ಮೃತಪಟ್ಟ ರೋಗಿಗಳ ಕುಟುಂಬಕ್ಕೆ ರೂ. ೫ ಲಕ್ಷ ಪರಿಹಾರ
ಬೆಂಗಳೂರು, ಸೆ. ೧೫: ಬಳ್ಳಾರಿಯ ವಿಜಯ ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ, ವಿದ್ಯುತ್ ವ್ಯತ್ಯಯದಿಂದ ವೆಂಟಲೇಟರ್ಗಳು ಸ್ಥಗಿತಗೊಂಡು ಮೃತಪಟ್ಟ ಮೂವರು ರೋಗಿಗಳ ಕುಟುಂಬಕ್ಕೆ ತಲಾ ೫ ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಘೋಷಿಸಿದ್ದಾರೆ. ವಿದ್ಯುತ್ ವ್ಯತ್ಯಯದಿಂದ ಬಳ್ಳಾರಿ ಸರ್ಕಾರಿ ಆಸ್ಪತ್ರೆ ವಿಮ್ಸ್ನ ವೆಂಟಿಲೇಟರ್ಗಳಲ್ಲಿ ಸಮಸ್ಯೆ ಉಂಟಾಗಿ ರೋಗಿಗಳು ಮೃತಪಟ್ಟ ವಿಚಾರ ಇಂದು ವಿಧಾನಸಭೆ ಕಲಾಪದಲ್ಲೂ ಪ್ರತಿಧ್ವನಿಸಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಸರ್ಕಾರದ ತಪ್ಪಿನಿಂದ ಆಗಿರುವ ಅನಾಹುತ. ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳದಿದ್ದುದು ತಪ್ಪು. ಸರ್ಕಾರ ರೋಗಿಗಳ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ. ಮೃತಪಟ್ಟವರಿಗೆ ೨೫ ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಆರೋಗ್ಯ ಸಚಿವ ಡಾ. ಸುಧಾಕರ್ ಅನಾರೋಗ್ಯ ಕಾರಣ ಕಲಾಪಕ್ಕೆ ಹಾಜರಾಗದ ಕಾರಣ ಅವರ ಪರವಾಗಿ ಉತ್ತರಿಸಿದ ಸಚಿವ ಶ್ರೀರಾಮುಲು, ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಐಸಿಯುನಲ್ಲಿ ಇದ್ದವರು ಕೇವಲ ವೆಂಟಿಲೇಟರ್ ವೈಫಲ್ಯದಿಂದಷ್ಟೇ ಮೃತಪಟ್ಟಿಲ್ಲ. ಅವರ ಸಾವಿಗೆ ಬೇರೆ ಕಾರಣಗಳು ಇವೆ. ನಾನು ಆಸ್ಪತ್ರೆಯ ಅಧೀಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.
ಡಿ.ಕೆ. ಶಿವಕುಮಾರ್ಗೆ ಮತ್ತೆ ಇಡಿ ಸಮನ್ಸ್
ಬೆಂಗಳೂರು, ಸೆ. ೧೫: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬAಧಿಸಿದAತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ಗುರುವಾರ ಮತ್ತೆ ಸಮನ್ಸ್ ಜಾರಿ ಮಾಡಿದೆ. ಇಡಿ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು, ಪ್ರಸ್ತುತ ರಾಜ್ಯದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಆಗಮನದ ಸಿದ್ಧತೆಯಲ್ಲಿ ನಿರತರಾಗಿದ್ದೇವೆ ಮತ್ತು ಅಧಿವೇಶನ ನಡುವೆಯು ಸಮಯದಲ್ಲಿ ಸಮನ್ಸ್ ನೀಡಿದ್ದಾರೆ. ನಾನು ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ. ಆದರೆ ಈ ಸಮಯದಲ್ಲಿ ಸಮನ್ಸ್ ನೀಡಿರುವುದು ರಾಜಕೀಯ ಸಂಚು ಎಂದು ಆರೋಪಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ಮತ್ತು ವಿಧಾನಸಭೆ ಅಧಿವೇಶನದ ಮಧ್ಯೆ ಅವರು ಮತ್ತೆ ನನಗೆ ಇಡಿ ಮುಂದೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದಾರೆ. ನಾನು ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ, ಆದರೆ ಈ ಸಮನ್ಸ್ ನೀಡಿರುವ ಸಮಯ ಹಾಗೂ ಮೇಲಿಂದ ಮೇಲೆ ನೀಡುತ್ತಿರುವ ಕಿರುಕುಳದಿಂದಾಗಿ ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ಇಡಿ ದಾಖಲಿಸಿದ ೨೦೧೮ ರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬAಧಿಸಿದAತೆ ದೆಹಲಿ ಕೋರ್ಟ್ ಡಿ.ಕೆ. ಶಿವಕುಮಾರ್ ಮತ್ತು ಇತರ ಆರೋಪಿಗಳಿಗೆ ಕಳೆದ ಆಗಸ್ಟ್ನಲ್ಲಿ ಜಾಮೀನು ನೀಡಿದೆ.
