ನಾಪೋಕ್ಲು, ಸೆ. ೧೬: ಸುನ್ನಿ ಜಂಇಯ್ಯತುಲ್ ಮುಅಲ್ಲಿಮಿನ್ ಜಿಲ್ಲಾ ಸಮಿತಿಯ ಮಹಾಸಭೆ ಇತ್ತೀಚೆಗೆ ಮುಸ್ತಾಫಾ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ತ್ಯಾಗತ್ತೂರಿನಲ್ಲಿ ನಡೆಯಿತು. ಎಸ್‌ಜೆಎಂ ರಾಜ್ಯನಾಯಕ ಕೆ.ಕೆ.ಎಂ. ಕಾಮಿಲ್ ಸಖಾಫಿ ಅವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಸಮಿತಿ ಅಸ್ತಿತ್ವಕ್ಕೆ ಬಂತು. ಅಧ್ಯಕ್ಷರಾಗಿ ಮುಸ್ತಾಫಾ ಸಖಾಫಿ, ಜಿಲ್ಲಾ ಕಾರ್ಯದರ್ಶಿಯಾಗಿ ಅಶ್ರಫ್ ಸಖಾಫಿ, ಕೋಶಾಧಿಕಾರಿಯಾಗಿ ಅಬ್ದುಲ್ಲ ಸಖಾಫಿ ಆಯ್ಕೆಯಾದರು.

ಮಿಷಿನರಿ ವಿಭಾಗದ ಉಪಾಧ್ಯಕ್ಷರಾಗಿ ಅಬ್ದುಲ್ ಅಜೀಜ್ ಮುಸ್ಲಿಯಾರ್, ಮ್ಯಾಗಝೀನ್ ವಿಭಾಗದ ಉಪಾಧ್ಯಕ್ಷರಾಗಿ ಅಹಮದ್ ಮದನಿ, ಟ್ರೆöÊನಿಂಗ್ ವಿಭಾಗದ ಉಪಾಧ್ಯಕ್ಷರಾಗಿ ಅಬ್ದುಲ್ ರಜಾಕ್ ಸಖಾಫಿ, ಪರೀಕ್ಷಾ ವಿಭಾಗದ ಉಪಾಧ್ಯಕ್ಷರಾಗಿ ಮುನೀರ್ ಸಅದಿ, ವೆಲ್‌ಫೇರ್ ವಿಭಾಗದ ಉಪಾಧ್ಯಕ್ಷರಾಗಿ ಹಸೈನಾರ್ ಮಹ್‌ಲರಿ ಆಯ್ಕೆಯಾಗಿದ್ದಾರೆ.

ಮಿಷಿನರಿ ಕಾರ್ಯದರ್ಶಿಯಾಗಿ ನಜೀರ್ ಸಖಾಫಿ, ಮ್ಯಾಗಝೀನ್ ಕಾರ್ಯದರ್ಶಿಯಾಗಿ ಹ್ಯಾರೀಸ್ ಜೈನಿ, ತರಬೇತಿ ಕಾರ್ಯದರ್ಶಿಯಾಗಿ ಹಸೈನಾರ್ ಮುಸ್ಲಿಯಾರ್, ಪರೀಕ್ಷಾ ಕಾರ್ಯದರ್ಶಿಯಾಗಿ ಷಂಶುದ್ದೀನ್ ಅಂಜದಿ ಹಾಗೂ ವೆಲ್‌ಫೇರ್ ಕಾರ್ಯದರ್ಶಿಯಾಗಿ ಉಸಾಮ ಸಖಾಫಿ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ಹಸನ್ ಸಅದಿ ಹಾಗೂ ಅಬ್ದುಲ್ ರಜಾಕ್ ಸಅದಿ, ಆಯ್ಕೆಯಾದರು. ಸ್ಥಳೀಯ ಖತೀಬರಾದ ಬಷೀರ್ ಅಹಮದ್ ಸಖಾಫಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ ಸ್ವಾಗತಿಸಿ, ವಂದಿಸಿದರು.