ಮಡಿಕೇರಿ, ಸೆ. ೧೬: ತಾಲೂಕಿನ ಬಲಮುರಿ, ಪಾರಾಣೆ ಪಟ್ಟಣದಲ್ಲಿ ಬುಧವಾರ ಅಂಗಡಿ ಮತ್ತು ಹೊಟೇಲ್ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಹಾಗೂ ಕೋಟ್ಪಾ ಕಾಯ್ದೆ ಉಲ್ಲಂಘನೆ ಕುರಿತು ೧೪ ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಯಿತು.
ಸೆಕ್ಷನ್ ೦೪ ಅಡಿಯಲ್ಲಿ ೧೩ ಪ್ರಕರಣಗಳಿಗೆ ರೂ. ೧೪೫೦ ಮತ್ತು ಸೆಕ್ಷನ್ ೬ಎ ಅಡಿಯಲ್ಲಿ ೧ ಪ್ರಕರಣಗಳಿಗೆ ರೂ. ೧೦೦ ಸೇರಿದಂತೆ ಒಟ್ಟು ೧೪ ಪ್ರಕರಣಗಳಲ್ಲಿ ರೂ. ೧೫೫೦ ದಂಡವನ್ನು ವಿಧಿಸಿ ಆರೋಗ್ಯ ಶಿಕ್ಷಣ ನೀಡಲಾಯಿತು. ಸಂಗ್ರಹಣೆಯಾದ ದಂಡವನ್ನು ಜಿಲ್ಲಾಧಿಕಾರಿ ಅವರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಜಂಟಿ ಖಾತೆಗೆ ಜಮೆ ಮಾಡಲಾಯಿತು. ಅನಿರೀಕ್ಷಿತ ಭೇಟಿಯಲ್ಲಿ ಡಿಹೆಚ್ಇಒ, ಎಸ್ಆರ್.ಹೆಚ್ಐಒ, ಜಿಲ್ಲಾ ತಂಬಾಕು ಸಂಯೋಜಕರು, ಜಿಲ್ಲಾ ಸಮಾಜ ಕಾರ್ಯಕರ್ತರು, ಆರೋಗ್ಯ ಕೇಂದ್ರದ ಎಹೆಚ್ಐಒ, ಪಿಹೆಚ್ಸಿಒ, ಸಿಹೆಚ್ಒ ಮತ್ತು ಪೊಲೀಸ್ ಇಲಾಖೆಯವರು ಭಾಗವಹಿಸಿದ್ದರು.