ಅತ್ಯಾಚಾರವೆಸರಿ ಸಹೋದರಿಯರ ಹತ್ಯೆ
ಲಖೀಮ್ಪುರ್ಖೇರಿ, ಸೆ. ೧೫: ಉತ್ತರ ಪ್ರದೇಶದ ಲಖೀಮ್ಪುರ್ಖೇರಿಯಲ್ಲಿ ದಲಿತ ಸಹೋದರಿಯರಿಬ್ಬರ ಸಾವು ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ ಪ್ರಕಟಗೊಂಡಿದ್ದು, ಅತ್ಯಾಚಾರವೆಸಗಿ, ಕತ್ತು ಹಿಸುಕಿರುವುದು ದೃಢಪಟ್ಟಿದೆ. ಎಸ್ಪಿ ಸಂಜೀವ್ ಸುಮನ್ ಮಾತನಾಡಿ, ವರದಿಯನ್ನು ಉಲ್ಲೇಖಿಸಿ ಅತ್ಯಾಚಾರವೆಸಗಿದ ಬಳಿಕ ಬಾಲಕಿಯರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಲಖೀಮ್ಪುರ್ಖೇರಿಯಲ್ಲಿ ಬುಧವಾರ ಇಬ್ಬರು ಯುವತಿಯರ ಶರೀರ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆ ಬೆಳಕಿಗೆ ಬಂದೊಡನೆ, ತೀವ್ರ ಪ್ರತಿಭಟನೆಗಳಾಗಿದ್ದು, ಬಾಲಕಿಯರ ತಂದೆ ಮಕ್ಕಳ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಈ ಘಟನೆ ನಡೆಯಲು ಕಾರಣರಾದವರನ್ನು ಗಲ್ಲಿಗೇರಿಸಬೇಕೆಂದು ಸಂತ್ರಸ್ತೆಯರ ಪೋಷಕರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ಕುಟುಂಬ ಸದಸ್ಯರಿಗೆ ಸರ್ಕಾರ ೧ ಕೋಟಿ ರೂಪಾಯಿ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡಬೇಕೆಂದು ಆಗ್ರಹಿಸಿದ್ದಾರೆ. ನನ್ನ ಮಕ್ಕಳನ್ನು ಮನೆಯಿಂದ ಎಳೆದೊಯ್ದು, ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾರೆ. ನಮಗೆ ನ್ಯಾಯ ಬೇಕು. ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ನಿವೃತ್ತಿ ಘೋಷಿಸಿದ ರೋಜರ್ ಫೆಡರರ್
ಲಂಡನ್, ಸೆ. ೧೫: ಸೆರೆನಾ ವಿಲಿಯಮ್ಸ್ ನಿವೃತ್ತಿಯ ಬೆನ್ನಲ್ಲೇ ನಲವತ್ತೊಂದು ವರ್ಷದ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅವರು ಗುರುವಾರ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಪುರುಷರ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾದ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಅವರು ತಮ್ಮ ವೃತ್ತಿಜೀವನ ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ. ಮುಂದಿನ ವಾರ ನಡೆಯುವ ಲೇವರ್ ಕಪ್ ತನ್ನ ವೃತ್ತಿಜೀವನದ ಕೊನೆಯ ಎಟಿಪಿ ಪಂದ್ಯಾವಳಿಯಾಗಿದ್ದು, ಅದರ ನಂತರ ಯಾವುದೇ ಗ್ರ್ಯಾಂಡ್ ಸ್ಲಾಮ್ ಅಥವಾ ಟೂರ್ ಈವೆಂಟ್ಗಳಲ್ಲಿ ಭಾಗವಹಿಸುವುದಿಲ್ಲ ಎಂದು ಫೆಡರರ್ ತಿಳಿಸಿದ್ದಾರೆ. ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ನಾನು ಕಳೆದ ಮೂರು ವರ್ಷಗಳಿಂದ ಗಾಯಗಳು ಮತ್ತು ಶಸ್ತçಚಿಕಿತ್ಸೆಗಳ ರೂಪದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದೇನೆ. ನಾನು ಸಂಪೂರ್ಣ ಸ್ಪರ್ಧಾತ್ಮಕ ರೂಪಕ್ಕೆ ಮರಳಲು ಶ್ರಮಿಸಿದ್ದೇನೆ. ಆದರೆ ನನ್ನ ದೇಹದ ಸಾಮರ್ಥ್ಯಗಳು ಮತ್ತು ಮಿತಿಗಳು, ಅದರ ಸಂದೇಶ ನನಗೆ ತಿಳಿದಿದೆ. ನನಗೆ ಈಗ ೪೧ ವರ್ಷ ಎಂದು ಫೆಡರರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊAಡ ಸಂದೇಶದಲ್ಲಿ ತಿಳಿಸಿದ್ದಾರೆ. ನಾನು ೨೪ ವರ್ಷಗಳಲ್ಲಿ ೧,೫೦೦ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್ ನಾನು ಕನಸು ಕಂಡಿರುವುದಕ್ಕಿAತ ಹೆಚ್ಚು ಉದಾರವಾಗಿ ನನ್ನನ್ನು ನಡೆಸಿಕೊಂಡಿದೆ ಮತ್ತು ನನ್ನ ಸ್ಪರ್ಧಾತ್ಮಕ ವೃತ್ತಿಜೀವನ ಕೊನೆಗೊಳಿಸುವ ಸಮಯ ಈಗ ಬಂದಿದೆ ಎಂದು ಹೇಳಿದ್ದಾರೆ. ಮುಂದಿನ ವಾರ ಲಂಡನ್ನಲ್ಲಿ ನಡೆಯಲಿರುವ ಲೇವರ್ ಕಪ್ ನನ್ನ ಅಂತಿಮ ಪಂದ್ಯಾವಳಿ ಆಗಿರುತ್ತದೆ. ನಾನು ಭವಿಷ್ಯದಲ್ಲಿ ಹೆಚ್ಚು ಟೆನಿಸ್ ಆಡುತ್ತೇನೆ, ಆದರೆ ಯಾವುದೇ ಗ್ರಾಂಡ್ ಸ್ಲಾಮ್ಗಳಲ್ಲಿ ಅಥವಾ ಟೂರ್ ಈವೆಂಟ್ಗಳಲ್ಲಿ ಭಾಗವಹಿಸುವುದಿಲ್ಲ ಎಂದು ಫೆಡರರ್ ತಿಳಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹತ್ಯೆಗೆ ವಿಫಲ ಯತ್ನ
ಮಾಸ್ಕೋ, ಸೆ. ೧೫: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹತ್ಯೆಗೆ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಯೂರೋ ವೀಕ್ಲೀ ಈ ಮಾಹಿತಿಯನ್ನು ವರದಿ ಮಾಡಿದ್ದು, ವರದಿಯ ಪ್ರಕಾರ, ಪುಟಿನ್ ಈ ದಾಳಿಯಲ್ಲಿ ಯಾವುದೇ ಅಪಾಯವಾಗದೇ ಪಾರಾಗಿದ್ದಾರೆ. ಈ ಘಟನೆಗೆ ಸಂಬAಧಿಸಿದAತೆ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ. ರಷ್ಯಾದಲ್ಲಿ ಮಾಧ್ಯಮಗಳಿಗೆ ನಿರ್ಬಂಧವಿದ್ದು, ಹತ್ಯೆ ಯತ್ನ ಯಾವಾಗ ನಡೆಯಿತು ಎಂಬುದರ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಈ ಘಟನೆ ಸಂಬAಧ ಒಂದಷ್ಟು ಮಂದಿಯನ್ನು ಬಂಧಿಸಲಾಗಿದೆ. ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಪುಟಿನ್ ಸಂಚರಿಸುತ್ತಿದ್ದ ಕಾರಿನ ಎಡ ಭಾಗದ ಚಕ್ರದ ಬಳಿ ಜೋರಾದ ಶಬ್ದವಾಗಿದ್ದು, ಬೆಂಗಾವಲು ವಾಹನಗಳ ಪೈಕಿ ಮೊದಲ ವಾಹನಕ್ಕೆ ಆಂಬುಲೆನ್ಸ್ ಅಡ್ಡ ಬಂದಿದೆ, ಏಕಾಏಕಿ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಎರಡನೇ ವಾಹನ ನಿಲ್ಲಿಸದೇ ವೇಗವಾಗಿ ಸಂಚರಿಸಿದೆ ಎಂದು ಯುರೋ ವೀಕ್ಲೀ ವರದಿಯಲ್ಲಿ ಹೇಳಿದೆ.