ಮಡಿಕೇರಿ, ಸೆ. ೧೫: ಭಾರತೀಯ ಅಂಚೆ ಇಲಾಖೆಯು ೬ನೇ ತರಗತಿಯಿಂದ ೯ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಂದ ‘ದೀನ್ ದಯಾಳ್ ಸ್ಪರ್ಶ್ ಯೋಜನೆ’ ಯ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ನೀಡುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

‘SPಂಖSಊ’ ಎಂದರೆ (Sಛಿhoಟಚಿಡಿshiಠಿ ಜಿoಡಿ Pಡಿomoಣioಟಿ oಜಿ ಂಠಿಣiಣuಜe ಚಿಟಿಜ ಖeseಚಿಡಿಛಿh iಟಿ Sಣಚಿmಠಿs ಚಿs ಊobbಥಿ) ಸ್ಟಾಂಪ್‌ಗಳಲ್ಲಿ ಅಭಿರುಚಿ ಮತ್ತು ಸಂಶೋಧನೆಯನ್ನು ಹವ್ಯಾಸವಾಗಿ ಉತ್ತೇಜಿಸಲು ವಿದ್ಯಾರ್ಥಿ ವೇತನ. ಶೈಕ್ಷಣಿಕ ಪಠ್ಯಕ್ರಮವನ್ನು ಬಲಪಡಿಸಲು ಮತ್ತು ಪೂರಕವಾಗಿ ಸಮರ್ಥನೀಯ ರೀತಿಯಲ್ಲಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಅಂಚೆಚೀಟಿಗಳ ಸಂಗ್ರಹವನ್ನು ಉತ್ತೇಜಿಸುವುದು ವಿದ್ಯಾರ್ಥಿ ವೇತನದ ಉದ್ದೇಶವಾಗಿದೆ.

ಈ ಹವ್ಯಾಸವು ಅವರಿಗೆ ವಿಶ್ರಾಂತಿ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಯೋಜನೆಯಡಿ, ೨೦೨೧-೨೨ ಶೈಕ್ಷಣಿಕ ವರ್ಷದಲ್ಲಿ ೬೦% ಅಂಕಗಳನ್ನು ಹೊಂದಿರುವ ಮತ್ತು ಅಂಚೆಚೀಟಿಗಳ ಸಂಗ್ರಹದ ಠೇವಣಿ ಖಾತೆ/ ಫಿಲಾಟೆಲಿಕ್ ಕ್ಲಬ್‌ನ ಸದಸ್ಯರು ಮತ್ತು ಅಂಚೆಚೀಟಿ ಸಂಗ್ರಹವನ್ನು ಹವ್ಯಾಸವಾಗಿ ಮುಂದುವರಿಸುವ ೬ ರಿಂದ ೯ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. ೬೦೦೦ ಗಳ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಅಂಚೆಚೀಟಿಗಳ ಸಂಗ್ರಹದ ರಸಪ್ರಶ್ನೆ (ಲಿಖಿತ) ಆಧಾರ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಂಚೆಚೀಟಿಗಳ ಸಂಗ್ರಹದ ರಸಪ್ರಶ್ನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂಚೆ ಇಲಾಖೆಯು ನೀಡುವ ಅಂಚೆಚೀಟಿಗಳ ಸಂಗ್ರಹ ಯೋಜನೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಬೇಕಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲೆವೆಲ್ ೧ - ಅಂಚೆಚೀಟಿಗಳ ಸಂಗ್ರಹದ ರಸಪ್ರಶ್ನೆ (ಲಿಖಿತ) ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಲು, ಪೋಸ್ಟಿಂಗ್ ಮಾಡಲು ತಾ. ೨೬ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳಿಗಾಗಿ ತಿತಿತಿ.iಟಿಜiಚಿಠಿosಣ.gov.iಟಿ ಮತ್ತು ತಿತಿತಿ.ಞಚಿಡಿಟಿಚಿಣಚಿಞಚಿಠಿosಣ.gov.iಟಿ ಭೇಟಿ ನೀಡಬಹುದು ಎಂದು ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.