ಮಡಿಕೇರಿ, ಸೆ. ೧೫: ಪ್ರಸಕ್ತ (೨೦೨೨-೨೩) ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಯನ್ನು ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದ ಕ್ರೀಡಾಕೂಟ ಸ್ಪರ್ಧೆಯಲ್ಲಿ ಭಾಗವಹಿಸಿರುವ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಗುಂಪುಗಳಿಗೆ ಮಾತ್ರ ವಿಭಾಗ ಮಟ್ಟದಲ್ಲಿ ಭಾಗವಹಿಸಲು ಅರ್ಹರಿದ್ದು, ಈ ಕುರಿತು ಜಿಲ್ಲಾ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ನಿಗದಿತ ಜಿಲ್ಲೆಯ ಕ್ರೀಡಾ ಕೇಂದ್ರ ಸ್ಥಳಗಳಲ್ಲಿ ಆಯಾಯ ಜಿಲ್ಲೆಯ ಕ್ರೀಡಾ ಅಧಿಕಾರಿಗಳು ನಿಗದಿಪಡಿಸಿರುವ ಸಮಯದಲ್ಲಿ ವರದಿ ಮಾಡಿಕೊಳ್ಳುವಂತೆ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಕೋರಿದ್ದಾರೆ.

ಉಡುಪಿ ವಿಭಾಗ ತಾ. ೧೭ ರಂದು ಮಧ್ಯಾಹ್ನ ೧೨ಕ್ಕೆ ಫುಟ್‌ಬಾಲ್, ೧೮ ರಂದು ಬೆಳಿಗ್ಗೆ ೮ ಗಂಟೆಗೆ ಬಾಕ್ಸಿಂಗ್, ವುಷು, ಟೆನ್ನಿಸ್, ಈಜು ಸ್ಪರ್ಧೆಗಳು ಉಡುಪಿ ಜಿಲ್ಲೆಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ದಕ್ಷಿಣ ಕನ್ನಡ ವಿಭಾಗದಲ್ಲಿ ತಾ. ೧೮ ಮತ್ತು ೧೯ ರಂದು ಬೆಳಿಗ್ಗೆ ೯ ಗಂಟೆಗೆ ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೆಟ್ ಬಾಲ್, ಕುಸ್ತಿ, ಹ್ಯಾಂಡ್ ಬಾಲ್, ಟೇಬಲ್ ಟೆನ್ನಿಸ್, ನೆಟ್ ಬಾಲ್, ಭಾರ ಎತ್ತುವುದು, ಬಾಲ್ ಬ್ಯಾಡ್ಮಿಂಟನ್ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮಂಡ್ಯ ವಿಭಾಗದಲ್ಲಿ ತಾ. ೨೦ ಮತ್ತು ೨೧ ರಂದು ಬೆಳಿಗ್ಗೆ ೮.೩೦ ಗಂಟೆಗೆ ಖೋ ಖೋ, ಕಬಡ್ಡಿ, ಥ್ರೋಬಾಲ್, ಷಟಲ್ ಬ್ಯಾಡ್ ಬ್ಯಾಡ್ಮಿಂಟನ್ ಜೂಡೊ, ಟೆಕ್ವೊಂಡೊ ಮಂಡ್ಯದ ವಿಶ್ವೇಸ್ವರ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕೊಡಗು ಜಿಲ್ಲೆಯಲ್ಲಿ ತಾ. ೨೦ ಮತ್ತು ೨೧ ರಂದು ಬೆಳಿಗ್ಗೆ ೯ ಗಂಟೆಗೆ ಹಾಕಿ ಹಾಗೂ ಜಿಮ್ಯಾಸ್ಟಿಕ್ (ಆಯ್ಕೆ) ಕೂಡಿಗೆ ಕ್ರೀಡಾ ಶಾಲೆಯಲ್ಲಿ ನಡೆಯಲಿದೆ.

ಚಾಮರಾಜನಗರದಲ್ಲಿ ತಾ. ೨೦ ರಂದು ಬೆಳಿಗ್ಗೆ ೯ ಗಂಟೆಗೆ ಫೆನ್ಸಿಂಗ್, ಆರ್ಚರಿ ಸಂತೆಮರಳ್ಳಿ ಕ್ರೀಡಾ ವಸತಿ ನಿಲಯದಲ್ಲಿ ನಡೆಯಲಿದೆ.

ಜಿಲ್ಲಾಮಟ್ಟದಲ್ಲಿ ಭಾಗವಹಿಸಿ ವಿಭಾಗಮಟ್ಟಕ್ಕೆ ಅಯ್ಕೆಯಾದ ಕ್ರೀಡಾಪಟುಗಳು ವಿಭಾಗಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: ಅನಂತರಾಮ-೯೪೪೮೯೮೪೭೨೯, ಉಡುಪಿ ಜಿಲ್ಲೆ ದೇವಣ್ಣ ೯೦೦೮೮೪೮೨೮೯ ದಕ್ಷಿಣ ಕನ್ನಡ, ಬಾಬು ಗುರುರಾಜ್:೯೪೪೮೮೫೫೩೪೪ ಮಂಡ್ಯ, ವೆಂಕಟೇಶ್ ೯೮೪೪೩೨೬೦೦೭ ಕೊಡಗು ಹಾಗೂ ಚಾಮರಾಜನಗರ ಗೋಪಾಲಕೃಷ್ಣ ೯೯೪೫೬೧೫೬೯೫ ಚಾಮರಾಜನಗರ ಸಂಪರ್ಕಿಸುವAತೆ ಗುರುಸ್ವಾಮಿ ತಿಳಿಸಿದ್ದಾರೆ.