ಮಧ್ಯಪ್ರದೇಶ, ಸೆ. ೧೭: ಭಾರತದ ಅರಣ್ಯಗಳಿಂದ ೭೦ ವರ್ಷಗಳ ಹಿಂದೆಯೇ ಸಂಪೂರ್ಣ ನಶಿಸಿಹೋಗಿದ್ದ, ಭೂಮಿಯಲ್ಲಿಯೇ ಅತ್ಯಂತ ವೇಗದ ಪ್ರಾಣಿ ಎನಿಸಿಕೊಂಡಿರುವ ಚಿರತೆ (ಚೀತಾ)ಗಳನ್ನು ಇದೀಗ ಮಧ್ಯಪ್ರದೇಶದ ಕೂನೋ ರಾಷ್ಟಿçÃಯ ಉದ್ಯಾನವನಕ್ಕೆ ಬಿಡುಗಡೆ ಮಾಡುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿದೆ. ಆಫ್ರಿಕಾ ಖಂಡದ ನಮೀಬಿಯಾ ದೇಶದಿಂದ ಏರ್‌ಫೋರ್ಸ್ ಹೆಲಿಕಾಪ್ಟರ್‌ಗಳಲ್ಲಿ ೮ ಚಿರತೆಗಳನ್ನು ಭಾರತಕ್ಕೆ ಇಂದು ತರಲಾಯಿತು. ೫ ಹೆಣ್ಣು ಹಾಗೂ ೩ ಗಂಡು ಚಿರತೆಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ

(ಮೊದಲ ಪುಟದಿಂದ) ತಮ್ಮ ೭೨ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕೂನೋ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ೧ ತಿಂಗಳುಗಳ ಕಾಲ ಚಿರತೆಗಳನ್ನು ಇತರ ಪ್ರಾಣಿಗಳ ಸಂಪರ್ಕಕ್ಕೆ ಬರದ ಹಾಗೆ ‘ಕ್ವಾರಂಟೈನ್’ನಲ್ಲಿ ಇರಿಸಿ ಸೂಕ್ಷö್ಮವಾಗಿ ಗಮನಿಸಲಿರುವುದಾಗಿ ತಿಳಿದು ಬಂದಿದೆ.

ಸುಮಾರು ೭೪೮ ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಕೂನೋ ರಾಷ್ಟಿçÃಯ ಉದ್ಯಾನವನದ ಸುತ್ತ ಮಾನವ ವಸತಿ ರಹಿತ ಪ್ರದೇಶವಾಗಿದ್ದು, ೭೦ ವರ್ಷಗಳ ಹಿಂದೆ, ೧೯೫೨ರಲ್ಲಿ ಕೊನೆಯದಾಗಿ ಈ ವ್ಯಾಪ್ತಿಯಲ್ಲಿಯೇ ಸ್ಥಳೀಯ ತಳಿಯ ಏಷಿಯಾಟಿಕ್ ಚಿರತೆಗಳು ಪತ್ತೆಯಾಗಿದ್ದವು. ಈ ಕಾರಣದಿಂದಾಗಿ ಚಿರತೆಗಳನ್ನು ಈ ಉದ್ಯಾನವನಕ್ಕೆ ಬಿಡುಗಡೆ ಮಾಡಲಾಗಿದೆ. ಇದಲ್ಲದೆ ಇಲ್ಲಿನ ಹವಾಮಾನವು ಚಿರತೆಗೆ ಸೂಕ್ತವಾಗಿದ್ದು, ಅವುಗಳ ಸಮೃದ್ಧಿಗೆ ಸಹಕಾರವಾಗಲಿದೆ. ಮುಂದಿನ ೫ ವರ್ಷಗಳಲ್ಲಿ ಇದೇ ರೀತಿ ಸುಮಾರು ೫೦ ಚಿರತೆಗಳನ್ನು ಭಾರತದ ಅರಣ್ಯಕ್ಕೆ ಬಿಡುವ ಕಾರ್ಯಕ್ರಮವನ್ನು ‘ಪ್ರಾಜೆಕ್ಟ್ ಚೀತಾ’ ಯೋಜನೆ ಹೊಂದಿದೆ.

ಅತ್ಯAತ ವೇಗದ ಪ್ರಾಣಿಯಾಗಿರುವ ಚೀತಾ ಅಲ್ಪಾವಧಿಯಲ್ಲಿ ಗಂಟೆಗೆ ಸುಮಾರು ೧೨೦ ಕಿ.ಮೀ. ವೇಗದಲ್ಲಿ ಓಡಬಲ್ಲ ಸಾಮರ್ಥ್ಯ ಹೊಂದಿದೆ. ಈ ಕಾರಣದಿಂದಾಗಿ ಈ ಹಿಂದೆ ಈ ಚಿರತೆಗಳನ್ನು ಹಿಡಿದು ಸಾಕಿ ಇತರ ಪ್ರಾಣಿಗಳ ಬೇಟೆಗೆ ಬಳಸಲಾಗುತಿತ್ತು. ಕಾಲಕ್ರಮೇಣ ಇವುಗಳ ವಾಸ ಸ್ಥಳಗಳು ಮಾನವನಿಂದ ಒತ್ತುವರಿಯಾಗತೊಡಗಿದವು ಹಾಗೂ ರಾಜರ ಕಾಲದಲ್ಲಿ ಇವುಗಳನ್ನು ಸ್ಪರ್ಧೆ ಲೆಕ್ಕಾಚಾರದಲ್ಲಿ ಬೇಟೆ ಕೂಡ ಮಾಡಲಾಗುತ್ತಿತ್ತು. ಇದರಿಂದಾಗಿ ಸಂಪೂರ್ಣವಾಗಿ ನಶಿಸಿಹೋದವು. ಇದೀಗ ‘ಪ್ರಾಜೆಕ್ಟ್ ಚೀತಾ’ ಯೋಜನೆಯಿಂದ ಚಿರತೆಗಳಿಗೆ ಮತ್ತೇ ಭಾರತದಲ್ಲಿ ನೆಲೆ ಸಿಕ್ಕಂತಾಗಿದೆ.

