ಮಡಿಕೇರಿ, ಸೆ. ೧೬: ಹೊಂಬೆಳಕು ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮ ತಾ. ೧೮ ರಂದು ಸಂಜೆ ೩ ಗಂಟೆಯಿAದ ೫ ಗಂಟೆಯವರೆಗೆ ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜ ಪ್ರಸಾದ ನಿಲಯದ ಸಭಾಂಗಣದಲ್ಲಿ ಜರುಗಲಿದೆ.

ಕಾರ್ಯಕ್ರಮದಲ್ಲಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಬೆಂಗಳೂರಿನ ಆಯುರ್ವೇದ ವೈದ್ಯೆ ಡಾ. ಅಭಿಜ್ಞಾ ಎನ್. ಉಪನ್ಯಾಸ ನೀಡಲಿದ್ದಾರೆ. ಕಿಗ್ಗಾಲು ಗಿರೀಶ್ ರಚನೆಯ ‘ಭಾಮಿನೀಷಟ್ಪದಿಯಲ್ಲಿ ಪ್ರಕೃತಿ ವೈಭವ’ ಪುಸ್ತಕವನ್ನು ಜಿ. ರಾಜೇಂದ್ರ ಅವರು ಬಿಡುಗಡೆಗೊಳಿಸಲಿದ್ದಾರೆ.