ವೀರಾಜಪೇಟೆ, ಸೆ, ೧೯: ಬ್ರಹ್ಮಪುತ್ರ ವಿಶ್ವಕರ್ಮರ ಜಯಂತಿ ಮಹೋತ್ಸವವನ್ನು ಸಮುದಾಯ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.

ವೀರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ನಗರದ ಗೋಣಿಕೊಪ್ಪಲು ರಸ್ತೆಯಲ್ಲಿರುವ ರಾಜರಾಜೇಶ್ವರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ದ.ಕನ್ನಡ ವಿಟ್ಲದ ಪುರೋಹಿತರಾದ ಹೇಮಂತ್ ಅವರ ಸಾರಥ್ಯದಲ್ಲಿ ವೀಣಾ ಮತ್ತು ಗಣೇಶ್ ಆಚಾರ್ಯ ದಂಪತಿಗಳ ಸಾನಿಧ್ಯದಲ್ಲಿ ಪೂಜಾ ಉತ್ಸವವು ಆರಂಭವಾಯಿತು. ಆರಂಭದಲ್ಲಿ ಗಣಪತಿ ಹೊಮ ನಡೆಯಿತು. ಮಹಾಪೂಜೆ ಸಲ್ಲಿಸಿದ ನಂತರದಲ್ಲಿ ಭಕ್ತ ವೃಂದಕ್ಕೆ ಪ್ರಸಾದ ವಿನಿಯೋಗ ನೆರವೇರಿತು. ಇದೇ ಸಂದರ್ಭದಲ್ಲಿ ಹಿರಿಯರಾದ ಪಾರ್ವತಿ ವೆಂಕಟೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಪೂಜಾ ಕಾರ್ಯಕ್ರಮಗಳು ನಡೆದ ಬಳಿಕ ಅನ್ನ ಸಂತರ್ಪಣೆ ಜರುಗಿತು.

ವೀರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ಜಿ. ದಿವಾಕರ ಆಚಾರ್ಯ, ಉಪಾಧ್ಯಕ್ಷರಾದ ಎ.ಎ. ವಾಗೀಶ ಆಚಾರ್ಯ, ಕೆ.ಜೆ. ರವೀಂದ್ರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕೆ.ಜೆ. ರಾಜೇಶ್ ಆಚಾರ್ಯ, ಸಹ ಕಾರ್ಯದÀರ್ಶಿಗಳಾದ ಎ.ಎ. ಭವಾನಿ ಶಂಕರ ಆಚಾರ್ಯ ಮತ್ತು ಟಿ.ಎಸ್. ಮಂಜುನಾಥ ಆಚಾರ್ಯ ಖಜಾಂಚಿ ಶ್ರೀಮತಿ ವಿಮಲ ದಶರಥ, ಗೌರವಾಧ್ಯಕ್ಷರಾದ ಎ.ಪಿ. ಲೋಕೇಶ್ ಆಚಾರ್ಯ ಮತ್ತು ಸೇವಾ ಸಂಘದ ಸರ್ವ ನಿರ್ದೇಶಕರು ಹಾಗೂ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ವಿಶ್ವಕರ್ಮ ದೇವರ ಅನುಗ್ರಹ ಪಡೆದರು.