ಮಡಿಕೇರಿ, ಸೆ. ೧೬: ಕೊಡಗು ಜಿಲ್ಲೆಗೆ ಸೆಪ್ಟೆಂಬರ್ ಮಾಹೆಯಲ್ಲಿ ಒಟ್ಟು ೨,೩೦೦ ಮೆಟ್ರಿಕ್ ಟನ್ ಯೂರಿಯಾ ಸರಬರಾಜು ಗುರಿ ಇದ್ದು, ಜಿಲ್ಲೆಯ ವಿವಿಧ ಚಿಲ್ಲರೆ ಹಾಗೂ ಸಗಟು ಮಾರಾಟಗಾರರಲ್ಲಿ ೧೭೨೫.೧೫೯ ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ಇರುತ್ತದೆ. ಗುರಿಯಂತೆ ಈ ಮಾಹೆಯಲ್ಲಿ (ತಾ. ೧೨ ರವರೆಗೆ) ೫೨೫.೪೮ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಸರಬರಾಜು ಆಗಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಗಮ, ಕುಶಾಲನಗರ ಇಲ್ಲಿ ಒಟ್ಟು ೧೦,೩೦೫ ಮೆಟ್ರಿಕ್ ಟನ್‌ರಷ್ಟು ಯೂರಿಯಾ ರಸಗೊಬ್ಬರಗಳ ಕಾಪು ದಾಸ್ತಾನು ಇರುತ್ತದೆ. ಹಾಗೂ ಸೆಪ್ಟೆಂಬರ್ ಮಾಹೆಯ ಸರಬರಾಜು ಗುರಿಯನ್ವಯ ಎಂಸಿಎಪ್‌ಎಲ್, ಆರ್‌ಸಿಎಫ್, ಸ್ಟಿಕ್, ಪಿ.ಪಿ.ಎಲ್ ಸಂಸ್ಥೆಗಳು ಜಿಲ್ಲೆಗೆ ಮುಂದಿನ ದಿನಗಳಲ್ಲಿ ಸರಬರಾಜು ಮಾಡಲಿದ್ದಾರೆ. ಜಿಲ್ಲೆಯ ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಈ ಸಂಸ್ಥೆಗಳಿAದ ಅಗತ್ಯ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರವನ್ನು ಸರಬರಾಜು ಮಾಡಿಸಿಕೊಂಡು ರೈತರಿಗೆ ನಿಗದಿತ ಸಮಯದಲ್ಲಿ ರಸಗೊಬ್ಬರ ಪೂರೈಕೆಯಾಗುವಂತೆ ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ. ಷೇಕ್ ತಿಳಿಸಿದ್ದಾರೆ.