ಗೋಣಿಕೊಪ್ಪಲು, ಸೆ. ೧೫: ಗ್ರಾಮೀಣ ಭಾಗದ ಪ್ರತಿಭೆ ಗೋಣಿಕೊಪ್ಪಲುವಿನ ಮೇಘನಾ ಅಂತರರಾಷ್ಟಿçÃಯ ನೆಟ್‌ಬಾಲ್ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಭಾರತಕ್ಕೆ ೮ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಮೇಘನಾ ಸಿಂಗಪೂರ್‌ನಲ್ಲಿ ನಡೆದ ಏಷ್ಯಾನ್ ನೆಟ್‌ಬಾಲ್ ಚಾಂಪಿಯನ್ ಶಿಫ್‌ನಲ್ಲಿ ಭಾರತ ತಂಡವನ್ನು ಉಪನಾಯಕಿಯಾಗಿ ಮುನ್ನಡೆಸಿದ್ದಳು. ಕ್ರೀಡೆಯನ್ನು ಮುಗಿಸಿ ಸಿಂಗಾಪೂರ್‌ನಿAದ ತವರು ಜಿಲ್ಲೆ ಕೊಡಗಿಗೆ ಆಗಮಿಸುತ್ತಿದ್ದಂತೆಯೇ ಗಡಿ ಭಾಗ ತಿತಿಮತಿ ಸಮೀಪದ ಆನೆ ಚೌಕೂರು ಗೇಟ್‌ಬಳಿ ಮೇಘನಾಳನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಯಿತು.

ಗೋಣಿಕೊಪ್ಪಲುವಿನ ಶಿವಾಜಿ ಯುವ ಸೇನೆಯ ಅಧ್ಯಕ್ಷ ಅಣ್ಣಪ್ಪ ಹಾಗೂ ಪದಾಧಿಕಾರಿಗಳು, ತಿತಿಮತಿ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಹಾಗೂ ಸಾರ್ವಜನಿಕರು ಗೇಟ್ ಬಳಿ ಆತ್ಮೀಯವಾಗಿ ಮೇಘನಾಳನ್ನು ಬರಮಾಡಿಕೊಂಡರು. ನಂತರ ತೆರೆದ ಜೀಪಿನಲ್ಲಿ ಮೇಘನಾಳನ್ನು ಗೋಣಿಕೊಪ್ಪ ನಗರಕ್ಕೆ ಕರೆ ತರಲಾಯಿತು. ಆರ್‌ಎಂಸಿ ಬಳಿ ಮಹಿಳೆಯರು ಮೇಘನಾಳಿಗೆ ಆರತಿ ಬೆಳಗಿ ಬರಮಾಡಿಕೊಂಡರು.

ಪಟ್ಟಣದಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಹಾಗೂ ನಾಗರಿಕರ ಪರವಾಗಿ ಫಲ ತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಕಾಶ್ ಗ್ರಾಮೀಣ ಪ್ರತಿಭೆ ಅಂತರಾಷ್ಟಿçÃಯ ಮಟ್ಟದಲ್ಲಿ ಬೆಳಕು ಚೆಲ್ಲುವ ಮೂಲಕ ದೇಶಕ್ಕೆ ಹೆಸರು ತಂದಿದ್ದಾಳೆ. ಇದರಿಂದ ಕ್ರೀಡೆಯ ತವರೂರಾದ ಕೊಡಗು ಜಿಲ್ಲೆಗೂ ಹೆಸರು ಬಂದಿದೆ. ಮುಂದೆ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದರು.

ಅಂಗನವಾಡಿ ಕಾರ್ಯಕರ್ತರ ನೌಕರರ ಸಂಘದ ಅಧ್ಯಕ್ಷೆ ಸುಮಿತ್ರ ಮಾತನಾಡಿ ಮೇಘನಾಳ ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಗ್ರಾಮೀಣ ಭಾಗದಿಂದ ತೆರಳಿ ಇಂದು ಅಂತರರಾಷ್ಟಿçÃಯ ಮಟ್ಟದಲ್ಲಿ ಕೊಡಗಿನ ಕುವರಿ ಮೇಘನಾ ಹೆಸರು ಮಾಡಿದ್ದಾಳೆ ಎಂದು ಸಾಧನೆಯನ್ನು ಪ್ರಶಂಸಿಸಿದರು.

ಗೋಣಿಕೊಪ್ಪ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಯಿತು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಜಿ.ಕೆ. ಗೀತಾ, ರಾಮಕೃಷ್ಣ, ಕೊಣಿಯಂಡ ಬೋಜಮ್ಮ, ಸೌಮ್ಯ ಬಾಲು, ನೂರೆರ ರತಿ ಅಚ್ಚಪ್ಪ, ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳಾದ ಉಷಾ, ಸಾವಿತ್ರಿ, ಲತ, ವೇದಾವತಿ, ವನಿತಾ, ಶೀಲಾವತಿ ಸೇರಿದಂತೆ ಕಾರ್ಯಕರ್ತೆಯರು ಇದ್ದರು.

