ಮಡಿಕೇರಿ, ಸೆ.೧೫: ಮಡಿಕೇರಿ ನಗರಸಭಾ ವ್ಯಾಪ್ತಿಯ ರೇಸ್ ಕೋರ್ಸ್ ರಸ್ತೆ ಹಾಗೂ ಐಟಿಐ ಜಂಕ್ಷನ್ ಬಳಿ ಅಪಾಯ ಕಾದಿದೆ...!

ರಸ್ತೆಯ ಸಾಯಿ ಕ್ರೀಡಾಂಗಣದ ಸನಿಹದಲ್ಲಿ ರಸ್ತೆ ಕುಸಿದ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಮುಂದಕ್ಕೆ ಸಾಗಿದಾಗ ಐಟಿಐ ಜಂಕ್ಷನ್ ಬಳಿ ಕಳೆದ ಮಳೆಗಾಲದಲ್ಲಿಯೂ ಸೇತುವೆ ಬಳಿ ಕುಸಿತಗೊಂಡು ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದೀಗ ಮೊನ್ನೆ ಸುರಿದ ಮಳೆಗೆ ರಸ್ತೆಯ ಅರ್ಧ ಭಾಗ ಕುಸಿದು ಬಿದ್ದಿದ್ದು ಸೇತುವೆ ಅಪಾಯದಲ್ಲಿದೆ. ಫೀ. ಮಾ. ಕಾಲೇಜು , ಐಟಿಐ, ಪೊಲೀಸ್ ಠಾಣೆಗಳಿರುವ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿರುತ್ತವೆ. ಆದರೀಗ ರಸ್ತೆ ಕುಸಿದಿರುವುದರಿಂದ ಪೊಲೀಸ್ ಬ್ಯಾರಿಕೇಡ್ ಅಳವಡಿಸಿರುವುದರಿಂದ ಒಂದರ ಹಿಂದರ ಒಂದು ವಾಹನ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಅಕಸ್ಮಾತ್ ಸೇತುವೆ ಮಧ್ಯದಲ್ಲಿ ಕುಸಿದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯೂ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರಸಭಾ ಸದಸ್ಯ ಅಪ್ಪಣ್ಣ ಸಮಸ್ಯೆ ಬಗ್ಗೆ ನಗರಸಭೆ, ಜಿಲ್ಲಾಡಳಿತ, ಶಾಸಕರ ಗಮನಕ್ಕೂ ತರಲಾಗಿದೆ. ಅಪಾಯ ಸಂಭವಿಸುವ ಮುನ್ನ ಸರಿಪಡಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.