ಮಡಿಕೇರಿ, ಸೆ. ೧೬: ಹುದಿಕೇರಿಯಲ್ಲಿ ಗೌರಿ-ಗಣೇಶ ಉತ್ಸವದ ಸಮಾರೋಪ ಕಾರ್ಯಕ್ರಮ ನಡೆಯಿತು. ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಬಾನಂಗಡ ಅರುಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಮುಖ್ಯ ಅತಿಥಿಯಾಗಿದ್ದ ವಕೀಲ ಮತ್ತು ನೋಟರಿ ಎಂ.ಟಿ. ಕಾರ್ಯಪ್ಪ ಮಾತನಾಡಿ, ಗೌರಿ-ಗಣೇಶ ಉತ್ಸವದ ಬಗ್ಗೆ ಮಾಹಿತಿಯಿತ್ತರು. ಎಲ್ಲರೂ ಅವರವರ ಧರ್ಮವನ್ನು ಪ್ರೀತಿಸಿ ಪರ ಧರ್ಮವನ್ನು ಗೌರವಿಸುವಂತೆ ಕರೆ ನೀಡಿದರು. ಮತ್ತೋರ್ವ ಅತಿಥಿ ಪತ್ರಕರ್ತ ಶ್ರೀಧರ್ ನೆಲ್ಲಿತಾಯ, ಹುದಿಕೇರಿಯಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಅಂರ್ರಾಷ್ಟಿçÃಯ ಕ್ರೀಡಾಪಟು ಮಾರಮಾಡ ಮಾಚಮ್ಮ, ಸಮಾಜ ಸೇವಕ ವಸೂರಾಜ್, ಶಿಕ್ಷಕಿಯರಾದ ಆಶಾ ಜ್ಯೋತಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ವಾಸು ಬಿದ್ದಪ್ಪ, ಲೋಹಿತ್ ಉಪಸ್ಥಿತರಿದ್ದರು. ವಂದನಾರ್ಪಣೆಯನ್ನು ಪತ್ರಕರ್ತ ರಾಜ್ ಕುಶಾಲಪ್ಪ ಮಾಡಿದರು. ರಾತ್ರಿ ಕೊಡವ ನೈಟ್ ಸಂಗೀತ ಕಾರ್ಯಕ್ರಮವನ್ನು ಚೆಕ್ಕೇರ ಪಂಚಮ್ ಮತ್ತು ತಂಡ ಆಯೋಜಿಸಿ ಮನರಂಜನೆ ನೀಡಿದರು.