ಗೋಣಿಕೊಪ್ಪ, ಸೆ. ೧೬: ಗೋಣಿಕೊಪ್ಪ ದಸರಾ ಆಚರಣೆಯಲ್ಲಿ ತಾ.೨೮ ರಿಂದ ತಾ. ೩೦ರವರೆಗೆ ಕಾವೇರಿ ಕಲಾವೇದಿಕೆ, ಅನುದಾನಿತ ಪ್ರೌಢಶಾಲೆ, ಜಿಎಂಪಿ ಶಾಲೆಯಲ್ಲಿ ಮಕ್ಕಳ ದಸರಾ ಆಯೋಜಿಸಲಾಗಿದೆ. ಚೆಸ್, ಚಿತ್ರಕಲೆ, ವಿಜ್ಞಾನ ಮೇಳ, ಸಾಂಸ್ಕೃತಿಕ ಸ್ಪರ್ಧೆಗಳು ಪ್ರತ್ಯೇಕ ಸ್ಥಳಗಳಲ್ಲಿ ನಡೆಯಲಿವೆೆ.

ತಾ. ೨೮ ರಂದು ಅನುದಾನಿತ ಪ್ರೌಢಶಾಲೆಯಲ್ಲಿ ಚೆಸ್ ಸ್ಪರ್ಧೆ ನಡೆಯಲಿದ್ದು, ಎಲ್‌ಕೆಜಿ - ೪ ನೇ ತರಗತಿ, ೫ ರಿಂದ ೭ ನೇ ತರಗತಿ, ೮ ರಿಂದ ೧೦ ನೇ ತರಗತಿ ಮತ್ತು ಮುಕ್ತ ವಿಭಾಗದಲ್ಲಿ ಪಾಲ್ಗೊಳ್ಳುವವರು ೯೪೪೮೩೮೩೯೧೦. ಸಂಪರ್ಕಿಸಬಹುದಾಗಿದೆ.

ತಾ. ೩೦ ರಂದು ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ನವರಾತ್ರಿ, ದುರ್ಗಾಪೂಜೆ, ದಸರಾ, ಜಂಬೂ ಸವಾರಿ ವಿಷಯದಲ್ಲಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ. ೧-೪, ೫-೭, ೮-೧೦ ವಿಭಾಗದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ೯೪೪೯೭೬೧೨೯೬ ಸಂಪರ್ಕಿಸಬಹುದಾಗಿದೆ.

ಜಿಎAಪಿ ಶಾಲಾ ಆವರಣದಲ್ಲಿ ವಿಷಯ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಎಂಬ ವಿಷಯದಲ್ಲಿ ವಿಜ್ಞಾನ ಮೇಳ ಆಯೋಜಿಸಲಾಗಿದ್ದು, ೫-೭, ೮-೧೦, ೧೧ - ೧೨ ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೯೪೪೯೨೦೨೦೫೫, ೯೯೮೬೯೩೯೩೫೭ ಸಂಪರ್ಕಿಸಬಹುದಾಗಿದೆ.

ಕಾವೇರಿ ಕಲಾ ವೇದಿಕೆಯಲ್ಲಿ ೧-೧೦ ವಿದ್ಯಾರ್ಥಿಗಳಿಗೆ ಮಕ್ಕಳ ಸಂತೆ, ೧ ರಿಂದ ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ರಂಗೋಲಿ ಸ್ಪರ್ಧೆ ನಡೆಯಲಿದೆ. ೮ ವಿದ್ಯಾರ್ಥಿಗಳ ತಂಡಕ್ಕೆ ಸಾಮೂಹಿಕ ಜಾನಪದ ನೃತ್ಯ, ೧ ರಿಂದ ೧೬ ವರ್ಷದೊಳಗಿನ ವಿದ್ಯಾರ್ಥಿಗಳಿಗೆ (೬ ಜನರ ತಂಡ) ಸಾಮೂಹಿಕ ದೇಶಭಕ್ತಿ ಗೀತೆ, ವೈಯಕ್ತಿಕ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳ ಸಂತೆಯಲ್ಲಿ ಭಾಗವಹಿಸುವವರು ೭೩೪೯೦೬೪೮೮೬, ರಂಗೋಲಿ ಸ್ಪರ್ಧೆಗೆ ೭೩೩೮೬೧೭೮೧೭, ಜಾನಪದ ನೃತ್ಯ ವಿಭಾಗಕ್ಕೆ ೭೬೧೯೨೭೦೫೨೯, ದೇಶಭಕ್ತಿ ಗೀತೆಗೆ ೭೭೬೦೨೭೨೮೨೮, ಛದ್ಮವೇಷ ಸ್ಪರ್ಧೆಗೆ ಭಾಗವಹಿಸುವವರು ೮೬೬೦೫೭೧೦೯೭ ಸಂಪರ್ಕಿಸಬಹುದಾಗಿದೆ ಎಂದು ಕಾವೇರಿ ದಸರಾ ಸಮಿತಿ ಪ್ರಕಟಣೆ ತಿಳಿಸಿದೆ.