ಗೋಣಿಕೊಪ್ಪ ವರದಿ, ಸೆ. ೧೬: ಪೊನ್ನಂಪೇಟೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಮಿಷನ್ ರೇಬಿಸ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ೭೦ ಶ್ವಾನಗಳಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಯಿತು. ಮುಖ್ಯ ಪಶುವೈದ್ಯಾಧಿಕಾರಿ ಡಾ. ಎ. ಎಸ್. ಶಾಂತೇಶ್ ಲಸಿಕೆ ನೀಡಿದರು.

ಅಭಿಯಾನ ತಾ. ೩೦ ರವರೆಗೆ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ರೇಬಿಸ್ ನಿರೋಧಕ ಲಸಿಕಾ ಅಭಿಯಾನ ನಡೆಯಲಿದ್ದು, ತಾ. ೧೬ ರಂದು ಹುದಿಕೇರಿ ಪಶುವೈದ್ಯ ಆಸ್ಪತ್ರೆ, ತಾ. ೧೭ ರಂದು ನೆಮ್ಮಲೆ ದುರ್ಗಿ ದೇವಸ್ಥಾನ ಹತ್ತಿರ, ತಾ.೧೯ ರಂದು ಶ್ರೀಮಂಗಲ ಪಶು ಆಸ್ಪತ್ರೆ, ಬಾಳೆಲೆ ಪಶು ಆಸ್ಪತ್ರೆ, ತಾ. ೨೧ ರಂದು ಕುಟ್ಟ, ತಿತಿಮತಿ, ತಾ.೨೨ ರಂದು ನಾಲ್ಕೇರಿ, ಕಾನೂರು, ತಾ.೨೩ ರಂದು ಬಿರುನಾಣಿ, ತಾ.೨೪ ರಂದು ಟಿ. ಶೆಟ್ಟಿಗೇರಿ, ತಾ. ೩೦ ರಂದು ಗೋಣಿಕೊಪ್ಪ ಕೆವಿಕೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಪೊನ್ನಂಪೇಟೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಪ್ರಕಟಣೆ ತಿಳಿಸಿದೆ.