ಉತ್ತಮ ವೇದಿಕೆ ಸಿಗಲಿ

ಅಂತರರಾಷ್ಟಿçÃಯ ಕ್ರೀಡೆಯಲ್ಲಿ ಭಾಗವಹಿಸಿದ ನಂತರ ತವರಿಗೆ ಆಗಮಿಸಿದ ಮೇಘನಾ ಮಾದ್ಯಮದೊಂದಿಗೆ ಮಾತನಾಡಿ ಇಂತಹ ಸ್ವಾಗತವನ್ನು ನಾನೆಂದು ಮರೆಯಲಾರೆ. ಇದರಿಂದಾಗಿ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಹುಮ್ಮಸ್ಸು ಬಂದಿದೆ. ಮೊದಲ ಬಾರಿಗೆ ಭಾರತ ದೇಶವನ್ನು ನೆಟ್‌ಬಾಲ್ ಮೂಲಕ ಪ್ರತಿನಿಧಿಸಿದ್ದೆ. ಉಪನಾಯಕಿಯಾಗಿ ಕ್ರೀಡೆಯಲ್ಲಿ ಭಾಗವಹಿಸಿ ಭಾರತ ದೇಶಕ್ಕೆ ೮ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ. ಕೊಡಗಿನಲ್ಲಿ ನಾನಾ ಪ್ರತಿಭೆಗಳು ಅಡಗಿವೆ. ಇವರಿಗೆ ಉತ್ತಮ ವೇದಿಕೆ ಸಿಗುವಂತಾಗಬೇಕು ಸರ್ಕಾರ ಕ್ರೀಡೆಗೆ ಇನ್ನಷ್ಟು ಒತ್ತು ನೀಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುವಂತಾಗಬೇಕು. ಮೊದಲ ಬಾರಿಗೆ ಅಂತರರಾಷ್ಟಿçÃಯ ಮಟ್ಟದಲ್ಲಿ ಸಿಂಗಾಪುರದ ಮೈದಾನದಲ್ಲಿ ಆಡಿದ ಅನುಭವ ರೋಮಾಂಚನ ತಂದಿದೆ ಎಂದರು.

ಗೋಣಿಕೊಪ್ಪಲುವಿನ ಶಿವಾಜಿ ಯುವ ಸೇನೆಯ ಅಧ್ಯಕ್ಷ ಅಣ್ಣಪ್ಪ ಮಾತನಾಡಿ; ಈ ದೇಶಕ್ಕೆ ಕೀರ್ತಿ ತಂದ ಮೇಘನಾಳನ್ನು ಗೌರವಿಸುವ ಅವಕಾಶ ನಮಗೆ ಸಿಕ್ಕಿದೆ. ಮೇಘನಾಳು ಪ್ರತಿ ಕ್ರೀಡಾ ಪಟುವಿಗೆ ಮಾದರಿಯಾಗಬೇಕು. ದೇಶದ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಬೇಕು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಗಡಿಯಲ್ಲಿ ಮೇಘನಾಳನ್ನು ಸ್ವಾಗತಿಸಿದ ಸಂದರ್ಭ ಶಿವಾಜಿ ಸೇನೆಯ ಕಾರ್ಯಾಧ್ಯಕ್ಷ ಸಿಂಗಿ ಸತೀಶ್, ಖಜಾಂಜಿ ಸ್ವಾಮಿ, ಉಪಾಧ್ಯಕ್ಷರಾದ ಕಿಶೋರ್, ಜಂಟಿ ಕಾರ್ಯದರ್ಶಿ ವಿನೋದ್,ಸದಸ್ಯರಾದ ಯೋಗೇಶ್, ಅಕ್ಷಯ್, ವಿದ್ವಾನ್, ಸಿಜು, ಸೇರಿದಂತೆ ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಅನೂಪ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಕಳೆದ ಎರಡು ವರ್ಷಗಳಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ತೆಲಂಗಾಣ,ಹರಿಯಾಣ,ಹಿಮಾಚಲ ಪ್ರದೇಶ ಹಾಗೂ ಚತ್ತೀಸ್‌ಘÀಡದಲ್ಲಿ ತನ್ನ ಪ್ರದರ್ಶನವನ್ನು ತೋರುವ ಮೂಲಕ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದ ಯುವತಿ ಇದೀಗ ಅಂತರರಾಷ್ಟಿçÃಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾಳೆ. ಗೋಣಿಕೊಪ್ಪಲುವಿನ ಬಿ.ಎ. ಚೆನ್ನಪ್ಪ ಪೂಜಾರಿ ಹಾಗೂ ಬಿ.ಸಿ. ನಳಿನಾಕ್ಷಿ ದಂಪತಿಯ ಪುತ್ರಿಯಾಗಿರುವ ಬಿ.ಸಿ. ಮೇಘನಾ ಎಂ.ಕಾA. ಮೊದಲ ವರ್ಷದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

-ಹೆಚ್.ಕೆ. ಜಗದೀಶ್