ಗೋಣಿಕೊಪ್ಪಲು, ಸೆ. ೧೭: ಗ್ರಾಮ ಪಂಚಾಯಿತಿಯ ಅಧ್ಯಕ್ಷಗಾದಿಗೆ ಪೈಪೋಟಿ ನಡೆಸಿದ ಪಂಚಾಯಿತಿ ಕೆಲ ಸದಸ್ಯರು ಪ್ರಸ್ತುತ ಅಧ್ಯಕ್ಷ ಸ್ಥಾನದಲ್ಲಿರುವ ಮನೆಯಪಂಡ ಸೋಮಣ್ಣ ಎಂಬವರ ಮೇಲೆ ಅವಿಶ್ವಾಸ ಮಂಡಿಸಿ ಕೊನೆ ಘಳಿಗೆಯಲ್ಲಿ ಅವಿಶ್ವಾಸಕ್ಕೆ ಸೋಲಾದ ಪ್ರಸಂಗ ನಡೆದಿದೆ.
ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲು ಗ್ರಾಮ ಪಂಚಾಯಿತಿ ಯಲ್ಲಿ ೧೨ ಸದಸ್ಯರ ಸಂಖ್ಯಾ ಬಲವಿದ್ದು ಈ ಪಂಚಾಯಿತಿಯಲ್ಲಿ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ,ಕಾಂಗ್ರೆಸ್,ಹಾಗೂ ಪಕ್ಷೇತರ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿ ಜಯ ಗಳಿಸಿದ್ದರು. ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಪಕ್ಷದ ಪದಾಧಿಕಾರಿಗಳು ಮೈಸೂರಮ್ಮ ನಗರದಲ್ಲಿ ಗೆಲುವು ಸಾಧಿಸಿದ್ದ ಶಕ್ತಿ ಕೇಂದ್ರದ ಅಧ್ಯಕ್ಷ ಮನೆಯಪಂಡ ಸೋಮಣ್ಣ ಅವರನ್ನು ಅಧ್ಯಕ್ಷಗಾದಿಗೆ ನೇಮಕ ಮಾಡಿದ್ದರು. ಪಕ್ಷದ ತೀರ್ಮಾನದಂತೆ ಸೋಮಣ್ಣ ಅಧ್ಯಕ್ಷಗಾದಿ ಅಲಂಕರಿಸಿದ್ದರು.
ಕಳೆದ ೧೬ ತಿಂಗಳಿನಿAದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸೋಮಣ್ಣ ಅವರ ಮೇಲೆ ಪಂಚಾಯಿತಿಯ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮೈಸೂರಮ್ಮ ನಗರದಿಂದ ಗೆಲುವು ಸಾಧಿಸಿದ್ದ ಮನೆಯಪಂಡ ಪ್ರಾಣ್ ತನಗೂ ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷಗಾದಿಗೆ ಪಕ್ಷದ ಪ್ರಮುಖರು ಭರವಸೆ ನೀಡಿದ್ದಾರೆ ಎಂಬ ನಿಟ್ಟಿನಲ್ಲಿ ಸೋಮಣ್ಣನವರ ಮೇಲೆ ಅವಿಶ್ವಾಸಕ್ಕೆ ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದರು.
ಮನವಿಯಲ್ಲಿ ಪ್ರಸ್ತುತ ಅಧ್ಯಕ್ಷರಾಗಿರುವ ಮನೆಯಪಂಡ ಸೋಮಣ್ಣ ಮೇಲೆ ಅವಿಶ್ವಾಸ ಪತ್ರಕ್ಕೆ ೮ ಸದಸ್ಯರು ಸಹಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಮೇಲೆ ಅವಿಶ್ವಾಸ ವಿಚಾರವಾಗಿ ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿಗಳು ಪಂಚಾಯಿತಿಗೆ ಆಗಮಿಸಿ ಅವಿಶ್ವಾಸದ ಬಗ್ಗೆ ಪ್ರಕ್ರಿಯೆ ಆರಂಭಿಸಿದರು. ಈ ವೇಳೆ ಸ್ಥಳದಲ್ಲಿ ಮನೆಯಪಂಡ ಪ್ರಾಣ್ ಮುಂದಾಳತ್ವದ ೫ ಮಂದಿ ಮಾತ್ರ ಉಪಸ್ಥಿತರಿದ್ದರು.