ಮೂಲ ತಳಿಯಲ್ಲ

ಭಾರತಕ್ಕೆ ನಮೀಬಿಯಾದಿಂದ ತರಲಾದ ಚಿರತೆಗಳು ಆಫ್ರಿಕನ್ (ಆಫ್ರಿಕಾ ಖಂಡದ) ತಳಿಯ ಚಿರತೆಗಳಾಗಿವೆ. ಭಾರತದಲ್ಲಿ ನಶಿಸಿಹೋಗಿದ್ದ ಏಷಿಯಾಟಿಕ್ (ಏಷಿಯಾ ಖಂಡದ) ಚಿರತೆಗಳ ಸಂತತಿ ಕೇವಲ ಇರಾನ್ ದೇಶದಲ್ಲಿ ಮಾತ್ರ ಜೀವಂತವಿದೆ. ಈ ತಳಿಯನ್ನು ಭಾರತಕ್ಕೆ ತರಲು ಕೈಗೊಂಡ ಪ್ರಯತ್ನಗಳು ವಿಫಲವಾದ ಕಾರಣ ಇದೀಗ ಆಫ್ರಿಕನ್ ತಳಿಯ ಚಿರತೆಯನ್ನು ತರಿಸಲಾಗಿದೆ. ಇರಾನ್ ದೇಶವು ಆ ದೇಶದ ಚಿರತೆಗಳನ್ನು ಭಾರತಕ್ಕೆ ನೀಡುವುದಾದರೆ ಭಾರತದಲ್ಲಿನ ಏಷಿಯಾಟಿಕ್ ಸಿಂಹಗಳನ್ನು ನೀಡಬೇಕಾಗಿ ಷರತ್ತು ವಿಧಿಸಿತ್ತು. ಇದಕ್ಕೆ ಒಪ್ಪದ ಭಾರತ ಆಫ್ರಿಕನ್ ತಳಿಗೆ ತೃಪ್ತಿಪಟ್ಟಿದೆ.

ಆಹಾರಕ್ಕಾಗಿ ತೀವ್ರ ಸ್ಪರ್ಧೆ.. ಆತಂಕ

ಚೀತಾ ವೇಗದಲ್ಲಿ ಎತ್ತಿದ ಕೈ ಆದರೂ ಶಕ್ತಿಯಲ್ಲಿ ಇತರ ಬೇಟೆಗಾರ ಪ್ರಾಣಿಗಳಾದ ಸಿಂಹ, ಹುಲಿ, ಲೆಪರ್ಡ್ಗಳಿಗೆ ಹೋಲಿಸಿದರೆ ಬಹಳ ದುರ್ಬಲತೆ ಹೊಂದಿದೆ. ಆಫ್ರಿಕಾದಲ್ಲಿ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಚೀತಾ, ಬೇಟೆ ಮಾಡಿದ ಕೆಲವೇ ಕ್ಷಣಗಳಲ್ಲಿ ತನ್ನ ಆಹಾರವನ್ನು ಭಕ್ಷಿಸುವುದು ಅಗತ್ಯವಿದೆ. ಇಲ್ಲದಿದ್ದಲ್ಲಿ ಇತರ ಪ್ರಾಣಿಗಳಾದ ಸಿಂಹ, ಲೆಪರ್ಡ್, ಹೈನಾ ಸೇರಿದಂತೆ ಕಾಡು ನಾಯಿಗಳ ಹಿಂಡು ಈ ಚೀತಾ ಮೇಲೆ ಬಲಪ್ರದರ್ಶನ ಮಾಡಿ ಬೇಟೆ ಕಸಿದುಕೊಳ್ಳುವ ಘಟನೆಗಳು ಸಂಭವಿಸಬಹುದು. ಆಫ್ರಿಕಾದಲ್ಲಿ ಈ ಘಟನೆಗಳು ನಡೆಯುವುದು ಸಾಮಾನ್ಯ.

ಇದೀಗ ಭಾರತದ ಮಧ್ಯಪ್ರದೇಶದಲ್ಲಿಯೂ ಸಿಂಹ, ಲೆಪರ್ಡ್ ಸಂತತಿ ಹೆಚ್ಚಿರುವುದರಿಂದ ಇವುಗಳ ಮಧ್ಯೆ ಚೀತಾ ಯಾವ ರೀತಿ ಬೆರೆಯುತ್ತದೆ ಎಂಬುದು ಆತಂಕ ಸೃಷ್ಟಿಸಿದೆ. ಕೆಲವು ಪ್ರಾಣಿ ತಜ್ಞರು ‘ಪ್ರಾಜೆಕ್ಟ್ ಚೀತಾ’ ಯೋಜನೆಯ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಪ್ರಸ್ತುತ ಚೀತಾಗಳನ್ನು ಬಿಡುಗಡೆ ಮಾಡಲಾಗಿರುವ ಕೂನೋ ರಾಷ್ಟಿçÃಯ ಉದ್ಯಾನವನವು ತೀವ್ರ ಸ್ವರೂಪದ ಅಧ್ಯಯನ ನಡೆಸಿ ಚೀತಾಗಳಿಗೆ ಸೂಕ್ತ ಸ್ಥಳವೆಂದು ಗುರುತಿಸಲಾದ ಸ್ಥಳ ಎಂದು ಸರಕಾರ ಸಮರ್ಥಿಸಿಕೊಂಡಿದೆ.