ಮಡಿಕೇರಿ, ಸೆ.೧೭: ಮಡಿಕೇರಿ ದಸರಾ ಸಂದರ್ಭ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅಕ್ಟೋಬರ್ ೨ ರಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಯೋಗದಲ್ಲಿ ಜಾನಪದ ದಸರಾ ಉತ್ಸವ ಆಯೋಜಿಸಲಾಗಿದ್ದು, ಈ ಸಂದರ್ಭ ಜಿಲ್ಲೆಯ ಜಾನಪದ ಕಲಾತಂಡಗಳಿAದ ಪ್ರದರ್ಶನಕ್ಕಾಗಿ, ಕ್ರೀಡೆಗಳಿಗೆ, ವಸ್ತುಪ್ರದರ್ಶನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮತ್ತು ಉತ್ಸವದ ಸಂಚಾಲಕ ಎಸ್.ಐ. ಮುನೀರ್ ಅಹ್ಮದ್ ಈ ಕುರಿತಾಗಿ ಜಂಟಿಯಾಗಿ ಮಾಹಿತಿ ನೀಡಿದ್ದಾರೆ.

ಮಡಿಕೇರಿ ದಸರಾದಲ್ಲಿ ಎರಡನೇ ಬಾರಿ ಜಾನಪದ ದಸರಾ ಉತ್ಸವ ಆಯೋಜಿತವಾಗಿದೆ. ಅಕ್ಟೋಬರ್ ೨ ರಂದು ಬೆಳಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಜಾನಪದ ಉತ್ಸವ ಜರುಗಲಿದ್ದು, ನಂತರ ಸಂಜೆ ೭ ಗಂಟೆಯಿAದ ೧೦ ಗಂಟೆಯವರೆಗೆ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನ ಆಯೋಜಿತವಾಗಿದೆ.

ಈ ಕಾರ್ಯಕ್ರಮಗಳಿಗೆ ಜಿಲ್ಲೆಯ ಜಾನಪದ ತಂಡಗಳಿAದ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಸಮೂಹ ಜಾನಪದ ಗಾಯನ, ಸಮೂಹ ಜಾನಪದ ನೃತ್ಯ ಪ್ರದರ್ಶನ ನೀಡಲಿಚ್ಚಿಸುವ ತಂಡಗಳು ಇದೇ ಸೆಪ್ಟೆಂಬರ್ ೨೨ ರೊಳಗಾಗಿ ತಮ್ಮ ಅರ್ಜಿಯನ್ನು ಸಂಚಾಲಕರು, ಮಡಿಕೇರಿ ಜಾನಪದ ದಸರಾ ಉತ್ಸವ, ಕೇರಾಫ್ ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ -೫೭೧೨೦೧ ಇಲ್ಲಿಗೆ ಕಳುಹಿಸಬೇಕು. ತಾವು ನೀಡುವ ಕಾರ್ಯಕ್ರಮದ ಪ್ರಾಕಾರ, ಕಾರ್ಯಕ್ರಮದ ಅವಧಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ - ಮುನೀರ್ ಅಹ್ಮದ್ - ೯೮೮೬೧೮೧೬೧೩

ಜಾನಪದ ಕ್ರೀಡೆ : ಜಾನಪದ ಉತ್ಸವ ಸಂದರ್ಭ ವೈವಿಧ್ಯಮಯ ಜಾನಪದ ಕ್ರೀಡೆಗಳನ್ನು ಕೂಡ ವಿದ್ಯಾರ್ಥಿ ವಿಭಾಗ, (ಪ್ರಾಥಮಿಕ, ಪ್ರೌಢ ಮತ್ತು ಪಿಯು ವಿಭಾಗ) ಹಾಗೂ ಸಾರ್ವಜನಿಕ ವಿಭಾಗದಲ್ಲಿ ಆಯೋಜಿಸಲ್ಪಟ್ಟಿದೆ. ಚಿನ್ನಿದಾಂಡು, ಚನ್ನಮಣೆ, ಲಗೋರಿ, ಬುಗುರಿಯಾಟ, ಗೋಲಿಯಾಟ, ಹಗ್ಗ ಜಗ್ಗಾಟ, ಗೋಣಿಚೀಲ ಕಾಲಿಗೆ ಕಟ್ಟಿ ಓಡುವುದು ಈ ಕ್ರೀಡೆಗಳಲ್ಲಿ ಸ್ಪರ್ಧೆ ಆಯೋಜಿತವಾಗಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ನೋಂದಾಯಿಸಲು ಮತ್ತು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ - ಸಿದ್ದರಾಜು ೯೪೪೯೪೦೫೬೦೯, ಬೋಪಣ್ಣ -೯೧೧೦೮೭೪೨೪೪

ಜಾನಪದ ವಸ್ತು ಪ್ರದರ್ಶನ : ಜಾನಪದ ದಸರಾ ಉತ್ಸವ ಸಂದರ್ಭ ಜಿಲ್ಲೆಯ ಜನರು ಸಂಗ್ರಹಿಸಿರುವ ಜಾನಪದ ಪರಿಕರಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಪುರಾತನ ಕಾಲದ ಅಪೂರ್ವ ಜಾನಪದೀಯ ಮೌಲ್ಯವಿರುವ ಪರಿಕರ, ವಸ್ತುಗಳನ್ನು ಅ.೨ ರಂದು ಬೆಳಗ್ಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿತ ಜಾನಪದ ದಸರಾ ಸಂದರ್ಭ ಪ್ರದರ್ಶನಕ್ಕೆ ಇರಿಸಬಹುದು.

ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಇಚ್ಚಿಸಿರುವವರು ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ - ಹರೀಶ್ ಕಿಗ್ಗಾಲು - ೭೦೧೯೦೯೫೩೮೭.