ಮಡಿಕೇರಿ, ಸೆ. ೧೬: ರಾಷ್ಟçವು ಸ್ವಾತಂತ್ರ್ಯ ಪಡೆದು ೭೫ ವರ್ಷ ಪೂರ್ಣಗೊಂಡ ಹಿನ್ನೆಲೆ ದೇಶದ ಸಮಗ್ರ ಅಭಿವೃದ್ಧಿ ಮತ್ತು ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಪೂರಕವಾದ ವಿಷಯಗಳ ಕುರಿತು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಜಿಲ್ಲೆಯ ಆಯ್ದ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೇಂರ್ಸ್ ರೋರ್ಸ್ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಂವಾದಲ್ಲಿ ವಿಶೇಷಚೇತನ ವಿದ್ಯಾರ್ಥಿ ಆಸೀಫ್ ದೇಶಭಕ್ತಿ ಗೀತೆ ಹಾಡಿ ಎಲ್ಲರ ಗಮನಸೆಳೆದರು. ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಜಿಲ್ಲೆ ನಮ್ಮದಾಗಿದ್ದು ಸ್ವಾತಂತ್ರ್ಯದ ಬಳಿಕ ಜಿಲ್ಲೆಯೂ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೂ ಕೊಡಗು ಜಿಲ್ಲೆಯಲ್ಲಿ ವಿಶೇಷ ಚೇತನರಿಗೆ ಹಾಗೂ ದೃಷ್ಟಿ ಹೀನ ಮಕ್ಕಳಿಗೆ ಇನ್ನೂ ಕೂಡ ಒಂದು ವಿಶೇಷ ಶಾಲೆ ಇಲ್ಲ ಎಂದು ಗಮನ ಸೆಳೆದರು.
ವಿದ್ಯಾರ್ಥಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಸ್ವಯಂ ಪ್ರೇರಿತವಾಗಿ ಸಂಸ್ಥೆಗಳು ಮುಂದೆ ಬಂದರೆ ಸರ್ಕಾರದ ವತಿಯಿಂದ ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ನಿಶ್ಚಿತ್ ಎಂಬ ವಿದ್ಯಾರ್ಥಿ ಗ್ರಾಮೀಣ ಪ್ರದೇಶದಲ್ಲಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಶಾಲೆಗೆ ಹೋಗಿ ಬರಲು ಕಷ್ಟವಾಗಲಿದೆ. ಆದ್ದರಿಂದ ಬಸ್ ಸಂಪರ್ಕ ಕಲ್ಪಿಸುವಂತಾಗಬೇಕು ಎಂದು ಅವರ ಗಮನಕ್ಕೆ ತಂದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಕೆಎಸ್ಆರ್ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕರ ಜೊತೆ ಚರ್ಚಿಸಿ ಅಗತ್ಯವಿರುವ ಕಡೆಗಳಲ್ಲಿ ಬಸ್ ಕಲ್ಪಿಸಲಾಗುವುದು ಎಂದರು. ಜೊತೆಗೆ ಬಸ್ ಸಂಚಾರ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಜೊತೆ ಇಂತಿಷ್ಟು ಜನರಾದರೂ ಸಂಚಾರ ಮಾಡಬೇಕು ಎಂದು ಹೇಳಿದರು.
ಕೆಲವೊಂದು ಉತ್ಪನ್ನಗಳು ಹಾಗೂ ಕಚ್ಚಾ ತೈಲಗಳಿಗಾಗಿ ಇತರ ದೇಶಗಳನ್ನು ಅವಲಂಬಿತರಾಗುವುದು ಅನಿವಾರ್ಯ ಹಾಗೂ ಉದ್ಯೋಗ, ತಂತ್ರಜ್ಞಾನ ಮತ್ತಿತರ ಕೆಲವೊಂದು ವಿಷಯಗಳಿಗೆ ಅವಲಂಬಿತ ವಾಗುವುದು ಅನಿವಾರ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಕೂಡ ಬದಲಾವಣೆ ಅನಿವಾರ್ಯ. ಆಧುನಿಕ ಯುಗದಲ್ಲಿ ಹೊಸತನಕ್ಕೆ ಪ್ರತಿ ಯೊಬ್ಬರೂ ಅವಲಂಬಿತರಾಗಿದ್ದಾರೆ. ಆ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಮನೆಗಳಿಗೆ ಪೈಪ್ಲೈನ್ ಮೂಲಕ ಗ್ಯಾಸ್ ವಿತರಿಸುವ ಯೋಜನೆ ಜಿಲ್ಲೆಯಲ್ಲಿ ಬರಲಿದೆ ಎಂದರು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಬೇಬಿ ಮ್ಯಾಥ್ಯೂ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಂಘಟಕಿ ದಮಯಂತಿ, ಮಡಿಕೇರಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಬಿ.ಎನ್. ರಮೇಶ್, ಉಪಾಧ್ಯಕ್ಷ ಬೊಳ್ಳಿಜಿರ ಬಿ. ಅಯ್ಯಪ್ಪ. ಧನಂಜಯ, ಜಿಲ್ಲಾ ತರಬೇತಿ ಆಯುಕ್ತೆ ಮೈಥಿಲಿ, ಶಿಕ್ಷಕರು ಹಾಗೂ ಪ್ರಮುಖರು ಇದ್ದರು.