಂದೋಡಿ ಜಗನ್ನಾಥ್ ಸೇರಿದಂತೆ ಇತರರು ಮಾತನಾಡಿದರು. ಕುಶಾಲನಗರ ತಾಲೂಕಿನ ಹಾರಂಗಿ ಅಣೆಕಟ್ಟು ನಿರ್ಮಿಸುವ ಸಂದರ್ಭ ಸುಂಟಿಕೊಪ್ಪ ಹೋಬಳಿಗೆ ಸೇರಿದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಕೂರು ಶಿರಂಗಾಲ, ಹಾದ್ರೆ ಹೆರೂರು ಮತ್ತು ಮಳ್ಳೂರು ಸೇರಿದಂತೆ ಇನ್ನಿತರ ಗ್ರಾಮಗಳ ಮೂಲಕವಾಗಿ ಜಲಾಶಯಕ್ಕೆ ಹರದೂರು ಬಳಿಯಿಂದ ಹಾರಂಗಿಯವರೆಗೆ ಹಿನ್ನೀರು ಪ್ರದೇಶವಾಗಿ ಕೃಷಿಕರ ಜಮೀನುಗಳನ್ನು ಎಕರೆವಾರು ಲೆಕ್ಕದಲ್ಲಿ ಬೇಕಾದಷ್ಟು ಜಮೀನುಗಳನ್ನು ಸರಕಾರ ವಶಪಡಿಸಿಕೊಂಡಿತ್ತು. ಸರಕಾರ ಸ್ವಾಧೀನಪಡಿಸಿಕೊಂಡ ಜಮೀನು ಬಿಟ್ಟು ತಮ್ಮ ಸ್ವಾಧೀನದಲ್ಲಿರುವ ಜಮೀನುಗಳಲ್ಲಿ ಹಿರಿಯರು ಕೃಷಿ ಚಟುವಟಿಕೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದು, ಆ ಸಾಗುವಳಿ ಭೂಮಿಯು ನಮಗೆ ಅರಿವಿಲ್ಲದೆಯೇ ಇತ್ತೀಚಿನ ದಿನಗಳಲ್ಲಿ ಸರಕಾರಿ ನೀರಾವರಿ ಇಲಾಖೆಯ ಭೂಮಿ ದಾಖಲಾತಿಗಳಲ್ಲಿ ಕಂಡು ಬರುತ್ತಿದೆ. ಇದರಿಂದ ಕೃಷಿ ಭೂಮಿಗಳಲ್ಲಿ ಕೃಷಿಚಟುವಟಿಕೆ ಅಭಿವೃದ್ಧಿ ಪಡಿಸಲು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಕಷ್ಟಸಾಧ್ಯವಾಗಿದೆ ಎಂದು ಕೃಷಿಕ ಕೆ.ಪಿ.ವಸಂತ್‌ಕುಮಾರ್ ಸಮಸ್ಯೆ ಗಂಭೀರತೆಯ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಕಳೆದ ೩೫ ವರ್ಷಗಳಿಂದ ಕಂದಾಯ ನಿಗಧಿ ಆಗಿರುವುದಿಲ್ಲ. ಆಗಿನ ರಾಜ್ಯ ಸರಕಾರದ ವತಿಯಿಂದ ಈ ವ್ಯಾಪ್ತಿಯಲ್ಲಿ ೩೫ ರಿಂದ ೪೦ ಕೃಷಿಕರಿಗೆ ಸಾಗುವಳಿ ಚೀಟಿ ನೀಡಿದ್ದರೂ ಕೂಡ ಕಂದಾಯ ನಿಗಧಿಯಾಗಿರುವುದಿಲ್ಲ ಎಂದು ಹೇಳಿದರು. ಹಾರಂಗಿ ಹಿನ್ನೀರಿನಲ್ಲಿ ಸಂತ್ರಸ್ತರಾದವರಿಗೆ ಪರ್ಯಾಯ ಜಮೀನು ನೀಡಿದ್ದರೂ ೫೦ ವರ್ಷ ಕಳೆದರೂ ಕಂದಾಯ ನಿಗಧಿಗೊಳಿಸಿಲ್ಲವೆಂದು ಬಿಜು ಅಧಿಕಾರಿಗಳ ಗಮನಕ್ಕೆ ತಂದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸುಂಟಿಕೊಪ್ಪ ಹೋಬಳಿ ಉಪತಹಶೀಲ್ದಾರ್ ಹೆಚ್.ಕೆ.