ಪ್ರಸ್ತುತ ಅಧ್ಯಕ್ಷರಾಗಿರುವ ಮನೆಯಪಂಡ ಸೋಮಣ್ಣ ಸೇರಿದಂತೆ ಉಳಿದ ೭ ಮಂದಿ ಅವಿಶ್ವಾಸ ಪ್ರಕ್ರಿಯೆಗೆ ಹಾಜರಾಗಲಿಲ್ಲ. ಇದರಿಂದಾಗಿ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ ಎಂದು ಉಪವಿಭಾಗಾಧಿಕಾರಿಗಳು ಘೋಷಣೆ ಮಾಡಿದ್ದಾರೆ. ಇದರಿಂದ
ಪAಚಾಯಿತಿಯಲ್ಲಿ ಎರಡು ಗುಂಪುಗಳು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿದಂತಾಗಿದೆ.
ಚುನಾವಣಾ ವೇಳೆ ಮೊದಲ ಅವಧಿಯಲ್ಲಿ ಮನೆಯಪಂಡ ಸೋಮಣ್ಣ ಅಧ್ಯಕ್ಷರಾಗಿ ಮುಂದುವರೆ ಯುವಂತೆ ೨ನೇ ಅವಧಿಯಲ್ಲಿ ಮನೆಯಪಂಡ ಪ್ರಾಣ್ ಅಧ್ಯಕ್ಷರಾಗು ವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದರು ಎಂಬುವುದು ಪ್ರಾಣ್ ಅವರ ಪ್ರಬಲ ವಾದವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕೆಲ ಮುಖಂಡರು ಇವರಿಬ್ಬರನ್ನು ಸಮಾಧಾನಪಡಿಸುವ ಪ್ರಕ್ರಿಯೆ ಆರಂಭಿಸಿದ್ದರು. ಆದರೆ ಅಧ್ಯಕ್ಷ ಸ್ಥಾನದಲ್ಲಿದ್ದ ಸೋಮಣ್ಣ ಈ ವಿಚಾರದಲ್ಲಿ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಪ್ರಾಣ್ ಉಳಿದ ಸದಸ್ಯರ ಸಹಕಾರ ಪಡೆದು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಹಿ ಪಡೆದು ಉಪವಿಭಾಗಾಧಿಕಾರಿಗಳಿಗೆ ಕಳೆದ ಒಂದು ತಿಂಗಳ ಒಳಗೆ ಅರ್ಜಿ ಸಲ್ಲಿಸಿದ್ದರು.
ಅವಿಶ್ವಾಸ ಪ್ರಕ್ರಿಯೆ ಆರಂಭವಾದ ದಿನದಂದು ಪ್ರಾಣ್ ಬಳಿ ಇದ್ದ ಕೆಲ ಸದಸ್ಯರು ಅವಿಶ್ವಾಸ ಮಂಡನೆಗೆ ಗೈರು ಆಗುವ ಮೂಲಕ ಅವಿಶ್ವಾಸ ನಿರ್ಣಯಕ್ಕೆ ಸೋಲು ಆಗುವಂತೆ ಮಾಡಿದ್ದಾರೆ. ಇದರಿಂದ ಸಭೆಯಲ್ಲಿ ಕೇವಲ ೫ ಮಂದಿ ಮಾತ್ರ ಹಾಜರಿದ್ದರಿಂದ ಅವಿಶ್ವಾಸ ನಿರ್ಣಯವು ಬಿದ್ದು ಹೋಗಿದೆ. ಅಧ್ಯಕ್ಷರಾಗಿ ಮನೆಯಪಂಡ ಸೋಮಣ್ಣ ಮುಂದುವರೆ ಯುತ್ತಿದ್ದಾರೆ.
-ಹೆಚ್.ಕೆ. ಜಗದೀಶ್