ನಾಪೋಕ್ಲು, ಸೆ. ೧೭: ಭಾಗಮಂಡಲ ಕ್ಲಸ್ಟರ್ ಮಟ್ಟದ ೨೦೨೨-೨೩ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆ ಚೆಟ್ಟಿಮಾನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಕ್ಲಸ್ಟರ್ಗೆ ಒಳಪಟ್ಟ ೧೬ ಶಾಲೆಗಳು ಭಾಗವಹಿಸಿದ್ದು, ಇದರಲ್ಲಿ ಕೋರಂಗಲ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸ್ಪರ್ಧೆಯನ್ನು ನೀಡಿ ಅನೇಕ ಬಹುಮಾನವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
೮ ರಿಂದ ೧೨ನೇ ತರಗತಿ ವಿಭಾಗದಲ್ಲಿ: ಸಂಸ್ಕೃತ ಧಾರ್ಮಿಕ ಪಠಣ -ಪ್ರಥಮ, ಅರೇಬಿಕ್ ಧಾರ್ಮಿಕ ಪಠಣ - ಪ್ರಥಮ, ಕನ್ನಡ ಭಾಷಣ -ಪ್ರಥಮ, ಇಂಗ್ಲಿಷ್ ಭಾಷಣ-ಪ್ರಥಮ, ಹಿಂದಿ ಭಾಷಣ-ಪ್ರಥಮ, ಛದ್ಮವೇಷ- ಪ್ರಥಮ, ಆಶುಭಾಷಣ-ಪ್ರಥಮ, ರಂಗೋಲಿ-ಪ್ರಥಮ, ಗಜಲ್-ಪ್ರಥಮ, ಹಾಸ್ಯ-ಪ್ರಥಮ, ಭರತನಾಟ್ಯ-ದ್ವಿತೀಯ, ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ-ದ್ವಿತೀಯ, ಮಿಮಿಕ್ರಿ -ದ್ವಿತೀಯ, ಕವ್ವಾಲಿ-ದ್ವಿತೀಯ ಜಾನಪದ ನೃತ್ಯ ದ್ವಿತೀಯ, ಭಾವಗೀತೆ-ತೃತೀಯ, ಜನಪದ ಗೀತೆ-ತೃತೀಯ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ.
೫ ರಿಂದ ೭ನೇ ತರಗತಿ ವಿಭಾಗದಲ್ಲಿ: ಸಂಸ್ಕೃತ ಧಾರ್ಮಿಕ ಪಠಣ -ಪ್ರಥಮ, ಛದ್ಮವೇಷ - ಪ್ರಥಮ, ಕಥೆ ಹೇಳುವುದು - ಪ್ರಥಮ, ಅರೇಬಿಕ್ ಧಾರ್ಮಿಕ ಪಠಣ-ದ್ವಿತೀಯ, ಇಂಗ್ಲಿಷ್ ಕಂಠಪಾಠ-ದ್ವಿತೀಯ, ಕ್ಲೆ- ಮಾಡಲಿಂಗ್-ದ್ವಿತೀಯ, ಭಕ್ತಿಗೀತೆ - ದ್ವಿತೀಯ, ಆಶುಭಾಷಣ-ದ್ವಿತೀಯ, ಹಾಸ್ಯ- ದ್ವಿತೀಯ, ಕನ್ನಡ ಭಾಷಣ- ದ್ವಿತೀಯ, ಅಭಿನಯ ಗೀತೆ - ತೃತೀಯ, ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ-ತೃತೀಯ, ಹಿಂದಿ ಕಂಠಪಾಠದಲ್ಲಿ ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
೧ ರಿಂದ ೫ನೇ ತರಗತಿ ವಿಭಾಗದಲ್ಲಿ: ಹಿಂದಿ ಕಂಠಪಾಠ- ಪ್ರಥಮ, ಛದ್ಮವೇಷ -ಪ್ರಥಮ, ಲಘು ಸಂಗೀತ -ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣ- ದ್ವಿತೀಯ, ಅರೇಬಿಕ್ ಧಾರ್ಮಿಕ ಪಠಣ- ದ್ವಿತೀಯ, ಕ್ಲೇ ಮಾಡಲಿಂಗ್ - ದ್ವಿತೀಯ, ಆಶುಭಾಷಣ- ದ್ವಿತೀಯ, ಭಕ್ತಿಗೀತೆ - ತೃತೀಯ, ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ -ತೃತೀಯ ಬಹುಮಾನ ಗಳನ್ನು ಪಡೆದುಕೊಂಡಿದ್ದಾರೆ. ಶಾಲೆಯ ೪೨ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ ಬಹುಮಾನವನ್ನು ಪಡೆದುಕೊಂಡಿದ್ದಾರೆ.