ಮುಳ್ಳೂರು, ಸೆ. ೧೯: ದೇಶ ಮತ್ತು ರಾಜ್ಯಾದ್ಯಂತ ದಲಿತರ ಮೇಲೆ ಆಗುತ್ತಿರುವ ಕೊಲೆ, ಅತ್ಯಾಚಾರ, ಮುಂತಾದ ದೌರ್ಜನ್ಯ ಶೋಷಣೆಗಳ ವಿರುದ್ದ ದ.ಸಂ.ಸ.ಒಕ್ಕೂಟ, ದಸಂಸ ಸಂಘಟನೆಯ ಪ್ರಮುಖರು ಶನಿವಾರಸಂತೆ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮನವಿ ಪತ್ರವನ್ನು ಶನಿವಾರಸಂತೆ ಉಪ ತಹಶೀಲ್ದಾರ್ ಶ್ರೀದೇವಿ ಅವರಿಗೆ ಸಲ್ಲಿಸಿದರು. ಪ್ರತಿಭಟನಾಕಾರರನ್ನು ದ್ದೇಶಿಸಿ ದಸಂಸ ಹೋಬಳಿ ಘಟಕದ ಅಧ್ಯಕ್ಷ ಎಸ್.ಎಸ್.ಶಿವಲಿಂಗ, ಮಾಜಿ ಜಿ.ಪಂ.ಅಧ್ಯಕ್ಷೆ ಎಚ್.ಬಿ.ಜಯಮ್ಮ ಮುಂತಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ದಸಂಸ ಸಂಘಟನೆ ಯ ಪ್ರಮುಖರಾದ ವೀರೇಂದ್ರ, ಪ್ರೇಮಾ ವಸಂತ್, ಕೊಡ್ಲಿಪೇಟೆ ವೀರಭದ್ರಪ್ಪ, ಮಂಜು ನಾಥ್, ಜಾನಕಿ, ಮಹಾದೇವ್, ಕಾಂತರಾಜ್ ಮುಂತಾದವರು ಭಾಗವಹಿಸಿದರು.