ಮಡಿಕೇರಿ, ಸೆ. ೧೫: ವಿದ್ಯುತ್ ಸಮಸ್ಯೆ ಪರಿಹರಿಸುವ ಹಿನ್ನಲೆಯಲ್ಲಿ ಮಡಿಕೇರಿ ಉಪ ವಿಭಾಗದ ಮದೆ ಗ್ರಾ.ಪಂ. ಸಭಾಂಗಣ, ಚೆಂಬು ಗ್ರಾ.ಪಂ. ಸಭಾಂಗಣ, ಸಂಪಾಜೆ ಗ್ರಾ.ಪಂ. ಸಭಾಂಗಣದಲ್ಲಿ, ಗೋಣಿಕೊಪ್ಪಲು ವಿಭಾಗದ ತೆರಾಲು ಹಂಬಲ ದವಸ ಭಂಡಾರ, ವಿರಾಜಪೇಟೆ ಉಪ ವಿಭಾಗದ ಗುಹ್ಯ ಹಿರಿಯ ಪ್ರಾಥಮಿಕ ಶಾಲೆ, ಮಾಕುಟ್ಟ ಕಿರಿಯ ಪ್ರಾಥಮಿಕ ಶಾಲೆ, ಕುಶಾಲನಗರ ಉಪ ವಿಭಾಗದ ಅತ್ತೂರು ಸಮುದಾಯ ಭವನ ಸಭಾಂಗಣ, ಸೋಮವಾರಪೇಟೆ ಉಪ ವಿಭಾಗದ ಗರಗಂದೂರು ಹೊಸತೋಟ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೧೭ ರಂದು ಬೆಳಿಗ್ಗೆ ೧೧ ಗಂಟೆಯಿAದ ವಿದ್ಯುತ್ ಅದಾಲತ್ ನಡೆಯಲಿದೆ.
ಈ ವ್ಯಾಪ್ತಿಯ ಸಾರ್ವಜನಿಕರು/ ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಿ, ತಮ್ಮ ಅಹವಾಲುಗಳನ್ನು ಸಲ್ಲಿಸುವಂತೆ ಸೆಸ್ಕ್ ಇಇ ಕೋರಿದ್ದಾರೆ.