ಸೋಮವಾರಪೇಟೆ, ಸೆ. ೧೭: ಕಳೆದೆರಡು ವರ್ಷಗಳ ಹಿಂದಿನವರೆಗೂ ಅದ್ಧೂರಿಯಾಗಿ ನಡೆಯುತ್ತಿದ್ದ ಆಯುಧ ಪೂಜೋತ್ಸವ ಸಮಾರಂಭ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದು, ಈ ವರ್ಷ ಮತ್ತೆ ಜನೋತ್ಸವ ಮಾದರಿಯಲ್ಲಿ ಅದ್ದೂರಿಯಾಗಿ ಆಯುಧ ಪೂಜೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಮೋಟಾರ್ ಯೂನಿಯನ್ ಅಧ್ಯಕ್ಷ ಕೆ.ಜಿ. ಸುರೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಸಂಭ್ರಮದ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಸಂಘದ ವತಿಯಿಂದ ದಾನಿಗಳ ಸಹಕಾರದಿಂದ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಉತ್ತರ ಕೊಡಗಿನ ಭಾಗದಲ್ಲಿ ದಸರಾವನ್ನು ನೆನಪಿಸುವಂತಹ ಜನೋತ್ಸವವನ್ನಾಗಿ ಆಯುಧ ಪೂಜೋತ್ಸವ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಅಕ್ಟೋಬರ್ ೪ರಂದು ಬೆಳಗ್ಗಿನಿಂದ ರಾತ್ರಿಯವರೆಗೂ ವೈವಿಧ್ಯಮಯ ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಕ್ಟೋಬರ್ ೪ರಂದು ಬೆಳಿಗ್ಗೆ ೭.೩೦ಕ್ಕೆ ನಗರದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಸಕ್ತ ಸಾಲಿನ ಸಮಾರಂಭಕ್ಕೆ ಚಾಲನೆ ನೀಡಲಾಗುವುದು. ೮.೩೦ಕ್ಕೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ೯ಗಂಟೆಗೆ ಸಮಾರಂಭದ ಉದ್ಘಾಟನೆ ನಡೆಯಲಿದೆ ಎಂದರು.

೯.೩೦ಕ್ಕೆ ಶಾಲಾ ಮಕ್ಕಳಿಗೆ ಡ್ಯಾನ್ಸ್-ಡ್ಯಾನ್ಸ್ ಸ್ಪರ್ಧೆ, ೧ ಗಂಟೆಗೆ ದಾನಿಗಳ ಸಹಕಾರದಿಂದ ಸಾವಿರಾರು ಮಂದಿಗೆ ಅನ್ನದಾನ, ಸಂಜೆ ೬.೩೦ಕ್ಕೆ ಆಯುಧ ಪೂಜಾ ಸಮಾರಂಭ ಉದ್ಘಾಟನೆ, ಅಲಂಕೃತ ವಾಹನ ಮತ್ತು ವರ್ಕ್ಶಾಪ್, ಸರ್ಕಾರಿ ಕಚೇರಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಸುರೇಶ್ ತಿಳಿಸಿದರು.

ಈ ಬಾರಿ ಕನ್ನಡ ಕೋಗಿಲೆ ಮತ್ತು ಸರಿಗಮಪ ಖ್ಯಾತಿಯ ಪುರುಷೋತ್ತಮ್ ಅವರ ಪಿವಿಆರ್ ಇವೆಂಟ್ಸ್ ತಂಡದಿAದ ರಾತ್ರಿ ಸಂಗೀತ ರಸಮಂಜರಿ ಏರ್ಪಡಿಸಲಾಗಿದೆ. ಸರಿಗಮಪ ಖ್ಯಾತಿಯ ಪುರುಷೋತ್ತಮ್, ಶಶಿಧರ್, ಮಿಮಿಕ್ರಿ ಗೋಪಿ, ನಾಸಿರ ಬಾನು, ಸಂದೇಶ್, ಚನ್ನಪ್ಪ, ರಿಶು ಸೇರಿದಂತೆ ಇತರ ಗಾಯಕರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಳಿಗ್ಗೆ ನಡೆಯುವ ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧೆಯನ್ನು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ಎ. ಜೀವಿಜಯ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಉದ್ಯಮಿ ಟೋನಿ ವಿನ್ಸೆಂಟ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಆಯುಧ ಪೂಜಾ ಸಮಾರಂಭವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಉದ್ಘಾಟಿಸಲಿದ್ದು, ಉದ್ಯಮಿಗಳಾದ ಕೆ.ಟಿ. ಸತೀಶ್, ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಗೌಡ, ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಪ್ರಮುಖರಾದ ಮಂಥರ್‌ಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಸಮಾರAಭದಲ್ಲಿ ಸಂಘದ ಸದಸ್ಯರಾಗಿರುವ ಬಿ.ಎಸ್. ಸೋಮಯ್ಯ, ಮಾಜಿ ಸೈನಿಕ ಹೆಚ್.ಬಿ. ಮಂಜುನಾಥ್, ಎನ್.ಯು. ಚಂದ್ರಕುಮಾರ್ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಕೆ.ಜಿ. ಸುರೇಶ್ ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್ಯದರ್ಶಿ ವಿನ್ಸಿ ಡಿಸೋಜ, ಉಪ ಕಾರ್ಯದರ್ಶಿ ಎಸ್.ಎಂ. ಕೃಷ್ಣ, ಖಜಾಂಚಿ ಮಣಿ ಕುಶಾಲಪ್ಪ ಅವರುಗಳು ಉಪಸ್ಥಿತರಿದ್ದರು.