ಸಿದ್ದಾಪುರ, ಸೆ. ೧೯: ಕ್ಷÄಲ್ಲಕ ಕಾರಣಕ್ಕೆ ಗ್ರಾ.ಪಂ ಸದಸ್ಯ ಹಾಗೂ ಯುವಕನೋರ್ವನ ನಡುವೆ ಮಾರಾಮಾರಿ ನಡೆದಿದ್ದು, ಗ್ರಾ.ಪಂ ಸದಸ್ಯ ಯುವಕನ ಮೇಲೆ ಬ್ಲೇಡಿನಿಂದ ಇರಿದ ಘಟನೆ ಸಿದ್ದಾಪುರ ಪಟ್ಟಣದಲ್ಲಿ ನಡೆದಿದೆ.
ಕರಡಿಗೋಡು ನಿವಾಸಿ, ಸಿದ್ದಾಪುರ ಗ್ರಾ.ಪಂ ಸದಸ್ಯ ಅನಿಲ್ ಕುಮಾರ್ ಹಾಗೂ ಅದೇ ಗ್ರಾಮದ ನಿವಾಸಿ ರಾಸಿಕ್ ನಡುವೆ ಕಲಹ ನಡೆದಿದೆ ಎನ್ನಲಾಗಿದೆ. ಈ ಸಂದರ್ಭ ಅನಿಲ್ ಕುಮಾರ್ ಏಕಾಏಕಿ ರಾಸಿಕ್ ಕೈಗೆ ಬ್ಲೇಡ್ನಿಂದ ಇರಿದಿದ್ದು, ರಾಸಿಕ್ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಸಿದ್ದಾಪುರ ಪೊಲೀಸರು ಅನಿಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.