ಸೋಮವಾರಪೇಟೆ, ಸೆ. ೧೫: ತಾಲೂಕಿನ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಗಾಲು ಗ್ರಾಮದಲ್ಲಿ ದಲಿತರೇ ಹೆಚ್ಚಾಗಿದ್ದು, ಹಲವು ಸಮಸ್ಯೆಗ ಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಗ್ರಾಮದ ಸಮಸ್ಯೆಗಳನ್ನು ಪರಿಹರಿಸು ವಂತೆ ಸಂಬAಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ, ಪರಿಹರಿಸಲು ಯಾರೂ ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ರಸ್ತೆಯ ಅಲ್ಲಲ್ಲಿ ಗುಂಡಿ ಬಿದ್ದಿದೆ. ಶೀತ ಪ್ರದೇಶವಾಗಿರುವುದರಿಂದ ರಸ್ತೆ ಮಾಡಿದ ಒಂದೆರಡು ತಿಂಗಳಿನಲ್ಲಿಯೇ ಕಿತ್ತು ಗುಂಡಿಗಳಾಗುತ್ತಿವೆ. ಎರಡೂ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ಹಾಗೂ ಮನೆಗಳ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಅಲ್ಲಲ್ಲಿ ನೀರು ಸಂಗ್ರಹವಾಗುವುದರಿAದ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಇಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ನೀರು ಸರಾಗವಾಗಿ ಹರಿಯಲು ಎರಡೂ ಬದಿಯಲ್ಲಿ ಚರಂಡಿ ಮಾಡಿಕೊಡುವಂತೆ ಜನಪ್ರತಿನಿಧಿಗಳಲ್ಲಿ ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ, ನಮ್ಮ ಸಮಸ್ಯೆಗಳನ್ನು ಕೇಳುವ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳಿಲ್ಲ ಎಂದು ಕಣಗಾಲು ಗ್ರಾಮದ ನಿವಾಸಿ ರವಿನಂದನ್ ದೂರಿದರು. ಇದೇ ಗ್ರಾಮದ ಸುತ್ತಲೂ ರಸ್ತೆ, ಚರಂಡಿ ಸೇರಿದಂತೆ ಯೋಜನೆ ಗಳನ್ನು ಉದ್ಘಾಟನೆ ಮಾಡಲು ಬಂದು ಹೋಗುವ ಶಾಸಕರಿಗೆ ನಮ್ಮ ಸಮಸ್ಯೆ ಕಾಣುತ್ತಿಲ್ಲ ಎಂದು ಗ್ರಾಮದ ಪ್ರೇಮ್ ಕುಮಾರ್, ಚೇತನ್, ಶುಭಾ, ಲೋಲಾಕ್ಷಿ ಅವರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ಇನ್ನಿತರ ಸಮಸ್ಯೆಗಳಿವೆ. ಮತ ನೀಡಿದ ತಪ್ಪಿಗೆ ರಸ್ತೆ ಬದಿಯಲ್ಲಿ ನಿಲ್ಲುವ ಕೊಳಚೆ ನೀರಿನ ವಾಸನೆ, ಸೊಳ್ಳೆಗಳೊಂದಿಗೆ ಜೀವನ ನಡೆಸುವಂತಾಗಿದೆ. ಗ್ರಾಮಕ್ಕೆ ಭೇಟಿಕೊಟ್ಟು ಸಮಸ್ಯೆ ಆಲಿಸಲು ಜನಪ್ರತಿನಿಧಿಗಳಿಗೆ ಸಮಯ ಸಿಕ್ಕಿಲ್ಲ ಎಂದು ಆಲೂರುಸಿದ್ಧಾಪುರ- ಕಣಗಾಲು ಭೀಮ ಭರತ ಯುವಕ ಸಂಘದ ಅಧ್ಯಕ್ಷ ಆಶುಕುಮಾರ್ ಸೇರಿದಂತೆ ಇತರರು ಆರೋಪಿಸಿದ್ದು, ತಕ್ಷಣ ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.