ಮಡಿಕೇರಿ, ಸೆ.೧೬: ರಕ್ತದಾನ ಅಮೃತ್ ಮಹೋತ್ಸವ ಅಭಿಯಾನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯು “ರಕ್ತದಾನವು ಒಗ್ಗಟ್ಟಿನ ಕಾರ್ಯವಾಗಿದೆ. ಪ್ರಯತ್ನಕ್ಕೆ ಕೈಜೋಡಿಸಿ ಮತ್ತು ಜೀವಗಳನ್ನು ಉಳಿಸಿ” ಎಂಬ ಘೋಷವಾಕ್ಯದೊಂದಿಗೆ ನಡೆಯಲಿದೆ.
ರಕ್ತದಾನ ಅಮೃತ್ ಮಹೋತ್ಸವ ಅಭಿಯಾನವು ತಾ. ೧೭ ರಿಂದ ಅಕ್ಟೋಬರ್ ೧ ರವರೆಗೆ ನಡೆಯಲಿದೆ. ಅಕ್ಟೋಬರ್ ೧ ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ರೋಟರಿ ಮತ್ತು ಮಡಿಕೇರಿ ಮಾಜಿ ಸೈನಿಕರ ಸಂಘ ಇವರ ಸಂಯುಕ್ತ ಆಶ್ರಯದಲಿ,್ಲ ರೋಟರಿ ಹಾಲ್ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಕಾರ್ಯಕ್ರಮ ನಡೆಯಲಿದೆ.
ರಕ್ತದಾನ ಅಮೃತ್ ಮಹೋತ್ಸವ ಅಭಿಯಾನದಲ್ಲಿ ಕೊಡಗು ಜಿಲ್ಲೆಯಲ್ಲಿ ೮ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ತಾ. ೧೭ ರಂದು (ಇಂದು) ಬೆಳಗ್ಗೆ ೧೦.೩೦ ಗಂಟೆಗೆ ನಗರದ ರೆಡ್ ಕ್ರಾಸ್ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ತಾ. ೧೮ ರಂದು ಬೆಳಗ್ಗೆ ೧೦.೩೦ ಗಂಟೆಗೆ ರಾಮಮಂದಿರ ದಸರಾ ದಶಮಂಟಪ ಸಮಿತಿ ವತಿಯಿಂದ ಚೌಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ, ತಾ. ೨೧ ರಂದು ವೀರಾಜಪೇಟೆ ಕ್ಲಬ್ ಮಹೇಂದ್ರ ವತಿಯಿಂದ ವೀರಾಜಪೇಟೆ ಕಡಂಗ ಕ್ಲಬ್ ಮಹೇಂದ್ರದಲ್ಲಿ, ತಾ. ೨೩ ರಂದು ಬೆಳಗ್ಗೆ ೧೦.೩೦ ಗಂಟೆಗೆ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರ, ತಾ. ೨೮ ರಂದು ಬೆಳಗ್ಗೆ ೧೦.೩೦ ಗಂಟೆಗೆ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ, ಅಕ್ಟೋಬರ್ ೧ ರಂದು ಬೆಳಗ್ಗೆ ೧೦.೩೦ ಗಂಟೆಗೆ ಮಡಿಕೇರಿ ರೋಟರಿ ಮತ್ತು ಎಕ್ಸ್ ಸರ್ವಿಸಸ್ ಮೆನ್ ಅಸೋಸಿಯೇಷನ್ ವತಿಯಿಂದ ರೋಟರಿ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಈ ಶಿಬಿರಗಳಲ್ಲಿ ಹೆಚ್ಚು ಜನರು ಪಾಲ್ಗೊಂಡು ರಕ್ತದಾನ ಮಾಡುವಂತೆ ಕೋರಿದೆ. ಮಾರ್ಗಸೂಚಿಯನ್ವಯ ರಕ್ತದಾನ ಶಿಬಿರಗಳನ್ನು ಹಾಗೂ ರಕ್ತ ದಾನಿಗಳು ಇ-ರಕ್ತಕೋಶ ತಂತ್ರಾAಶ/ಆರೋಗ್ಯ ಸೇತು ಆ್ಯಪ್ನಲ್ಲಿ ಗರಿಷ್ಠ ಮಟ್ಟದಲ್ಲಿ ನೋಂದಣಿ ಮಾಡುವುದು. hಣಣಠಿs://ತಿತಿತಿ.eಡಿಚಿಞಣಞosh.iಟಿ/ಃಐಆಂಊIಒS/bಟooಜbಚಿಟಿಞ/ಣಡಿಚಿಟಿsಚಿಛಿಣioಟಿs/bbಠಿubಟiಛಿiಟಿಜex.hಣmಟ, hಣಣಠಿs://ತಿತಿತಿ.eಡಿಚಿಞಣಞosh.iಟಿ/ಃಐಆಂಊIಒS/bಟooಜbಚಿಟಿಞ/ಛಿಚಿmಠಿSಛಿheಜuಟe.ಛಿಟಿಣ ಇ-ರಕ್ತಕೋಶ ತಂತ್ರಾAಶದಲ್ಲಿ ರಕ್ತದಾನ ಶಿಬಿರ ಆಯೋಜಿಸುವ ಸಂಘ ಸಂಸ್ಥೆಗಳು ಮತ್ತು ರಕ್ತದಾನಿಗಳು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ೦೮೨೭೨-೨೯೬೭೦೮, ೯೪೮೦೭೭೦೨೮೭ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.