ಗೋಣಿಕೊಪ್ಪಲು, ಸೆ. ೧೬: ಮಹಿಳೆಯರು ಪುರುಷರಷ್ಟೇ ಸಮಾನರಾಗಿದ್ದು ವಿವಿಧ ಕ್ಷೇತ್ರಗಳÀಲ್ಲಿ ಸಾಧನೆ ಮಾಡುವ ಮೂಲಕ ಮಹಿಳೆಯರು ತಮ್ಮದೆ ಆದ ಚಾಪು ಮೂಡಿಸಿದ್ದಾರೆ. ಇದೀಗ ಪೊನ್ನಂಪೇಟೆ ಬ್ಲಾಕ್ ಸೊಸೈಟಿ ವತಿಯಿಂದ ನೂತನವಾಗಿ ಸ್ತಿçÃಶಕ್ತಿ ಸಂಘವು ಪೇಪರ್ ಬ್ಯಾಗ್ ತಯಾರಿಕಾ ಘಟಕವನ್ನು ಆರಂಭಿಸಿದ್ದು ಇದರಿಂದ ಉದ್ಯೋಗ ಪ್ರಾಪ್ತಿ ಆಗಲಿದೆ ಎಂದು ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಹೇಳಿದರು.
ಪೊನ್ನಂಪೇಟೆಯ ಸ್ತಿçÃಶಕ್ತಿ ಭವನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಸನ್ನಿವೇಶದಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದು ಪ್ರತಿ ನಾಗರಿಕನು ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು. ಬದಲಿ ವ್ಯವಸ್ಥೆಯಾಗಿ ಸ್ತಿçÃಶಕ್ತಿ ಸಂಘವು ಬ್ಯಾಂಕಿನ ಸಾಲ ಪಡೆದು ನೂತನ ಘಟಕವನ್ನು ಆರಂಭಿಸಿ ಆ ಮೂಲಕ ವರ್ತಕರಿಗೆ ಬೇಕಾದ ರೀತಿಯಲ್ಲಿ ಪೇಪರ್ ಬ್ಯಾಗ್ಗಳನ್ನು ತಯಾರಿಸಲು ಮುಂದೆ ಬಂದಿದೆ. ಇದರಿಂದ ನೂರಾರು ಮಹಿಳೆಯರು ಸ್ವಾಲಂಭಿ ಗಳಾಗಬಹುದು. ಇಲಾಖೆ ವತಿಯಿಂದ ಉತ್ತಮ ಸಹಕಾರ ನೀಡಲಾಗುವುದು ಎಂದರು.
ಸ್ತಿçÃಶಕ್ತಿ ಬ್ಲಾಕ್ ಸೊಸೈಟಿಯ ಅಧ್ಯಕ್ಷೆ ಎಂ.ಎಸ್. ರಜನಿ ಅಧ್ಯಕ್ಷತೆ ವಹಿಸಿ ಮಾತನಾಡಿ ಹಲವಾರು ಮಹಿಳೆಯರು ಉದ್ಯೋಗವಿಲ್ಲದೆ ಮನೆಯಲ್ಲಿಯೇ ಸಮಯವನ್ನು ಕಳೆಯುತ್ತಿರುವುದರಿಂದ ಇಂತಹ ಮಹಿಳೆಯರಿಗೆ ಉದ್ಯೋಗ ನೀಡಲು ಸ್ತಿçà ಶಕ್ತಿಯು ಬ್ಯಾಗ್ ತಯಾರಿಕ ಘಟಕವನ್ನು ಆರಂಭಿಸಿದೆ. ವರ್ತಕರಿಗೆ ಬೇಕಾದ ರೀತಿಯಲ್ಲಿ ಬ್ಯಾಗ್ಗಳನ್ನು ತಯಾರಿಸಿ ನೀಡಲಾಗುತ್ತದೆ. ಮಹಿಳೆಯರಿಗೆ ಉದ್ಯೋಗ ಅವಕಾಶ ನೀಡಲು ತರಬೇತಿ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತದೆ. ಪ್ಲಾಸ್ಟಿಕ್ ನಿರ್ಮೂಲನೆ ಮಾಡುವತ್ತ ಪ್ರತಿ ನಾಗರಿಕನು ಹೆಚ್ಚಿನ ಕಾಳಜಿ ವಹಿಸಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವಂತೆ ಕರೆ ನೀಡಿದರು.
ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಗಿರಿಜ ವೆಂಕಟೇಶ್, ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಮಹಿಳೆಯರ ಉತ್ತಮ ಕೆಲಸಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದರು. ವೇದಿಕೆಯಲ್ಲಿ ಸ್ಟೇಟ್ ಬ್ಯಾಂಕ್ನ ವ್ಯವಸ್ಥಾಪಕರಾದ ಸಚಿನ್ ಸಿಡಿಪಿಒ ರಾಜೇಶ್ ಕೆ.ಆರ್., ಸೂಪರ್ ವೈಸರ್ ರೀಟಾ ಸೇರಿದಂತೆ ಗೋಣಿಕೊಪ್ಪ ಚೇಂಬರ್ನ ತೆಕ್ಕಡ ಕಾಶಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ತಿçÃಶಕ್ತಿ ಸಂಘದ ಕಾರ್ಯದರ್ಶಿ ಹೆಚ್.ವಿ. ರತ್ನ, ಉಪಾಧ್ಯಕ್ಷ ದೇವಯಾನಿ, ಖಜಾಂಚಿ ಪುಷ್ಪವಲ್ಲಿ, ನಿರ್ದೇಶಕರಾದ ವರಲಕ್ಷಿö್ಮ, ಸುಜಾತ, ಯಶೋಧ, ಲೀಲಾವತಿ, ಹಾಜಿರಾಬಿ, ಶಾರದ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಹೆಚ್.ವಿ. ರತ್ನ ಸ್ವಾಗತಿಸಿ ವಂದಿಸಿದರು. ಆಸಕ್ತ ಮಹಿಳೆಯರಿಗೆ ತರಬೇತಿ ಶಿಬಿರವನ್ನು ಅಧ್ಯಕ್ಷೆ ಎಂ.ಎಸ್. ರಜನಿ ನಡೆಸಿ ಕೊಟ್ಟರು. ವಿವಿಧ ಭಾಗದಿಂದ ಹಲವು ಮಹಿಳೆಯರು ಭಾಗವಹಿಸಿದ್ದರು.