ಮಡಿಕೇರಿ, ಸೆ. ೧೫: ತಾ. ೧೭ರಂದು ಪ್ರಧಾನಿ ನರೇಂದ್ರ ಮೋದಿ, ತಾ. ೨೫ರಂದು ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾದ ದೀನದಯಾಳ್ ಉಪಾಧ್ಯಾಯ, ಅ. ೨ರಂದು ಮಹಾತ್ಮಾಗಾಂಧಿ ಹಾಗೂ ಲಾಲ್‌ಬಹದ್ದೂರ್ ಶಾಸ್ತಿç ಇವರುಗಳ ಹುಟ್ಟು ಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ತಾ. ೧೭ರಿಂದ ಅ.೨ರವರೆಗೆ ಬಿಜೆಪಿಯಿಂದ ಸೇವಾಪ್ರಾಕ್ಷಿಕ ಅಡಿಯಲ್ಲಿ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣ್ಯ ಉಪಾಧ್ಯಾಯ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಜೆಪಿ ರಾಷ್ಟಿçÃಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರ ಸೂಚನೆಯಂತೆ ಪ್ರಧಾನಿ ಮೋದಿಯವರ ಒಳಿತಿಗಾಗಿ ಪ್ರಾರ್ಥಿಸುವುದರ ಜೊತೆಗೆ ತಾ. ೧೭ರಂದು ಯುವ ಮೋರ್ಚಾ ವತಿಯಿಂದ ದೇಶಾದ್ಯಂತ ರಕ್ತದಾನ ಶಿಬಿರ ಏರ್ಪಡಿಸಲಾಗುವುದು. ರಕ್ತದಾನಿಗಳ ವಿವರವನ್ನು ಪ್ರತಿ ಆಸ್ಪತ್ರೆಯಲ್ಲಿ ತಯಾರಿಸಿ ರಕ್ತದಾನಿಗಳ ವಿವರ ಸಿಗುವಂತೆ ಮಾಡಲಾಗುವುದು. ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು. ಅಲ್ಲದೆ, ದಿವ್ಯಾಂಗರಿಗೆ ಕೃತಕ ಅಂಗಾAಗ ಜೋಡಣೆ ಶಿಬಿರ ಏರ್ಪಡಿಸಲಾಗುತ್ತದೆ.
ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೆ ೭೫ ಕೆರೆಗಳ ನಿರ್ಮಾಣಕ್ಕೆ ಸರಕಾರ ನಿರ್ದೇಶನ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಅಮೃತ ಸರೋವರ ನಿರ್ಮಾಣ ಆಗಿದೆ. ಈ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ನದಿ, ಕೆರೆ, ಬಾವಿಗಳ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಸಸಿಗಳನ್ನೂ ನೆಡಲಿದ್ದಾರೆ. ೨೦೨೫ಕ್ಕೆ ಭಾರತವು ಕ್ಷಯ ರೋಗದಿಂದ ಮುಕ್ತ ಆಗಬೇಕೆಂಬುದು ನರೇಂದ್ರ ಮೋದಿಯವರ ಸಂಕಲ್ಪವಾಗಿದೆ. ಅದಕ್ಕಾಗಿ ಪ್ರತಿ ಕಾರ್ಯಕರ್ತರು, ಜನಪ್ರತಿನಿಧಿಗಳು, ಪದಾಧಿಕಾರಿಗಳು ೫ ಜನ ರೋಗಿಗಳಿಗೆ ಮಾರ್ಗದರ್ಶನ, ಚಿಕಿತ್ಸಾ ವ್ಯವಸ್ಥೆ, ಪೂರಕ ಬೆಂಬಲ ನೀಡಲಿದ್ದಾರೆ.
ಪ್ರಧಾನಮಂತ್ರಿಗಳ ಜೀವನ ಮತ್ತು ಗುರಿಯ ಕುರಿತಾಗಿ ಒಂದು ಪ್ರದರ್ಶನವನ್ನು ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಆಯೋಜಿಸಲಾಗುವುದು.
ಜನ ಕಲ್ಯಾಣ ಯೋಜನೆಗಳ ಕುರಿತಾದ ಪುಸ್ತಕ ಪ್ರದರ್ಶನ ಮಾಡಲಾಗುವುದು. ಕೋವಿಡ್ ಲಸಿಕಾ ಅಭಿಯಾನವು ಐತಿಹಾಸಿಕವಾಗಿದ್ದು, ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ೨೦೦ ಕೋಟಿಗಿಂತಲೂ ಹೆಚ್ಚು ಲಸಿಕೆಗಳನ್ನು ದೇಶದಲ್ಲಿ ನೀಡಿದ್ದು, ಲಸಿಕಾ ಕೇಂದ್ರಗಳ ಮುಂದೆ ಸೇವಾ ಚಟುವಟಿಕೆಯ ಕೇಂದ್ರ ಸ್ಥಾಪಿಸಿ ಅಲ್ಲಿ ಸುತ್ತಮುತ್ತಲು ಯಾರು ಇನ್ನೂ ಲಸಿಕೆ ಪಡೆದಿಲ್ಲವೋ ಅವರನ್ನು ಗುರುತಿಸಿ ಲಸಿಕೆಗಳನ್ನು ಕೊಡಿಸಲಾಗುವುದು.
