ಸುಂಟಿಕೊಪ್ಪ, ಸೆ. ೧೬: ಕಳೆದ ೪ ತಿಂಗಳ ಹಿಂದೆ ಸುಂಟಿಕೊಪ್ಪ ಸಮೀಪದ ಕೊಡಗರ ಹಳ್ಳಿ ಸಮೀಪ ಗದ್ದೆಹಳ್ಳದ ಜಾವ ಮನೆ ಮುಸ್ತಾಪ ಅವರು ಕಾರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದು ಟಾಟಾ ಎ.ಐ.ಜಿ.ವಿಮೆ ಸಂಸ್ಥೆ ವತಿಯಿಂದ ಅವರ ಕುಟುಂಬಸ್ಥರಿಗೆ ೫ ಲಕ್ಷ ಮೊತ್ತದ ವಿಮೆ ಪರಿಹಾರದ ಚೆಕ್ ಅನ್ನು ಬ್ಯಾಂಕ್ ಆಫ್ ಬರೋಡದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಾದ ಸಿ.ದೀಪ್ತಿ, ಟಾಟಾ ಎ.ಐ.ಜಿ.ವಿಮೆ ಸಂಸ್ಥೆಯ ವ್ಯವಸ್ಥಾಪಕರಾದ ಕೆ.ಪಿ.ಸಿದ್ಧಲಿಂಗೇಶ್, ಪಂಚಾಯಿತಿ ಉಪಾಧ್ಯಕ್ಷರಾದ ಕೆ.ಕೆ.ಪ್ರಸಾದ್, ಪಿಡಿಓ ವೇಣುಗೋಪಾಲ್, ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯರುಗಳಾದ ಆಲಿಕುಟ್ಟಿ, ಪಿ.ಎಫ್. ಸಬಾಸ್ಟಿನ್, ಎಚ್.ಯು. ರಫೀಕ್ ಖಾನ್, ಎ.ಶಭೀರ್, ಎಂ.ಎಸ್. ಜಿನಾಸಿದ್ದಿನ್, ಎಂ.ನಾಗರತ್ನ, ದಿವಂತ ಮುಸ್ತಾಫ ಅವರ ಸಹೋದರ ಅಚ್ಚುಪ್ಪ (ಹಂಸ) ಕುಟುಂಬಸ್ಥರು ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರು.