ಸಿದ್ದಾಪುರ, ಸೆ. ೧೫: ವಿದ್ಯಾರ್ಥಿಗಳು ತಮ್ಮ ಬಾಲ್ಯವನ್ನು ಪುಸ್ತಕದ ಜೊತೆಗೆ ಕಳೆದು ಬೆಳೆದರೆ ನಮ್ಮಲ್ಲಿ ಜ್ಞಾನ ವೃದ್ಧಿಯಾಗುತ್ತದೆ ಎಂದು ಶಿಕ್ಷಕ ಮತ್ತು ಕಲಾವಿದ ಉ.ರಾ. ನಾಗೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಿದ್ದಾಪುರದಲ್ಲಿ ಬಿಜಿಎಸ್ ಸಂಸ್ಥೆಯ ಗಣಕ ವಿಜ್ಞಾನ ಸಂಯೋಜನೆ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಭಾಗಮಂಡಲ ಕಾಲೇಜಿನ ಪ್ರಾಂಶುಪಾಲ ದಿವಾಕರ್ ಮಾತನಾಡಿ, ಬಿಜಿಎಸ್ ಸಂಸ್ಥೆ ಶಿಸ್ತು ಬದ್ಧವಾಗಿ ವಿದ್ಯಾರ್ಥಿಗಳಿಗೆ ವಿದ್ಯೆ ಶಿಸ್ತು ಕಲಿಸುತ್ತಿದೆ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಏರ್ಪಾಡು ಮಾಡುವುದರಿಂದ ವಿದ್ಯಾರ್ಥಿಗಳ ಪರಸ್ಪರ ಸಂಬAಧ ಹೆಚ್ಚಾಗುತ್ತದೆ ಎಂದರು. ಶಾಲೆಗೆ ಪ್ರವೇಶ ಪಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಯನ್ನು ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜಿಎಸ್ ಸಂಸ್ಥೆಯ ವ್ಯವಸ್ಥಾಪಕ ಸುಧಾಕರ್, ಪಶುವೈದ್ಯ ಇಲಾಖೆಯ ನಿರ್ದೇಶಕ ಡಾ. ನವೀನ್ ಕುಮಾರ್ ಸೇರಿದಂತೆ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ನಂಜುAಡೆಗೌಡ, ವಿದ್ಯಾರ್ಥಿಗಳು ಶಿಕ್ಷಕರುಗಳು ಇದ್ದರು.