ಕುಶಾಲನಗರ, ಸೆ. ೧೭: ರಾಜ್ಯವನ್ನು ಪ್ರತಿನಿಧಿಸಿ ಯುದ್ದ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಮಡಿದ ಯೋಧರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಕಲ್ಪಿಸುತ್ತಿರುವÀ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಈ ಬಗ್ಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾಹಿತಿ ನೀಡಿದ್ದು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕರ ಪತ್ರದ ಹಿನ್ನೆಲೆಯಲ್ಲಿ ಈ ನಡಾವಳಿ ಹೊರಬಿದ್ದಿದ್ದು, ರಾಜ್ಯವನ್ನು ಪ್ರತಿನಿಧಿಸಿ ಯುದ್ದ ಕಾರ್ಯಾಚರಣೆಯಲ್ಲಿ ಮಡಿದ ವೀರ ಯೋಧರ ಅವಲಂಬಿತರಲ್ಲಿ ಒಬ್ಬರಿಗೆ ಸರ್ಕಾರದ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಬಗ್ಗೆ ಸೂಚನೆ ನೀಡಿದೆ.

ಈಗಾಗಲೇ ಹುತಾತ್ಮ ಯೋಧರ ಕುಟುಂಬದವರಿಗೆ ರಾಜ್ಯ ಸರ್ಕಾರ ಎಕ್ಸ್ಗ್ರೇಷಿಯ ರೂ. ೫೦ ಲಕ,್ಷ ಅಧಿಕಾರಿ ಶ್ರೇಣಿಗೆ ರೂ. ೬ ಲಕ್ಷ ಉಚಿತ ಮನೆಗೆ ಅನುದಾನ, ಇತರ ಶ್ರೇಣಿಯಾದಲ್ಲಿ ರೂ. ೪.೫೦ ಲಕ್ಷ, ೨ ಎಕರೆ ನೀರಾವರಿ ಜಮೀನು, ೪ ಎಕರೆ ಮಳೆ ಆಶ್ರಿತ ಭೂಮಿ ಮತ್ತು ೮ ಎಕರೆ ಒಣ ಭೂಮಿ ನೀಡಲಾಗುತ್ತಿವೆ. ಉಚಿತ ನಿವೇಶನ ಕಲ್ಪಿಸಲಾಗುವುದು. ಜಮೀನು ಬದಲಿಗೆ ನಗದು ಅನುದಾನ ಮತ್ತು ಮನೆ ದುರಸ್ತಿ ಅನುದಾನ ಪ್ರತಿ ೧೫ ವರ್ಷಕ್ಕೆ ೩ ಲಕ್ಷ, ಯುದ್ಧದಲ್ಲಿ ಮಡಿದ ಇಬ್ಬರು ಹೆಣ್ಣು ಮಕ್ಕಳಿಗೆ ರೂ. ೫ ಲಕ್ಷ ಮದುವೆ ಅನುದಾನ ಮತ್ತು ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಶೇ. ೫೦ ರಷ್ಟು ನೀಡಲಾಗುತ್ತಿದೆ ಎಂದಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಹುತಾತ್ಮ ಯೋಧರ ೪೦೦ ಕುಟುಂಬಗಳಿದ್ದು, ಅವರಲ್ಲಿ ಸುಮಾರು ೨೦೦ ಮಂದಿ ಅವಲಂಬಿತರು ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಹರಿರುವುದಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿಯ ನಿರ್ದೇಶಕರು ಪತ್ರದಲ್ಲಿ ತಿಳಿಸಿದ್ದಾರೆ.

ಹಾಲಿ ಸ್ವಾತಂತ್ರö್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭ ಯುದ್ಧದಲ್ಲಿ ಮಡಿದ ಯೋಧರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಬಗ್ಗೆ ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ರಂಜನ್ ತಿಳಿಸಿದ್ದಾರೆ. ಈ ಮೂಲಕ ದೇಶದಲ್ಲಿ ಸುರಕ್ಷತೆಗಾಗಿ ಹೋರಾಡುವ ಯೋಧರು ತಮ್ಮ ಪ್ರಾಣ ಪಣಕ್ಕಿಟ್ಟು, ದೇಶದ ಜನತೆಯ ಭದ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುವುದು ಮತ್ತು ಅವರ ಮರಣದಿಂದ ಬಾಧಿತರಾಗುವ ಅವರ ಕುಟುಂಬ ಸದಸ್ಯರುಗಳಿಗೆ ಆಸರೆಯಾಗಿ ನಿಲ್ಲುವ ಉದ್ದೇಶದಿಂದ ಅವಲಂಬಿತರಲ್ಲಿ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ.