ಕುಶಾಲನಗರ, ಸೆ. ೧೭: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅತಿವೇಗದಿಂದ ದ್ವಿಚಕ್ರವಾಹನಕ್ಕೆ ಡಿಕ್ಕಿ ಪಡಿಸಿದ್ದು, ಬೈಕ್ ಸವಾರರಿಬ್ಬರಿಗೂ ತೀವ್ರವಾಗಿ ಗಾಯಗೊಂಡಿರುವ ಘಟನೆ ಕುಶಾಲನಗರದ ಸಮೀಪ ಗಂಧದ ಕೋಟೆ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಮಂಗಳೂರಿನಿAದ ಮಡಿಕೇರಿ ಮೂಲಕ ಮಧುರೈಗೆ ತೆರಳುವ ಸರ್ಕಾರಿ ಬಸ್ (ಏಂ ೧೯ ಈ ೩೫೭೧) ಸ್ಕೂಟರ್ ಗೆ ( ಏಂ೦೯ಇಖ೩೧೮) ಡಿಕ್ಕಿ ಹೊಡೆದ ಕಾರಣ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರ ಕಾಲು ಮುರಿದಿದೆ. ದ್ವಿಚಕ್ರ ವಾಹನ ಸವಾರರಿಬ್ಬರೂ ಒಂದೇ ಕುಟುಂಬದ ಸದಸ್ಯರಾಗಿದ್ದು ಸುಂಟಿಕೊಪ್ಪ ನಿವಾಸಿಗಳು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸಲಾಗಿದೆ. ಗಾಯಾಳುಗಳು ಆಕ್ಸಿಸ್ ಬ್ಯಾಂಕ್ ಉದ್ಯೋಗಿಗಳು ಎಂದು ತಿಳಿದು ಬಂದಿದೆ. ಕುಶಾಲನಗರ ಸಂಚಾರಿ ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.