ಮಡಿಕೇರಿ, ಸೆ. ೧೯: ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಚೇಂದಿರ ರಘು ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು ಈ ಸಾಲಿನಲ್ಲಿ ರೂ. ೧೫,೨೧,೧೦೮.೫೦ ನಿವ್ವಳ ಲಾಭ ಗಳಿಸಿದೆ. ಸದಸ್ಯರ ಪಾಲು ಬಂಡವಾಳ ರೂ. ೧,೪೧,೨೭,೧೦೬ ಇದೆ ಎಂದರು.
ಸAಘವು ೨೭೦೮ ಆರ್ಹ ಸದಸ್ಯರನ್ನು ಹೊಂದಿದ್ದು ರೂ. ೨೧,೧೯,೦೦,೦೦೦ ಮೊತ್ತದ ಠೇವಣಿಯಿದೆ. ಸದಸ್ಯರಿಗೆ ರೂ. ೧೭,೪೫,೦೦,೦೦೦ ಮೊತ್ತದ ವಿವಿಧ ಬಗೆಯ ಸಾಲವನ್ನು ನೀಡಿದೆ. ಸದಸ್ಯರ ಪಾಲು ಬಂಡವಾಳಕ್ಕೆ ಲಾಭಾಂಶದಲ್ಲಿ ಶೇಕಡಾ ೫ ರಷ್ಟು ಡಿವಿಡೆಂಡ್ ನೀಡಲಾಗುತ್ತದೆ. ಸಂಘವು ಈ ಸಾಲಿನಲ್ಲಿ ಸದಸ್ಯರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಯೋಜನೆಯಡಿ ರೂಪಾಯಿ ಎಂಭತ್ತು ಲಕ್ಷ ವೆಚ್ಚದ ೬೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ನಿರ್ಮಿಸಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಗೆ ತೋಟದ ಮನೆ ನಿರ್ಮಾಣ ಮಾಡಲು ಗೃಹ ಸಾಲ ವಿತರಿಸಲಾಗುವುದು ಎಂದು ತಿಳಿಸಿದರು.
ಸಂಘವು ಯಾವುದೇ ಬ್ಯಾಂಕಿAಗ್ ಸಂಸ್ಥೆಗಳ ಸಹಾಯ ಪಡೆಯದೆ ತನ್ನದೇ ಬಂಡವಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಸದಸ್ಯರೆ ಕಾರಣ ಎಂದು ಹೇಳಿದರು. ಈ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು. ಮಹಾಸಭೆÀಯಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ರಂಡ ಯಂ. ತಮ್ಮಯ್ಯ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಲಿಟಲ್ ಫ್ಲವರ್ ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥಿಸಿದರೆ, ಸದಸ್ಯ ತ್ರಷನ್ ಮಾದಯ್ಯ ವಂದಿಸಿದರು.