ಮುಳ್ಳೂರು, ಸೆ. ೧೯: ಸಮೀಪದ ಆಲೂರುಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಜೆ. ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು. ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಎಸ್. ಲೀಲಕುಮಾರ್ ವರದಿ ಮಂಡಿಸಿ ಸಂಘದಲ್ಲಿ ೩ ಸಾವಿರ ಮಂದಿ ಸದಸ್ಯರಿದ್ದು ಸದಸ್ಯತ್ವ ಪಾಲು ಬಂಡವಾಳ ೧,೩೧,೦೩,೯೪೩ ರೂ. ಇದ್ದು, ಸಂಘದಲ್ಲಿ ೩೧-೩-೨೦೨೨ ಕ್ಕೆ ೭,೯೩,೦೩,೬೫೯ ರೂ. ಠೇವಣಾತಿ ಇದೆ. ಸಂಘಕ್ಕೆ ೨೦೨೧-೨೨ನೇ ಸಾಲಿನಲ್ಲಿ ಕೆಡಿಸಿಸಿ ಬ್ಯಾಂಕಿನಿAದ ೯,೮೨,೭೮,೧೨೧ ರೂ. ಸಾಲ ಪಡೆಯ ಲಾಗಿದೆ ಎಂದರು. ಸಂಘದಿAದ ಸದಸ್ಯರಿಗೆ ೨೦೨೧-೨೨ನೇ ಸಾಲಿಗೆ ೧೦,೦೨,೪೦,೬೫೦ ರೂ. ಕೆ.ಸಿ.ಸಿ ಸಾಲ ವಿತರಣೆ ಮಾಡಲಾಗಿದೆ, ಸ್ವ-ಸಹಾಯ ಗುಂಪುಗಳಿಗೆ ೪೩,೦೦,೦೦೦ ರೂ. ಸಾಲ ನೀಡಲಾಗಿದ್ದು, ರೂ. ೪೮,೨೨,೮೦೩ ಗೊಬ್ಬರ ಸಾಲ ನೀಡಲಾಗಿದೆ ಎಂದರು. ಸಂಘದ ವ್ಯಾಪ್ತಿಯಲ್ಲಿ ೯೩ ಸ್ವ-ಸಹಾಯ ಸಂಘ ಗಳಿದ್ದು ಈ ಪೈಕಿ ೧೫ ಗುಂಪುಗಳ ಸಂಘ ನೀಡಿದ್ದ ೪೩,೦೦,೦೦೦ ಸಾಲವನ್ನು ಮರು ಪಾವತಿಸಿವೆ.
ಮಹಾಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಸºಕಾರಿ ಸದಸ್ಯರು ಚರ್ಚಿಸಿದರು. ಇತ್ತೀಚೆಗೆ ಸಂಘದ ನ್ಯಾಯ ಬೆಲೆ ಅಂಗಡಿಗಳಲ್ಲಿ ಸೀಮೆಣ್ಣೆ ಮಾರಾಟ ಮಾಡುವುದನ್ನು ನಿಲ್ಲಿಸಲಾಗಿದೆ. ಇದರಿಂದ ಗ್ರಾಹಕರಿಗೆ ಸಮಸ್ಯೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸಂಘವು ಸರಕಾರಕ್ಕೆ ಮತ್ತು ಸಂಬAಧ ಪಟ್ಟ ಅಧಿಕಾರಿಗಳಿಗೆ ಹಿಂದಿನAತೆ ನ್ಯಾಯ ಬೆಲೆ ಅಂಗಡಿಗಳಲ್ಲಿ ಸೀಮೆಣ್ಣೆ ಮಾರಾಟ ವ್ಯವಸ್ಥೆ ಮಾಡಿಕೊಡು ವಂತೆ ಮನವಿ ಮಾಡಬೇಕಿದೆ ಎಂದು ಹಿರಿಯ ಸಹಕಾರಿ ಸದಸ್ಯ ಸಿ. ಕೆ. ಚಂದ್ರಶೇಖರ್ ಮತ್ತು ಇತರೆ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು.
ಸಂಘದ ಅಧ್ಯಕ್ಷ ಎಸ್.ಜೆ.ಪ್ರಸನ್ನಕುಮಾರ್ ಮಾತನಾಡಿ, ಸಂಘದ ಪ್ರಗತಿಗಾಗಿ ಸಹಕಾರಿಗಳು ಸಹಕರಿಸಬೇಕು, ನಮ್ಮ ಸಂಘವು ೨೦೨೧-೨೨ನೇ ಸಾಲಿನಲ್ಲಿ ೧,೫೧,೭೦,೬೫೮ ರೂ. ವ್ಯಾಪಾರ ವಹಿವಾಟು ನಡೆಸಿ ೧೦,೫೭,೯೭೨ ರೂ. ವ್ಯಾಪಾರ ಲಾಭಗಳಿಸಿದೆ ಸಂಘವು ೨೦೨೧-೨೨ನೇ ಸಾಲಿನಲ್ಲಿ ೨೦,೪೦,೭೨೦ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಮಹಾಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರೋತ್ಸಾಹ ಧನ ನೀಡಲಾಯಿತು. ಮಹಾಸಭೆಯಲ್ಲಿ ಸಹಕಾರಿಗಳಾದ ಚಂದ್ರಶೇಖರ್, ಎಚ್.ಎಸ್. ಪ್ರೇಮ್ನಾಥ್, ದೇವಪ್ಪ, ಮಹಾಂತಪ್ಪ ಮುಂತಾದವರು ಚರ್ಚಿಸಿದರು. ಸಂಘದ ಉಪಾಧ್ಯಕ್ಷೆ ಎಚ್.ಎಸ್. ವೀಣಾ, ನಿರ್ದೇಶಕರಾದ ಎಚ್.ಎಸ್. ಸುಂದರೇಶ್, ಎ.ಜಿ. ವಿಜಯ್, ಸಿ.ಕೆ. ದೇವಯ್ಯ, ಎಂ.ಸಿ. ಕಾವೇರಪ್ಪ, ಟಿ.ಪಿ. ವಿಜಯ್, ಎಸ್.ಟಿ. ಯಶೋಧ, ಜಾಹ್ನವಿ, ಹೆಚ್.ಕೆ. ಮಲ್ಲೇಶ್, ಕೆಡಿಸಿಸಿ ಮೇಲ್ವಿಚಾರಕ ಎಚ್.ಟಿ. ನವೀನ್ಕುಮಾರ್, ಸಂಘದ ಸಿಬ್ಬಂದಿ ಕೆ.ಡಿ. ಚಂದ್ರಾವತಿ, ಟಿ.ಎಸ್. ಪ್ರವೀಣ್ ಇತರೆ ಸಿಬ್ಬಂದಿ ಇದ್ದರು.