ಸೋಮವಾರಪೇಟೆ, ಸೆ. ೧೭: ನಿನ್ನೆ ಹಾಗೂ ಮೊನ್ನೆ ದಿನ ಸುರಿದ ಮಳೆಗೆ ಶೀತ ಅಧಿಕಗೊಂಡು ವಾಸದ ಮನೆ ಕುಸಿದಿರುವ ಘಟನೆ ಸಮೀಪದ ಹೊಸತೋಟ ಗ್ರಾಮದಲ್ಲಿ ನಡೆದಿದೆ.
ಹೊಸತೋಟ ಗ್ರಾಮ ನಿವಾಸಿ ಕೂಲಿ ಕಾರ್ಮಿಕರಾಗಿರುವ ಖದೀಜ ಅವರ ವಾಸದ ಮನೆ ಮಳೆಯಿಂದಾಗಿ ಸಂಪೂರ್ಣ ಧರಾಶಾಹಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಪ್ರಾಣಾಪಾಯ ತಪ್ಪಿದೆ.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ರೈ, ಗ್ರಾಮ ಲೆಕ್ಕಿಗರಾದ ಶ್ವೇತಾ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.