ಮಡಿಕೇರಿ, ಸೆ. ೧೭: ಬೇಂಗೂರು ಐವತ್ತೋಕ್ಲು ವಾರ್ಡ್ ಸಭೆ ತಾ. ೨೧ ರಂದು ಬೆಳಿಗೆ ೧೦.೩೦ಕ್ಕೆ ಐವತ್ತೋಕ್ಲು ಶಾಲಾ ಆವರಣದಲ್ಲಿ ನಡೆಯಲಿದೆ. ಬಿ. ಬಾಡಗ ವಾರ್ಡ್ ಸಭೆ ತಾ. ೨೧ ರಂದು ಮಧ್ಯಾಹ್ನ ೨ ಗಂಟೆಗೆ ಬಿ. ಬಾಡಗ ಸ.ಹಿ.ಪ್ರಾ. ಶಾಲೆಯ ಆವರಣದಲ್ಲಿ ನಡೆಯಲಿದೆ. ಕೊಳಗದಾಳು ವಾರ್ಡ್ ಸಭೆ ತಾ. ೨೨ ರಂದು ಪೂರ್ವಾಹ್ನ ೧೦.೩೦ಕ್ಕೆ ಕೊಳಗದಾಳು ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ. ಕೊಟ್ಟೂರು ವಾರ್ಡ್ ಸಭೆ ತಾ. ೨೨ ರಂದು ಮಧ್ಯಾಹ್ನ ೨ ಗಂಟೆಗೆ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆಯಲಿದೆ. ತಾ. ೨೯ ರಂದು ಬೆಳಿಗ್ಗೆ ೧೧ ಗಂಟೆಗೆ ಚೇರಂಬಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಯಶೋಧ ಅವರ ಅಧ್ಯಕ್ಷತೆಯಲ್ಲಿ ಬೆಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬೇಂಗೂರು, ಕೊಳಗದಾಳು, ಕೊಟ್ಟೂರು, ಬಿ. ಬಾಡಗ, ಐವತ್ತೋಕ್ಲು ಗ್ರಾಮಗಳ ಗ್ರಾಮ ಸಭೆ ನಡೆಯಲಿದೆ.