ಎಲ್ಲಾ ಮಂಡಲಗಳಲ್ಲಿ ಎರಡು ದಿನಗಳ ಕಾಲ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಬೇಕು. ಅಭಿಯಾನದ ಮೊದಲ ದಿನ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಎರಡನೆ ದಿನ ಪ್ರಸ್ತುತ ನಡೆಯುತ್ತಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಅಮೃತ ಸರೋವರಗಳನ್ನು ಸ್ವಚ್ಛಗೊಳಿಸಲಾಗು ವುದು. ಮಳೆ ನೀರಿನ ಶೇಖರಣೆಯ ಬಗ್ಗೆ ಅರಿವು ಮೂಡಿಸಲಾಗುವುದು. ಪ್ರತಿಯೊಂದು ಜಿಲ್ಲೆಯಲ್ಲಿ ವಿವಿಧತೆ ಯಲ್ಲಿ ಏಕತೆ ಹಬ್ಬವನ್ನು ಆಯೋಜಿಸಿ ಏಕ್ ಭಾರತ್ ಶ್ರೇಷ್ಠ ಭಾರತ್ ಧ್ಯೇಯವಾಕ್ಯವನ್ನು ಸಮಾಜದ ಮೂಲೆ ಮೂಲೆಗೆ ತಲುಪಿಸಲಾಗುವುದು.
ಪ್ರತಿ ಜಿಲ್ಲೆಯಲ್ಲಿಯೂ ಪ್ರಧಾನ ಮಂತ್ರಿಗಳ ಜೀವನ, ದೂರದೃಷ್ಟಿ, ಯೋಜನೆಗಳು ಮತ್ತು ಸಾಧನೆಗಳ ಕುರಿತಾದ ಬೌದ್ಧಿಕ ಸಭೆಗಳನ್ನು ನಡೆಸಲಾಗುವುದು.
ಪ್ರಧಾನಮಂತ್ರಿಗಳ ಜೀವನ ಮತ್ತು ಗುರಿಯ ಕುರಿತು ಲೇಖನಗಳನ್ನು ಬರೆಸಲಾಗುವುದು ಎಂದು ಹೇಳಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಜನ್ಮದಿನವು ತಾ. ೨೫ರಂದು ಇದ್ದು, ಅವರ ಜನ್ಮ ವಾರ್ಷಿಕೋತ್ಸವವು ನಮ್ಮ ಬೂತ್ ಮಟ್ಟದ ಚಟುವಟಿಕೆಯಾಗಲಿದೆ. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಪ್ರತಿಯೊಂದು ಬೂತ್‌ನಲ್ಲಿಯೂ ಒಂದು ಗುಣಾತ್ಮಕ ಕಾರ್ಯಕ್ರಮ ಮತ್ತು ದೀನದಯಾಳ್ ಅವರ ಕುರಿತು ಚರ್ಚೆ, ಸಂವಾದ ಕಾರ್ಯಕ್ರಮ ನಡೆಸಲಾಗುವುದು. ತಾ. ೨೫ರಂದು ಪ್ರಸಾರವಾಗುವ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಪ್ರತೀ ಬೂತ್‌ನಲ್ಲಿ ಸಾಮೂಹಿಕವಾಗಿ ಆಲಿಸುವ ಕಾರ್ಯ ನಡೆಯಲಿದೆ.
ಅ.೨ರಂದು ಮಹಾತ್ಮಾ ಗಾಂಧಿಯವರ ಜನ್ಮದಿನ. ಗಾಂಧೀಜಿ ಅವರ ಜೀವನದ ಗುರಿಯನ್ನು ತಿಳಿಸುವ ಸ್ವದೇಶಿ, ಖಾದಿ, ಆತ್ಮನಿರ್ಭರತೆ, ಸರಳತೆ ಮತ್ತು ಮಹತ್ವದ ಕುರಿತು ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಸುಬ್ರಮಣ್ಯ ಉಪಾಧ್ಯಾಯ ಮಾಹಿತಿಯಿತ್ತರಲ್ಲದೆ, ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಮೋದಿ ಅವರ ಅವಧಿಯಲ್ಲಿ ೧,೨೯,೭೭೬.೭೪ ಕೋಟಿ ಅನುದಾನ ಬಂದಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪಕ್ಷದ ವಕ್ತಾರ ಮಹೇಶ್ ಜೈನಿ, ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಮುಖ ಸುವಿನ್ ಗಣಪತಿ ಉಪಸ್ಥಿತರಿದ್ದರು.