ಶಿವಪ್ಪ ಇದು ಹಾರಂಗಿ ಜಲಾಶಯ ಯೋಜನೆಗೆ ಒಳಪಟ್ಟಿದ್ದು ಇನ್ನೂ ಕೂಡ ಕಂದಾಯ ಇಲಾಖೆಯ ವ್ಯಾಪ್ತಿಗೆ ಬಂದಿಲ್ಲದ ಹಿನೆÀ್ನಲೆಯಲ್ಲಿ ಕಂದಾಯ ನಿಗದಿಗೊಳಿಸಲು ವಿಳಂಬವಾಗುತ್ತಿದೆ. ಆದರೆ ಈ ಬಗ್ಗೆ ಮತ್ತೆ ಅರ್ಜಿ ಸಲ್ಲಿಸಿ ೨ ಇಲಾಖೆಗಳ ಜೊತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಕ್ರಮ ಜರುಗಿಸುವ ಬಗ್ಗೆ ಮನವಿ ಮಾಡಿ ಮುಂದುವರೆಯಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅಕ್ರಮ ಸಕ್ರಮ ಮಂಜೂರಾತಿಯ ಅರ್ಜಿಗಳಾದ ನಮೂನೆ ೫೦, ೫೩, ೫೭ರಲ್ಲಿ ಮನವಿ ನೀಡಲು ಸಾಧ್ಯವಾಗುತ್ತಿಲ್ಲ. ಈ ಗ್ರಾಮಗಳನ್ನು ಹಾರಂಗಿ ಜಲಾಶಯ ಯೋಜನೆಯಿಂದ ಬೇರ್ಪಡಿಸಿ ಕಂದಾಯ ಇಲಾಖೆಗೆ ಹಸ್ತಾಂತರಿಸಿ ಕಂದಾಯ ನಿಗದಿ ಮಾಡುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಸ್ಸಾಂ ನಾಗರಿಕರಿಗೆ ಸೋಮವಾರಪೇಟೆ ತಾಲೂಕು ನಿವಾಸಿಯೆಂದು ವಿಳಾಸ ನೀಡಿ ಆಧಾರ್ ನೀಡಿರುವ ಸಂಬAಧ ದಾಖಲೆ ಸಮೇತ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅಪರ ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸೂಚಿಸಿದರು.
ನಾಕೂರು ಶಿರಂಗಾಲ ಭಾಗ ೨ ರಲ್ಲಿ ಸಾರ್ವಜನಿಕ ರಸ್ತೆ ಜಾಗವನ್ನು ಕಂದಾಯ ಇಲಾಖೆ ವತಿಯಿಂದ ಇತ್ತೀಚೆಗೆ ರಸ್ತೆ ತೆರವುಗೊಳಿಸುವ ಪ್ರಕ್ರಿಯೆ ನಡೆದಿದ್ದರೂ ಕೂಡ ಸಂಬAಧಿಸಿದ ಜಾಗವನ್ನು ಆಕ್ರಮಿಸಿಕೊಂಡಿದ್ದ ವ್ಯಕ್ತಿ ಮತ್ತೆ ರಸ್ತೆ ಜಾಗಕ್ಕೆ ಬೇಲಿ ಹಾಕಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಬೇಲಿಯನ್ನು ಹಾಕಿದ್ದಲ್ಲಿ ಬೇಲಿಯನ್ನು ತೆರವುಗೊಳಿಸಿ ಮುಂದಿನ ಆದೇಶದ ಪ್ರಕ್ರಿಯೆಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಮಹಿಳೆಯೊಬ್ಬರು ಮಾತನಾಡಿ ಕಳೆದ ೨೦ ವರ್ಷಗಳಿಂದ ಮನೆಗಾಗಿ ಅರ್ಜಿ ಸಲ್ಲಿಸುತ್ತಾ ಬರುತ್ತಿದ್ದರೂ ಇಂದಿನವರೆಗೂ ಮನೆ ಸಿಗದ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಬಗ್ಗೆ ಪ್ರಸ್ತಾಪಿಸಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಪ್ರಸ್ತಾಪಿಸಿದ ಗ್ರಾಮಸ್ಥರು ಕೆಲವು ಸಂದರ್ಭದಲ್ಲಿ ಅರ್ಜಿದಾರರಿಗೆ ದೊರೆಯದ ಕಡತಗಳು ಮತ್ತು ದಾಖಲೆಗಳು ಮಧÀ್ಯವರ್ತಿಗಳು ಹೋದಲ್ಲಿ ಎಲ್ಲ ದಾಖಲಾತಿಗಳು ದೊರೆಯುವ ಬಗ್ಗೆ ನೇರವಾಗಿ ಆರೋಪಿಸಿದರು.
