ಶನಿವಾರಸಂತೆ, ಸೆ. ೧೬: ಶನಿವಾರಸಂತೆ ಪಟ್ಟಣದ ಲಯನ್ಸ್ ಕ್ಲಬ್ ಆಫ್ ಹುಣಸೂರು ಕಾವೇರಿ ಸಂಭ್ರಮದ ವತಿಯಿಂದ ೨೦೨೨-೨೩ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಹಾಗೂ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯಪಾಲ ಕೆ. ದೇವೇಗೌಡ ಅವರು ಉದ್ಘಾಟಿಸಿದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಲಯನ್ಸ್ ಸೇವಾ ಸಂಸ್ಥೆ ಪ್ರಪಂಚದಾದ್ಯAತ ಸುಮಾರು ೨೩೦ ಕ್ಕಿಂತ ಹೆಚ್ಚು ದೇಶಗಳಲ್ಲಿ ಸೇವಾ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದೆ. ಮುಖ್ಯವಾಗಿ ಡಯಾಬಿಟಿಸ್, ಕಣ್ಣು, ಕ್ಯಾನ್ಸರ್, ಹೃದಯ ಸಂಬAಧಿ ಕಾಯಿಲೆಗಳ ತಪಾಸಣೆ ಮಾಡುವ ಮುಖಾಂತರ ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಮಾರ್ಗದರ್ಶನ ನೀಡುವುದರ ಜತೆಗೆ ಇಂದಿನ ದಿನಗಳಲ್ಲಿ ಪ್ರಕೃತಿಯಲ್ಲಿ ಮಳೆಯಿಂದ ಉಂಟಾದAತ ಅನಾಹುತಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಆರ್ಥಿಕ ಸಹಾಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಮುಖರಾದ ಲಯನ್ ಕೃಷ್ಣೇಗೌಡ, ಎನ್. ಸುಬ್ರಮಣ್ಯ, ಕೆ.ಎನ್. ರಾಜಶೇಖರ್ ಮಾತನಾಡಿ, ಸದಸ್ಯರುಗಳ ಜವಾಬ್ದಾರಿ ಹಾಗೂ ಹೊಸ ಸದಸ್ಯರ ಸೇರ್ಪಡೆ ಬಗ್ಗೆ ಪೂರ್ಣ ಮಾಹಿತಿ ನೀಡಿದರು. ಈ ಸಂದರ್ಭ ಡಿ.ಪಿ. ಬೋಜಪ್ಪ, ಸುಬ್ರಮಣಿ ಅವರುಗಳು ಸೇರ್ಪಡೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಲಯನ್ ಅಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ ಮಾತನಾಡಿ, ತನ್ನ ಅವಧಿಯಲ್ಲಿ ಸಮಾಜಸೇವೆ ಮಾಡಲು ಬದ್ಧನಾಗಿದ್ದು ಇವುಗಳ ಅನುಷ್ಠಾನಕ್ಕೆ ಸದಸ್ಯರ ಸಹಕಾರ ಕೋರಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಲಯನ್ ಜಿ. ನಾರಾಯಣ ಸ್ವಾಮಿ ನೂತನ ಅಧ್ಯಕ್ಷರಿಗೆ ಶುಭ ಕೋರಿದರು. ವೇದಿಕೆಯಲ್ಲಿ ಖಜಾಂಚಿ ಬಿ.ಕೆ. ಚಿಣ್ಣಪ್ಪ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಪೂರ್ಣ ಸಹಕಾರ ನೀಡುತ್ತಿದ್ದ ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಲಯನ್ ಉಪಾಧ್ಯಕ್ಷರುಗಳಾದ ಕೆ.ಎನ್. ಕಾರ್ಯಪ್ಪ, ಜಿ.ಬಿ. ಪರಮೇಶ್, ಕಾರ್ಯದರ್ಶಿ ಎಂ.ಆರ್. ನಿರಂಜನ್, ಮಾಜಿ ಅಧ್ಯಕ್ಷರುಗಳಾದ ಎನ್.ಬಿ. ನಾಗಪ್ಪ, ಬಿ.ಸಿ. ಧರ್ಮಪ್ಪ, ಸದಸ್ಯರುಗಳಾದ ಟಿ.ಆರ್. ಕೇಶವಮೂರ್ತಿ, ಎಂ.ಆರ್. ಮಲ್ಲೇಶ್, ಎಂ.ಎನ್. ಶಂಕರ್, ಬಿ.ಬಿ. ನಾಗರಾಜ್, ಎಸ್.ಜಿ. ನರೇಶಚಂದ್ರ, ಜಿ.ಪಿ. ಪುಟ್ಟಪ್ಪ, ಡಿ.ಪಿ. ಬೋಜಪ್ಪ, ಸುಬ್ರಮಣಿ ಉಪಸ್ಥಿತರಿದ್ದರು. ಸದಸ್ಯ ಬಿ.ಬಿ. ನಾಗರಾಜ್ ಸ್ವಾಗತಿಸಿ, ನೂತನ ಅಧ್ಯಕ್ಷರ ಕಿರುಪರಿಚಯ ಮಾಡಿದರು. ಸದಸ್ಯ ಎಂ.ಆರ್. ಮಲ್ಲೇಶ್ ಧ್ವಜವಂದನೆ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಎನ್.ಬಿ. ನಾಗಪ್ಪ ವಂದಿಸಿದರು.