ಗೋಣಿಕೊಪ್ಪ ವರದಿ, ಸೆ. ೧೭: ಕಳತ್ಮಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ವಿವಿಧ ರೀತಿಯ ಕೊಡುಗೆ ವಿತರಣಾ ಕಾರ್ಯಕ್ರಮ ನಡೆಯಿತು. ರೋಟರಿ ಹಿರಿಯ ಸದಸ್ಯ ಅಜ್ಜಿಕುಟ್ಟೀರ ಸಜನ್ ಚಂಗಪ್ಪ ೩೦ ಕುರ್ಚಿಗಳನ್ನು ನೀಡಿದರು. ಪಿ.ಬಿ. ಪೂಣಚ್ಚ, ಕೆ.ಎಂ ಕಾವೇರಪ್ಪ, ಪಿ.ಆರ್. ವಿಜಯ್, ಕಿಶೋರ್ ಮಾದಪ್ಪ ನಲಿಕಲಿ ತರಗತಿಗೆ ಮೇಜು ನೀಡಿದರು. ಕೆ.ಎಸ್. ಲೀನಾ ವಿವೇಕ್ ವಾಟರ್ ಫಿಲ್ಟರ್ ನೀಡಿದರು. ವಿವಿಧ ಜಾತಿಯ ಹಣ್ಣಿನ ಗಿಡ ವಿತರಿಸಲಾಯಿತು.

ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆ ಜೆ.ಕೆ. ಸುಭಾಷಿಣಿ, ಕಾರ್ಯದರ್ಶಿ ಅರುಣ್ ತಮ್ಮಯ್ಯ, ಪ್ರಮುಖರಾದ ಕಾಡ್ಯಮಾಡ ನೆವಿನ್, ಡಾ. ಚಂದ್ರಶೇಖರ್, ಹೊಸೂರು ಗ್ರಾ.ಪಂ. ಅಧ್ಯಕ್ಷೆ ಶಾಂತಿ ಸೋಮಯ್ಯ, ಉಪಾಧ್ಯಕ್ಷ ಧನು ಪೂಣಚ್ಚ, ಗ್ರಾಮದ ಪ್ರಮುಖರಾದ ಗೋಪಿ ಚಿಣ್ಣಪ್ಪ, ಕತ್ರಿಕೊಲ್ಲಿ ಚಂದ್ರಶೇಖರ್, ಕೊಲ್ಲೀರ ನರು ಇದ್ದರು.