ಕುಶಾಲನಗರ, ಸೆ. ೧೬: ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಮರ ಮತ್ತು ವಾಹನ ವಶ ಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ದೊಡ್ಡಬೆಟ್ಟಗೇರಿ ಗ್ರಾಮ ವ್ಯಾಪ್ತಿಯಲ್ಲಿ ಟಾಟಾ ಎಸಿ (ಕೆಎ ೪೫ ಓ -೩೩೧೭) ಮತ್ತು ಬೊಲೇರೋ ಜೀಪ್‌ಗಳಲ್ಲಿ (ಕೆಎ ೯ ಜೆಡ್-೦೯೬೩) ಭತ್ತದ ಹೊಟ್ಟುಗಳನ್ನು ತುಂಬಿಸಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ವಾಹನದಲ್ಲಿದ್ದ ಎನ್. ಕುಮಾರ, ರಮೇಶ, ತಂಗರಾಜ ಮತ್ತು ಟಿ.ಆರ್. ರಮೇಶ ಎಂಬವರುಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

ಪ್ರಕರಣಕ್ಕೆ ಸಂಬAಧಿಸಿದAತೆ ಎರಡು ವಾಹನಗಳು ಬೀಟೆ ಮರ ನಾಟ ಸೇರಿದಂತೆ ಅಂದಾಜು ೧೦ ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ ಗೋಪಾಲ್ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಮ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಎನ್ ದೇವಯ್ಯ, ಅನಿಲ್ ಡಿಸೋಜ, ಕೆ.ಎಸ್ ಸುಬ್ರಾಯ, ಅರಣ್ಯ ರಕ್ಷಕರಾದ ಸಿದ್ಧರಾಮ ನಾಟಿಕಾರ್, ರವಿ ಉತ್ನಾಳ್, ಮಂಜೇಗೌಡ, ಸಚಿನ್, ವಾಹನ ಚಾಲಕರಾದ ಜೇಮ್ಸ್ ಗಾಲ್ವಿನ್, ಆರ್‌ಆರ್‌ಟಿ ಸಿಬ್ಬಂದಿಗಳಾದ ಸಿದ್ದ ಯೋಗೇಶ್ ಸಿ, ಮಂಜ ಪಾಲ್ಗೊಂಡಿದ್ದರು.ಸAರಕ್ಷಣಾಧಿಕಾರಿ ಎ.ಎ ಗೋಪಾಲ್ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಮ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಎನ್ ದೇವಯ್ಯ, ಅನಿಲ್ ಡಿಸೋಜ, ಕೆ.ಎಸ್ ಸುಬ್ರಾಯ, ಅರಣ್ಯ ರಕ್ಷಕರಾದ ಸಿದ್ಧರಾಮ ನಾಟಿಕಾರ್, ರವಿ ಉತ್ನಾಳ್, ಮಂಜೇಗೌಡ, ಸಚಿನ್, ವಾಹನ ಚಾಲಕರಾದ ಜೇಮ್ಸ್ ಗಾಲ್ವಿನ್, ಆರ್‌ಆರ್‌ಟಿ ಸಿಬ್ಬಂದಿಗಳಾದ ಸಿದ್ದ ಯೋಗೇಶ್ ಸಿ, ಮಂಜ ಪಾಲ್ಗೊಂಡಿದ್ದರು.