ಕೆಲವು ಫಲಾನುಭವಿಗಳು ಸಮಾಜ ಕಲ್ಯಾಣ ಇಲಾಖೆಗಾಗಿ ಕಾಯ್ದಿರಿಸಿದ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಇದು ಕಾನೂನು ಬಾಹಿರ. ಆದರೆ ಮಾನವೀಯತೆ ಮತ್ತು ಮನೆ ನೀಡುವ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಐಟಿಡಿಪಿ ಇಲಾಖೆಯೊಂದಿಗೆ ಅಭಿಪ್ರಾಯ ಕೇಳಿ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು ಸರಕಾರದ ಆದೇಶದಂತೆ ಈ ಸಮಸ್ಯೆಗೆ ಪರಿಹಾರ ಹುಡಕಲಾಗುವುದೆಂದು ಅಪರ ಜಿಲ್ಲಾಧಿಕಾರಿ ನಂಜುAಡೇಗೌಡ ಮಾಹಿತಿಯಿತ್ತರು.
ಸರಕಾರದ ಯೋಜನೆಗಳಾದ ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ, ರಾಷ್ಟಿçÃಯ ಕುಟುಂಬ ನೆರವು ಯೋಜನೆ ಫಲಾನುಭವಿಗಳಿಗೆ ಆದೇಶ ಪ್ರತಿಯನ್ನು ಅಪರ ಜಿಲ್ಲಾಧಿಕಾರಿ ಕುಶಾಲನಗರ ತಹಶೀಲ್ದಾರ್ ಪಿ.ಎಂ. ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ರೈ, ಉಪಾಧ್ಯಕ್ಷ ಸತೀಶ್, ಸದಸ್ಯ ಮಂದೋಡಿ ಜಗನ್ನಾಥ್, ವಿತರಿಸಿದರು.
ಇದೇ ಸಂದರ್ಭ ಗ್ರಾಮಸ್ಥರು ಆನೆ ಹಾವಳಿ, ಭೂ ದಾಖಲೆಗಳ ಕಂದಾಯ ದುರಸ್ತಿ, ವಿದ್ಯುತ್ ಸಮಸ್ಯೆ, ಸಂಪರ್ಕ ಕಂಬಗಳ ದುರಸ್ತಿ, ರಸ್ತೆ, ಮೋರಿ, ಕೆರೆಕಟ್ಟೆ ನಿರ್ಮಾಣ, ಅತೀ ಸಣ್ಣ ಹಿಡುವಳಿದಾರರನ್ನು ಏಕಾಏಕಿ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಿ ಎಪಿಎಲ್ ಪಡಿತರ ಪಟ್ಟಿ ಸೇರಿಸಿರುವ ಬಗ್ಗೆ, ಕೂಲಿ ಕಾರ್ಮಿಕರು, ಕಡು ಬಡವರು ವಸತಿ ನಿರ್ಮಿಸಲು ನಿವೇಶನದ ಸಮಸ್ಯೆಗಳ ಕುರಿತು ೫೪ ಅರ್ಜಿಗಳನ್ನು ಸಲ್ಲಿಸಿದರು.
ಗ್ರಾಮಸ್ಥರಾದ ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಶಂಕರ್‌ನಾರಾಯಣ, ರಾಮಯ್ಯ, ಮಾಜಿ ಸದಸ್ಯ ಚೋಮಣಿ, ತಮ್ಮಯ್ಯ, ರವಿ, ಸುಬ್ರಮಣಿ, ಪ್ರೇಮ, ಅಯ್ಯಣ್ಣ ಗ್ರಾಮಸ್ಥರು ಗ್ರಾಮದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಲ್ಲಿ ಗಮನಕ್ಕೆ ತಂದರು.
ವೇದಿಕೆಯಲ್ಲಿ ಕುಶಾಲನಗರ ತಹಶೀಲ್ದಾರ್ ಪಿ.ಎಂ. ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ರೈ, ಉಪಾಧ್ಯಕ್ಷ ಸತೀಶ್, ಸದಸ್ಯ ಮಂದೋಡಿ ಜಗನ್ನಾಥ್, ಉಪತಹಶೀಲ್ಧಾರ್ ಹೆಚ್.ಕೆ.ಶಿವಪ್ಪ, ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮಲೆಕ್ಕಿಗರುಗಳಾದ ನಸೀಮಾ, ಜಯಂತ್, ನಾಗೇಶ್ ಮತ್ತು ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಪಾಲ್ಗೊಂಡು ಮಾಹಿತಿ ನೀಡಿದರು.